Tag: KR Nagar

ಸೆ.22ರಿಂದ ಕೆ.ಆರ್.ಕ್ಷೇತ್ರದಲ್ಲಿ ಮನೆ ಮನೆ ದಸರಾ
ಮೈಸೂರು

ಸೆ.22ರಿಂದ ಕೆ.ಆರ್.ಕ್ಷೇತ್ರದಲ್ಲಿ ಮನೆ ಮನೆ ದಸರಾ

September 14, 2019

ಮೈಸೂರು, ಸೆ.13(ಎಸ್‍ಬಿಡಿ)- ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಸೆ.22ರಿಂದ 27ರೊಳಗೆ ಮನೆ ಮನೆ ದಸರಾ ನಡೆಸುವಂತೆ ಶಾಸಕ ಎಸ್.ಎ. ರಾಮದಾಸ್ ಹೇಳಿದರು. ಶುಕ್ರವಾರ ಕ್ಷೇತ್ರ ವ್ಯಾಪ್ತಿಯ ನಗರಪಾಲಿಕೆ ಸದಸ್ಯರೊಂದಿಗೆ ಸಭೆ ನಡೆಸಿದ ಅವರು, ಕ್ಷೇತ್ರದ ಎಲ್ಲಾ 19 ವಾರ್ಡ್‍ಗಳಲ್ಲೂ ಸೆ.22ರಿಂದ 27 ರೊಳಗೆ ಮನೆ ಮನೆ ದಸರಾ ಏರ್ಪ ಡಿಸಬೇಕು. ಆಯಾ ವಾರ್ಡ್‍ನ ಕಾರ್ಪೊರೇಟರ್, ರೆವಿನ್ಯೂ ಇನ್ಸ್‍ಪೆಕ್ಟರ್ ಹಾಗೂ ಇಂಜಿನಿಯರ್ ಸಮನ್ವಯತೆಯಿಂದ ಕಾರ್ಯಕ್ರಮ ರೂಪಿಸಬೇಕೆಂದು ಸಲಹೆ ನೀಡಿ ದರು. ಮನೆ ಮನೆಗೆ ಕರಪತ್ರ ಹಂಚುವ ಮೂಲಕ ಎಲ್ಲರಿಗೂ ಕಾರ್ಯಕ್ರಮಗಳ…

ಮತದಾರರ ಋಣ ತೀರಿಸಲು ಮನೆ ಬಾಗಿಲಿಗೇ ಸರ್ಕಾರ
ಮೈಸೂರು

ಮತದಾರರ ಋಣ ತೀರಿಸಲು ಮನೆ ಬಾಗಿಲಿಗೇ ಸರ್ಕಾರ

February 5, 2019

ಕೆ.ಆರ್.ನಗರ: ನಿಮ್ಮ ಸಮಸ್ಯೆಗಳನ್ನು ನಿಮ್ಮ ಮನೆಯ ಬಳಿಯೇ ಪರಿಹರಿಸಿಕೊಡಬೇಕೆಂಬ ಉದ್ದೇಶದಿಂದ ಸರ್ಕಾರವನ್ನೇ ನಿಮ್ಮ ಗ್ರಾಮಕ್ಕೆ ಕರೆತಂದು ನಿಮ್ಮಗಳ ಕೆಲಸವನ್ನು ಮಾಡಿಸುತ್ತಿದ್ದೇನೆ ಎಂದು ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿದರು. ಸಿದ್ಧಾಪುರ ಗ್ರಾಮ ಪಂಚಾಯ್ತಿ ಮುಂಭಾಗ ಜನಸ್ಪಂದನ ಕಾರ್ಯಕ್ರಮವನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ಅವರು, ನಿನ್ನೆ ರಾತ್ರಿ ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಜತೆಗೂಡಿ, ಶ್ರೀರಾಮಪುರ, ಡಿ.ಕೆ.ಕೊಪ್ಪಲು, ಹೊಸಕೊಪ್ಪಲು ಗ್ರಾಮಗಳಲ್ಲಿ ಜನರ ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದರು. ಕಂಚುಗಾರಕೊಪ್ಪಲು ಗ್ರಾಮದ ರಂಗಪ್ಪ ಅವರ ಮನೆಯಲ್ಲಿ ರಾತ್ರಿ ತಂಗಿದ್ದ…

ಫೆ.9ರಿಂದ 3 ದಿನ ‘ಎಡತೊರೆ ಉತ್ಸವ’
ಮೈಸೂರು

ಫೆ.9ರಿಂದ 3 ದಿನ ‘ಎಡತೊರೆ ಉತ್ಸವ’

