ಕ್ರಿಸ್‍ಮಸ್: ಸಿಹಿ ವಿತರಿಸಿದ ಸಾ.ರಾ. ಸ್ನೇಹ ಬಳಗ
ಮೈಸೂರು

ಕ್ರಿಸ್‍ಮಸ್: ಸಿಹಿ ವಿತರಿಸಿದ ಸಾ.ರಾ. ಸ್ನೇಹ ಬಳಗ

December 26, 2018

ಕೆ.ಆರ್.ನಗರ: ಪಟ್ಟಣದ ಸುಭಾಶ್‍ನಗರದಲ್ಲಿರುವ ಚರ್ಚ್‍ನಲ್ಲಿ ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಸಾ.ರಾ.ಸ್ನೇಹ ಬಳಗದಿಂದ ಫಾದರ್ ಜಿ.ಜೋಸೆಫ್ ಮತ್ತು ಕ್ರೈಸ್ತ ಬಾಂಧವರಿಗೆ ಸಿಹಿ ವಿತರಿಸಲಾಯಿತು.

ಪ್ರತೀ ವರ್ಷದಂತೆ ಸಚಿವ ಸಾ.ರಾ. ಮಹೇಶ್ ಅವರು ಕ್ರೈಸ್ತ ಧರ್ಮದ ಜನತೆಗೆ ಕ್ರಿಸ್‍ಮಸ್ ಹಬ್ಬದ ವಿಶೇಷವಾಗಿ ಸಾ.ರಾ. ಸ್ನೇಹ ಬಳಗದಿಂದ ಸಿಹಿ ವಿತರಣೆ ಕಾರ್ಯ ಕ್ರಮ ಹಮ್ಮಿಕೊಳ್ಳುತ್ತಾ ಬಂದಿದ್ದು, ಈ ಬಾರಿಯೂ ಸಹ ಚರ್ಚ್‍ಗೆ ಭೇಟಿ ನೀಡಿದ ಸ್ನೇಹ ಬಳಗದ ಸದಸ್ಯರು, ಫಾದರ್ ಜಿ. ಜೋಸೆಫ್ ಹಾಗೂ ಕ್ರೈಸ್ತ ಬಾಂಧವರಿಗೆ ಸಿಹಿ ವಿತರಿಸಿ ಶುಭಾಶಯ ತಿಳಿಸಿದರು.

ಇದೇ ಸಂದರ್ಭದಲ್ಲಿ ಫಾದರ್ ಜಿ.ಜೋಸೆಫ್ ಮಾತನಾಡಿ, ಪ್ರವಾಸೋ ದ್ಯಮ ಮತ್ತು ರೇಷ್ಮೆ ಸಚಿವರಾದ ಸಾ.ರಾ. ಮಹೇಶ್ ಅವರು ಹಲವು ವರ್ಷಗಳಿಂದಲೂ ಕ್ರಿಸ್‍ಮಸ್ ಹಬ್ಬದ ದಿನಗಳಲ್ಲಿ ನಮ್ಮ ಸಮಾಜದ ಬಾಂಧವರಿಗೆಲ್ಲರಿಗೂ ಸಾ.ರಾ. ಸ್ನೇಹ ಬಳಗದಿಂದ ಸಿಹಿ ವಿತರಿಸುತ್ತಿದ್ದಾರೆ. ಇದು ಅವರಲ್ಲಿರುವ ಸರ್ವ ಜನಾಂಗದ ಮೇಲೆ ಇರುವ ಪ್ರೀತಿ ಮತ್ತು ಸೇವಾ ಮನೋಭಾವನೆ ತೋರಿಸುತ್ತದೆ ಎಂದರ ಲ್ಲದೆ, ಭಗವಂತನು ಸಚಿವರಿಗೆ ರಾಜ ಕೀಯದಲ್ಲಿ ಇನ್ನು ಹೆಚ್ಚಿನ ಅಧಿಕಾರ ಸಿಗುವುದರೊಂದಿಗೆ ಆಯಸ್ಸು, ಆರೋಗ್ಯ ಕರುಣಿಸಲಿ ಎಂದು ಭಗವಂತ ಯೇಸು ಕ್ರಿಸ್ತನಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ ಎಂದು ಹೇಳಿದರು.ನಂತರ ಪುರಸಭಾ ಸದಸ್ಯ ಕೆ.ಎಲ್.ಜಗದೀಶ್ ಮಾತನಾಡಿದರು.

ಪುರಸಭೆ ಅಧ್ಯಕ್ಷೆ ಹರ್ಷಲತಾ ಶ್ರೀ ಕಾಂತ್, ಸದಸ್ಯರಾದ ಶಿವಕುಮಾರ್, ಸುಬ್ರಮಣ್ಯ, ಸುಬ್ಬಣ್ಣ, ಕೆ.ಎಲ್.ಜಗದೀಶ್, ಯುವ ಜೆಡಿಎಸ್ ಕಾರ್ಯದರ್ಶಿ ಕಿಶೋರ್, ಹಾಗೂ ಕ್ರೈಸ್ತ ಧರ್ಮದ ಪಿ.ಎಲ್.ರವೀಶ್, ಪೀಟರ್, ದಿಲೀಪ್, ಆನಂದ್, ಸಚಿವರ ಆಪ್ತ ಸಹಾಯಕರಾದ ಅರುಣ್, ಸಂತೋಷ್ ಮತ್ತು ಜೆಡಿಎಸ್ ಮುಖಂಡರಾದ ಕ್ಯಾಂಟೀನ್ ರವಿ, ಪ್ರಗತಿಪರ ರೈತ ಗೋಪಾಲಗೌಡ, ಸೋಮು ಮತ್ತಿತರರಿದ್ದರು.

Translate »