ಮಹದೇಶ್ವರಸ್ವಾಮಿ ದೇಗುಲದ 48ನೇ ವಾರ್ಷಿಕೋತ್ಸವ
ಮೈಸೂರು

ಮಹದೇಶ್ವರಸ್ವಾಮಿ ದೇಗುಲದ 48ನೇ ವಾರ್ಷಿಕೋತ್ಸವ

December 5, 2018

ಕೆ.ಆರ್.ನಗರ: ಪಟ್ಟಣದ ಬಸವೇಶ್ವರ ಬಡಾವಣೆಯ ಮಲೆ ಮಹದೇಶ್ವರಸ್ವಾಮಿ ದೇವಾಲಯದ 48ನೇ ವಾರ್ಷಿಕೋತ್ಸವದ ಅಂಗವಾಗಿ ಮಹ ದೇಶ್ವರಸ್ವಾಮಿ ಉತ್ಸವವು ವಿಜೃಂಭಣೆ ಯಿಂದ ಜರುಗಿತು.

ಬೆಳಿಗ್ಗೆ 10 ಗಂಟೆಗೆ ಗಾವಡಗೆರೆ ಗುರು ಲಿಂಗ ಜಂಗಮ ಮಠದ ನಟರಾಜ ಶ್ರೀಗಳು, ಸಚಿವ ಸಾ.ರಾ.ಮಹೇಶ್, ಜಿಪಂ ಸದಸ್ಯ ಡಿ.ರವಿಶಂಕರ್, ಮಾಜಿ ಉಪಾ ಧ್ಯಕ್ಷ ಎ.ಎಸ್.ಚನ್ನಬಸಪ್ಪ ಸೇರಿದಂತೆ ಹಲವು ಮುಖಂಡರು ಉತ್ಸವಕ್ಕೆ ಚಾಲನೆ ನೀಡಿದರು.
ಬಳಿಕ ಉತ್ಸವವು ಹಾಸನ-ಮೈಸೂರು ರಸ್ತೆ ಮಾರ್ಗ ಸಾಗಿ ಅಂಬೆಡ್ಕರ್ ಪ್ರತಿಮೆ, ಗರುಡಗಂಭ ವೃತ್ತ, ಬಜಾರ್ ರಸ್ತೆ ಮೂಲಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಂಜೆ ದೇವಾಲಯ ತಲು ಪಿತು. ಸಾವಿರಾರು ಭಕ್ತರು ಮೆರವಣಿಗೆ ಯೊಂದಿಗೆ ಸಾಗಿ ಮಹದೇಶ್ವರನಿಗೆ ಜಯಕಾರ ಹಾಕಿದರಲ್ಲದೆ, ಪಟಾಕಿ ಸಿಡಿಸಿ, ಕಲಾ ತಂಡಗಳೊಂದಿಗೆ ಕುಣಿದು ಕುಪ್ಪಳಿಸಿದರು.

ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಸಾಗುವ ವೇಳೆ ಪಟ್ಟಣದ ಜನತೆ ಪೂಜೆ ಸಲ್ಲಿಸಿ, ಹರಕೆ ತೀರಿಸಿದರಲ್ಲದೆ, ಕಾರ್ತಿಕ ಸೋಮವಾರದ ವಿಶೇಷ ಮೆರವಣಿಗೆ ಕಣ್ತುಂಬಿಕೊಂಡರು. ಪಟ್ಟಣದ ವರ್ತಕ ಪಂಚಾಕ್ಷರಿ, ಉದ್ಯಮಿ ಅಡಿಕೆ ಶೈಲಾ ಸೇರಿದಂತೆ ಹತ್ತಾರು ಮಂದಿ ವ್ಯಾಪಾರಿ ಗಳು ತಮ್ಮ ಅಂಗಡಿ ಮುಂಭಾಗದಲ್ಲಿ ಭಕ್ತರಿಗೆ ಪುಳಿಯೋಗರೆ, ಮೊಸರನ್ನ, ಪಾನಕ-ಮಜ್ಜಿಗೆ ವಿತರಿಸಿದರು.

ಸಂಜೆ ದೇವಾಲಯದ ಸಮೀಪದ ದೇವಿರಮ್ಮನವರ ಶಿಶು ವಿಹಾರದ ಆವ ರಣದಲ್ಲಿ ಕೊಂಡೋತ್ಸವ ಮತ್ತು ದೇಗುಲ ಮುಂಭಾಗ ಸಾಲು ಪಂಕ್ತಿ ಅನ್ನದಾಸೋಹ ಏರ್ಪಡಿಸಲಾಗಿತ್ತು. ದೇವಾಲಯಕ್ಕೆ ಮಾಡಿದ್ದ ವಿದ್ಯುತ್ ದೀಪಾಲಂಕಾರ ಕಣ್ಮನ ಸೆಳೆಯಿತು. ಬಾಣ ಬಿರುಸು, ಪಟಾಕಿಗಳ ಪ್ರದರ್ಶನ ಜನಮನ ಸೂರೆಗೊಂಡಿತು.

ಉತ್ಸವದಲ್ಲಿ ಅಖಿಲ ಕರ್ನಾಟಕ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಚಂದ್ರಶೇಖರ್, ನಗರಾಧ್ಯಕ್ಷ ಡಿ.ಸಿ.ಮಂಜುನಾಥ್, ಪುರಸಭಾಧ್ಯಕ್ಷೆ ಹರ್ಷಲತಾ ಶ್ರೀಕಾಂತ್, ಮಾಜಿ ಅಧ್ಯಕ್ಷ ವೈ.ಆರ್.ಪ್ರಕಾಶ್, ಸದಸ್ಯರಾದ ಕೆ.ಪಿ. ಪ್ರಭುಶಂಕರ್, ಟಿ.ಆರ್.ಪ್ರಕಾಶ್, ಮಲ್ಲೇ ಮಹದೇಶ್ವರ ಉತ್ಸವ ಸಮಿತಿ ಅಧ್ಯಕ್ಷ ಆರ್.ಬಿ.ನಾಗರಾಜು, ಸದಸ್ಯರಾದ ವೈ. ಎಸ್.ಸುರೇಶ್, ಆರ್.ಹೆಚ್.ನಟರಾಜು ಇತರರು ಭಾಗವಹಿಸಿದ್ದರು.

Translate »