January 30, 2019

ಕೆ.ಆರ್.ನಗರ: ಪಟ್ಟಣದ ಹೊರವಲಯದ ಹಳೆ ಎಡತೊರೆಯಲ್ಲಿ ಫೆ.9ರಿಂದ 3ದಿನ ನಡೆಯಲಿರುವ ‘ಎಡತೊರೆ ಉತ್ಸವ’ಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಅವರು ಮಂಗಳವಾರ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು. ಶ್ರೀ ಅರ್ಕೇಶ್ವರಸ್ವಾಮಿ ದೇವಸ್ಥಾನದಲ್ಲಿ ಫೆ.12ರಂದು ನಡೆಯಲಿರುವ ಜಾತ್ರಾ ಮಹೋ ತ್ಸವದ ಅಂಗವಾಗಿ ಪ್ರವಾಸೋದ್ಯಮ ಇಲಾಖೆ ವತಿಯಿಂದ 3ದಿನ ಎಡತೊರೆ ಉತ್ಸವ ಹಮ್ಮಿ ಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣದ ಸುತ್ತಾ ಸಚಿವರು ಪರಿಶೀಲಿಸಿದರು. ಪಕ್ಕದಲ್ಲಿರುವ ಕಾವೇರಿ ನದಿಯ ಪಕ್ಕ ನಿರ್ಮಿಸಲು ಉದ್ದೇಶಿಸಿದ್ದ…

ಕೆ.ಆರ್.ನಗರದಲ್ಲಿ ಉಪ ವಿಶ್ವವಿದ್ಯಾನಿಲಯ ಸ್ಥಾಪನೆ
ಮೈಸೂರು

ಕೆ.ಆರ್.ನಗರದಲ್ಲಿ ಉಪ ವಿಶ್ವವಿದ್ಯಾನಿಲಯ ಸ್ಥಾಪನೆ

January 28, 2019

ಕೆ.ಆರ್.ನಗರ: ನನ್ನ ವಿದ್ಯಾಭ್ಯಾಸದ ದಿನದಲ್ಲಿ ಅನುಭವಿಸಿದ ಕಷ್ಟವನ್ನು ನೀವು ಅನುಭವಿಸಬಾರದೆಂಬ ಅಶಯದಿಂದ ಕೆ.ಆರ್. ನಗರ ತಾಲೂಕಿನಲ್ಲಿ ವೃತ್ತಿಪರ ಶಿಕ್ಷಣ ಸೇರಿದಂತೆ ಉಪ ವಿಶ್ವವಿದ್ಯಾ ನಿಲಯ ಪ್ರಾರಂಭಿಸಬೇಕೆಂಬ ನಿರ್ಧಾರಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅನುಮತಿ ನೀಡಿದ್ದಾರೆ ಎಂದು ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಹೇಳಿದರು. ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2018-19ನೇ ಶೈಕ್ಷಣಿಕ ಸಾಲಿನ ಕ್ರೀಡಾ ಮತ್ತು ಸಾಂಸ್ಕøತಿಕ ಚಟುವಟಿಕೆಗಳ ಸಮಾರೋಪ ಸಮಾ ರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ…

ನಾಯಕ ಸಮುದಾಯದ ಅಭಿವೃದ್ಧಿಯಲ್ಲಿ ದಿವಂಗತ ಚಿಕ್ಕಮಾದು ಅವರ ಕೊಡುಗೆ ಅಪಾರ
ಮೈಸೂರು

ನಾಯಕ ಸಮುದಾಯದ ಅಭಿವೃದ್ಧಿಯಲ್ಲಿ ದಿವಂಗತ ಚಿಕ್ಕಮಾದು ಅವರ ಕೊಡುಗೆ ಅಪಾರ

January 9, 2019

ಸಚಿವ ಸಾರಾ ಮಹೇಶ್ ಗುಣಗಾನ ಕೆ.ಆರ್.ನಗರ: ನಾಯಕ ಸಮುದಾಯದ ಸಂಘಟನೆ, ಹೋರಾಟ ಮತ್ತು ಅಭಿವೃದ್ಧಿಯಲ್ಲಿ ಮಾಜಿ ಶಾಸಕ ದಿ.ಚಿಕ್ಕಮಾದುರವರ ಕೊಡುಗೆ ಅಪಾರ ಎಂದು ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿದರು. ಪಟ್ಟಣದ ವಾಲ್ಮೀಕಿ ನಾಯಕ ಸಮುದಾಯ ಭವನದಲ್ಲಿ ನಾಯಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಹುಟ್ಟುವಾಗ ಯಾರು ಹೆಸರು ತರುವುದಿಲ್ಲ. ಆದರೆ ಹೋಗುವಾಗ ನಮ್ಮ ಹೆಸರು ಶಾಶ್ವತವಾಗಿ ಉಳಿಯುವಂತೆ ಕೆಲಸ ಮಾಡಬೇಕು ಎಂದರು….

