ರಸ್ತೆ-ತಡೆಗೋಡೆ, ಚರಂಡಿ ನಿರ್ಮಾಣಕ್ಕೆ ಸೂಚನೆ
ಕೊಡಗು

ರಸ್ತೆ-ತಡೆಗೋಡೆ, ಚರಂಡಿ ನಿರ್ಮಾಣಕ್ಕೆ ಸೂಚನೆ

December 5, 2018

ಮಡಿಕೇರಿ:  ಮುಂದಿನ ಮುಂಗಾರು ಮಳೆಗೆ ಮಣ್ಣು ಕುಸಿಯದಂತೆ ರಸ್ತೆಗೆ ತಡೆಗೋಡೆ ಹಾಗೂ ಚರಂಡಿ ನಿರ್ಮಾಣ ಮಾಡುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯ ದರ್ಶಿ ಅನ್ಬುಕುಮಾರ್ ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಮಂಗಳವಾರ ಅಧಿಕಾರಿಗಳೊಂ ದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಮುಂದಿನ ಮುಂಗಾರು ಮಳೆಗಾಲದ ಅವಧಿಯಲ್ಲಿ ಪ್ರಸಕ್ತ ವರ್ಷ ಸುರಿದ ಅರ್ಧ ದಷ್ಟು ಮಳೆ ಸುರಿದರು ಬರೆ ಕುಸಿಯುವ ಸಾಧ್ಯತೆ ಇದೆ. ಆದ್ದರಿಂದ ರಸ್ತೆ ನಿರ್ಮಿಸು ವಾಗ ತಡೆಗೋಡೆ ಹಾಗೂ ಚರಂಡಿ ಯನ್ನು ಕಡ್ಡಾಯವಾಗಿ ನಿರ್ಮಾಣ ಮಾಡ ಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯ ದರ್ಶಿ ಸಲಹೆ ಮಾಡಿದರು.

ಪ್ರಕೃತಿ ವಿಕೋಪ ಸಂದರ್ಭದಲ್ಲಿ ಚುರು ಕಾಗಿ ಕೆಲಸ ನಡೆಯಿತು. ಆದರೆ ಇತ್ತೀಚೆಗೆ ಆಮೆಗತಿಯಲ್ಲಿ ಕಾಮಗಾರಿಗಳು ನಡೆಯು ತ್ತಿವೆ ಎಂಬ ದೂರುಗಳು ಕೇಳಿ ಬರುತ್ತಿದೆ. ಆದ್ದರಿಂದ ಪ್ರಕೃತಿ ವಿಕೋಪ ಸಂದರ್ಭ ದಲ್ಲಿ ಕಾರ್ಯನಿರ್ವಹಿಸಿದಂತೆ ಈ ಸಂದರ್ಭ ದಲ್ಲಿಯೂ ಸಹ ಸಮರೋಪಾದಿಯಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯ ದರ್ಶಿ ನಿರ್ದೇಶನ ನೀಡಿದರು.

ಇನ್ನು ಐದಾರು ತಿಂಗಳಲ್ಲಿ ಮುಂಗಾರು ಮಳೆ ಆರಂಭವಾಗಲಿದೆ. ಆದ್ದರಿಂದ ಮುಂದಿನ ಐದು ತಿಂಗಳಲ್ಲಿ ಕಾಮಗಾರಿ ಗಳನ್ನು ಪೂರ್ಣಗೊಳಿಸುವಂತೆ ಸಂಬಂಧ ಪಟ್ಟ ಎಂಜಿನಿಯರ್‍ಗಳಿಗೆ ಅನ್ಬುಕುಮಾರ್ ಸೂಚನೆ ನೀಡಿದರು.

ಸರ್ಕಾರ ತಮ್ಮ ಇಲಾಖೆಗಳಿಗೆ ಹಣ ಬಿಡು ಗಡೆ ಮಾಡಿದೆ. ಕಾಮಗಾರಿ ಚುರುಕು ಪಡೆ ಯದಿದ್ದರೆ ಹೊಣೆ ಯಾರು, ಆದ್ದರಿಂದ ಪಾರದರ್ಶಕವಾಗಿ ಮತ್ತು ನಿಯಮಾನು ಸಾರ ಹಣ ಬಳಕೆ ಮಾಡಬೇಕು. ಯಾವುದೇ ರೀತಿಯ ಲೋಪ ಕಂಡು ಬರದಂತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ತಿಳಿಸಿದರು.