ಕ್ರಿಸ್‍ಮಸ್: ಸಿಹಿ ವಿತರಿಸಿದ ಸಾ.ರಾ. ಸ್ನೇಹ ಬಳಗ
ಮೈಸೂರು

ಕ್ರಿಸ್‍ಮಸ್: ಸಿಹಿ ವಿತರಿಸಿದ ಸಾ.ರಾ. ಸ್ನೇಹ ಬಳಗ

December 26, 2018

ಕೆ.ಆರ್.ನಗರ: ಪಟ್ಟಣದ ಸುಭಾಶ್‍ನಗರದಲ್ಲಿರುವ ಚರ್ಚ್‍ನಲ್ಲಿ ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಸಾ.ರಾ.ಸ್ನೇಹ ಬಳಗದಿಂದ ಫಾದರ್ ಜಿ.ಜೋಸೆಫ್ ಮತ್ತು ಕ್ರೈಸ್ತ ಬಾಂಧವರಿಗೆ ಸಿಹಿ ವಿತರಿಸಲಾಯಿತು. ಪ್ರತೀ ವರ್ಷದಂತೆ ಸಚಿವ ಸಾ.ರಾ. ಮಹೇಶ್ ಅವರು ಕ್ರೈಸ್ತ ಧರ್ಮದ ಜನತೆಗೆ ಕ್ರಿಸ್‍ಮಸ್ ಹಬ್ಬದ ವಿಶೇಷವಾಗಿ ಸಾ.ರಾ. ಸ್ನೇಹ ಬಳಗದಿಂದ ಸಿಹಿ ವಿತರಣೆ ಕಾರ್ಯ ಕ್ರಮ ಹಮ್ಮಿಕೊಳ್ಳುತ್ತಾ ಬಂದಿದ್ದು, ಈ ಬಾರಿಯೂ ಸಹ ಚರ್ಚ್‍ಗೆ ಭೇಟಿ ನೀಡಿದ ಸ್ನೇಹ ಬಳಗದ ಸದಸ್ಯರು, ಫಾದರ್ ಜಿ. ಜೋಸೆಫ್ ಹಾಗೂ ಕ್ರೈಸ್ತ ಬಾಂಧವರಿಗೆ ಸಿಹಿ ವಿತರಿಸಿ ಶುಭಾಶಯ…

ಮಹದೇಶ್ವರಸ್ವಾಮಿ ದೇಗುಲದ 48ನೇ ವಾರ್ಷಿಕೋತ್ಸವ
ಮೈಸೂರು

ಮಹದೇಶ್ವರಸ್ವಾಮಿ ದೇಗುಲದ 48ನೇ ವಾರ್ಷಿಕೋತ್ಸವ

December 5, 2018

ಕೆ.ಆರ್.ನಗರ: ಪಟ್ಟಣದ ಬಸವೇಶ್ವರ ಬಡಾವಣೆಯ ಮಲೆ ಮಹದೇಶ್ವರಸ್ವಾಮಿ ದೇವಾಲಯದ 48ನೇ ವಾರ್ಷಿಕೋತ್ಸವದ ಅಂಗವಾಗಿ ಮಹ ದೇಶ್ವರಸ್ವಾಮಿ ಉತ್ಸವವು ವಿಜೃಂಭಣೆ ಯಿಂದ ಜರುಗಿತು. ಬೆಳಿಗ್ಗೆ 10 ಗಂಟೆಗೆ ಗಾವಡಗೆರೆ ಗುರು ಲಿಂಗ ಜಂಗಮ ಮಠದ ನಟರಾಜ ಶ್ರೀಗಳು, ಸಚಿವ ಸಾ.ರಾ.ಮಹೇಶ್, ಜಿಪಂ ಸದಸ್ಯ ಡಿ.ರವಿಶಂಕರ್, ಮಾಜಿ ಉಪಾ ಧ್ಯಕ್ಷ ಎ.ಎಸ್.ಚನ್ನಬಸಪ್ಪ ಸೇರಿದಂತೆ ಹಲವು ಮುಖಂಡರು ಉತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಉತ್ಸವವು ಹಾಸನ-ಮೈಸೂರು ರಸ್ತೆ ಮಾರ್ಗ ಸಾಗಿ ಅಂಬೆಡ್ಕರ್ ಪ್ರತಿಮೆ, ಗರುಡಗಂಭ ವೃತ್ತ, ಬಜಾರ್ ರಸ್ತೆ ಮೂಲಕ ಪಟ್ಟಣದ…