ಪ್ರವಾಹ ಹಾಗೂ ಭೂ ಕುಸಿತದಿಂ ದಾಗಿ ಹಲವು ಸಮಸ್ಯೆಗಳು ಉಂಟಾದವು. ಹಲವು ಕುಟುಂಬಗಳು ಮನೆ-ಮಠ ಕಳೆದುಕೊಂಡು ನಿರಾಶ್ರಿತರಾದರು, ಬೆಳೆ ಹಾನಿ, ಸಾರಿಗೆ ಸಂಪರ್ಕ ಕಡಿತಗೊಂ ಡಿತು. ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು ತೊಂದರೆ ಉಂಟಾಯಿತು. ಪ್ರವಾಸೋದ್ಯಮ ಇಳಿಮುಖವಾಯಿತು. ಹೀಗೆ ಹಲವು ರೀತಿಯ ಸಮಸ್ಯೆಗಳು ಉಲ್ಬಣಗೊಂಡವು. ಆದ್ದರಿಂದ ರಸ್ತೆ, ಶಾಲಾ ಕಟ್ಟಡಗಳು, ಅಂಗನವಾಡಿ ಕಟ್ಟಡ ಯಾವುದೇ ಕಾಮಗಾರಿಗಳನ್ನು ವಿಳಂಬ ಮಾಡದೆ ಶೀಘ್ರದಲ್ಲಿ ಕೈಗೆತ್ತಿಕೊ ಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯ ದರ್ಶಿ ನಿರ್ದೇಶನ ನೀಡಿದರು.

ಸಣ್ಣ ಮತ್ತು ಬೃಹತ್ ನೀರಾವರಿ ಕಾಮ ಗಾರಿಗಳು, ನಗರಾಭಿವೃದ್ಧಿ ವ್ಯಾಪ್ತಿಯಲ್ಲಿನ ಕಾಮಗಾರಿಗಳು ಸೇರಿದಂತೆ ಎಲ್ಲಾ ಕಾಮ ಗಾರಿಗಳ ಚಿತ್ರಣ ಸಹಿತ ಮಾಹಿತಿಯನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್‍ಐಸಿ) ವೆಬ್‍ಸೈಟ್‍ನಲ್ಲಿ ಅಪ್‍ಡೇಟ್ ಮಾಡಬೇಕು. ಇದರಲ್ಲಿ ಕಾಮಗಾರಿಯ ವೆಚ್ಚ ಮತ್ತಿತರ ಅಂಶ ಒಳಗೊಂಡಿರಬೇಕು ಎಂದು ಅವರು ತಿಳಿಸಿದರು.

ಪ್ರಕೃತಿ ವಿಕೋಪದಿಂದಾಗಿ ಎಷ್ಟು ಮನೆ ಗಳು ಹಾನಿಯಾಗಿವೆ, ಪೂರ್ಣ ಮನೆ ಹಾನಿ, ಭಾಗಶಃ ಮನೆ ಹಾನಿಗಳು ಎಷ್ಟು, ಈಗಾಗಲೇ ಎಷ್ಟು ಸಂತ್ರಸ್ತ ಕುಟುಂಬಗ ಳಿಗೆ ಪರಿಹಾರ ನೀಡಲಾಗಿದೆ, ಬಾಕಿ ಎಷ್ಟು ಎಂಬ ನಿಖರ ಮಾಹಿತಿ ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ ನೀಡಿದರು. ಯೋಜನೆಗಳ ಸರ್ಮಪಕವಾಗಿ ನಿರ್ವಹಿಸಿ ಕಾಮಗಾರಿಯ ವೇಗವನ್ನು ಪಡೆದುಕೊಳ್ಳುವಂತೆ ಮಾಡಬೇಕು ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಮಾತನಾಡಿ, ಬೆಳೆ ಹಾನಿ ಸಂಬಂಧಿಸಿದಂತೆ ಈಗಾಗಲೇ ಸರ್ವೇ ಕಾರ್ಯ ನಡೆದಿದ್ದು, ಬೆಳೆ ಹಾನಿ ಬಗ್ಗೆ ಬಿಟ್ಟು ಹೋಗಿದ್ದಲ್ಲಿ ಸರ್ವೇ ಮಾಡಿ ಸೇರಿಸುವಂತೆ ಅವರು ಸಲಹೆ ಮಾಡಿದರು.
ಜಿಪಂ ಸಿಇಒ ಕೆ.ಲಕ್ಷ್ಮಿಪ್ರಿಯ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಂಜು ನಾಥ್, ಜಯ, ಲೋಕೋಪಯೋಗಿ ಇಲಾಖೆ ಎಇಇ ನಟೇಶ್, ಜಿಪಂ ಇಇ ರೇವಣ್ಣವರ್, ಸೆಸ್ಕ್ ಇಇ ಸೋಮಶೇಖರ್, ನಗರಾಭಿ ವೃದ್ಧಿ ಯೋಜನಾ ನಿರ್ದೇಶಕ ಗೋಪಾ ಲಕೃಷ್ಣ, ಡಿಎಚ್‍ಒ ರಾಜೇಶ್, ಜಗದೀಶ್ ತಹಶೀಲ್ದಾರರು ಇತರರು ಹಲವು ಮಾಹಿತಿ ನೀಡಿದರು.

Translate »