ಕೆಆರ್‍ನಗರ ತಾಪಂ ಇಓ ಅಮಾನತಿಗೆ ಆಗ್ರಹ
ಮೈಸೂರು

ಕೆಆರ್‍ನಗರ ತಾಪಂ ಇಓ ಅಮಾನತಿಗೆ ಆಗ್ರಹ

December 5, 2018

ಕೆ.ಆರ್.ನಗರ: ಚುನಾಯಿತ ಜನಪ್ರತಿನಿಧಿಗಳ ಅಧಿಕಾರ ಮೊಟುಕುಗೊಳಿಸಿ, ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ತಾಪಂ ಕಾರ್ಯನಿರ್ವಹಣಾಧಿಕಾರಿ ಯನ್ನು ಕೂಡಲೇ ಅಮಾನತುಗೊಳಿಸಲು ಸಂಬಂಧಪಟ್ಟವರಿಗೆ ಲಿಖಿತವಾಗಿ ದೂರು ನೀಡಲಾಗುವುದು ಎಂದು ತಾಪಂ ಅಧ್ಯಕ್ಷ ಹೆಚ್.ಟಿ.ಮಂಜುನಾಥ್ ತಿಳಿಸಿದರು. ಪಟ್ಟಣದ ತಮ್ಮ ಕಚೇರಿಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಪಂ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿಮೋಹನ್ ಅವರು ತಾಪಂ ಅಧ್ಯಕ್ಷರು, ಸದಸ್ಯರ ಅಧಿಕಾರ ಮೊಟುಕುಗೊಳಿಸಿ, ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ಅಧಿಕಾರ ದುರುಪಯೋಗ ಪಡಿಸಿಕೊಳ್ಳು ತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಲಾಗುವುದು…

ರಸ್ತೆಗಳ ಅಭಿವೃದ್ಧಿಗೆ 100 ಕೋಟಿ ಬಿಡುಗಡೆ
ಮೈಸೂರು

ರಸ್ತೆಗಳ ಅಭಿವೃದ್ಧಿಗೆ 100 ಕೋಟಿ ಬಿಡುಗಡೆ

November 21, 2018

ಕೆ.ಆರ್.ನಗರ: ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗು ವುದು ಎಂದು ರೇಷ್ಮೆ ಮತ್ತು ಪ್ರವಾಸೋ ದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು. ಪಟ್ಟಣದ ಹೆಚ್.ಡಿ.ದೇವೇಗೌಡ ಸಮು ದಾಯ ಭವನದಲ್ಲಿ ನಡೆದ 65ನೇ ಅಖಿಲ ಭಾರತ ಸಹಕಾರ ಸಪ್ತಾಹ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಘಗಳಿಗೆ ರೈತರು ಕಷ್ಟ ಪಟ್ಟು ಕಟ್ಟುವ ಹಣ ದುರ್ಬಳಕೆಯಾಗ ದಂತೆ ಎಚ್ಚರಿಕೆಯಿಂದ ವ್ಯವಹರಿಸಬೇಕು. ಸಹಕಾರಿ ಕ್ಷೇತ್ರ ಜನರ ಸೇವೆ ಮಾಡಲು ಇರುವ…

ಸಮ್ಮಿಶ್ರ ಸರ್ಕಾರ ದಿವಾಳಿಯಾಗಿದ್ದು, ಅಭಿವೃದ್ಧಿ ಕುಂಠಿತಗೊಂಡಿವೆ ಬಿಜೆಪಿ ಮುಖಂಡ ಆರ್.ಅಶೋಕ್ ಟೀಕೆ
ಮೈಸೂರು

ಸಮ್ಮಿಶ್ರ ಸರ್ಕಾರ ದಿವಾಳಿಯಾಗಿದ್ದು, ಅಭಿವೃದ್ಧಿ ಕುಂಠಿತಗೊಂಡಿವೆ ಬಿಜೆಪಿ ಮುಖಂಡ ಆರ್.ಅಶೋಕ್ ಟೀಕೆ

October 24, 2018

ಕೆ.ಆರ್.ನಗರ:  ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದೇ ವೇದಿಕೆಗೆ ಬಂದರೆಂದರೆ ಯಾರನ್ನೂ ನಂಬಲು ಸಾಧ್ಯವಿಲ್ಲ. ಈ ಸರ್ಕಾರಕ್ಕೆ ಭದ್ರತೆ ಎಲ್ಲಿದೆ? ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಆರ್.ಅಶೋಕ್ ಟೀಕಿಸಿದರು. ಪಟ್ಟಣದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ದಿವಾಳಿಯಾಗಿದ್ದು, ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. 38 ಸ್ಥಾನಗಳನ್ನು ಗಳಿಸಿರುವ ಜೆಡಿಎಸ್ ಆಡಳಿತ ನಡೆಸುತ್ತಿದ್ದರೆ, 78 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್ ಪಕ್ಷದ ಮುಖಂಡರು ಅಧಿಕಾರ…

1 2 3 4
Translate »