ವಾಹನ ಡಿಕ್ಕಿ: ಅಪರಿಚಿತ ಸಾವು
ಮೈಸೂರು

ವಾಹನ ಡಿಕ್ಕಿ: ಅಪರಿಚಿತ ಸಾವು

December 5, 2018

ಮೈಸೂರು:  ವಾಹನವೊಂದು ಡಿಕ್ಕಿ ಹೊಡೆದು, ಅಪರಿಚಿತ ವ್ಯಕ್ತಿ ಮೃತಪಟ್ಟಿರುವ ಘಟನೆ ಮೈಸೂರು-ನಂಜನಗೂಡು ರಸ್ತೆಯಲ್ಲಿ ಕಳೆದ ಭಾನುವಾರ ರಾತ್ರಿ ನಡೆದಿದೆ.

ಮಂಡಕಳ್ಳಿ ವಿಮಾನ ನಿಲ್ದಾಣದ ಹಳೇಗೇಟ್ ಬಳಿ, ನಡೆದು ಹೋಗುತ್ತಿದ್ದ ವ್ಯಕ್ತಿಗೆ ವಾಹನವೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಮುಖ ಹಾಗೂ ಎದೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದು, ಆ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿಕ್ಕಿ ಹೊಡೆದ ವಾಹನ ಪತ್ತೆಯಾಗಿಲ್ಲ. ಮೃತಪಟ್ಟಿರುವ ವ್ಯಕ್ತಿಗೆ ಸುಮಾರು 45 ವರ್ಷ ವಯಸ್ಸಾಗಿದ್ದು, ಅರ್ಧ ತೋಳಿನ ಬಿಳಿ ಬಣ್ಣದ ಟಿ ಶರ್ಟ್, ಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಸುಮಾರು 5.2 ಅಡಿ ಎತ್ತರವಿದ್ದಾರೆ. ಮೃತದೇಹವನ್ನು ಮೈಸೂರು ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯ ಶವಾಗಾರದಲ್ಲಿಡಲಾಗಿದೆ.

ಈ ಸಂಬಂಧ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತರ ವಾರಸುದಾರರಿದ್ದಲ್ಲಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ(0821-2444800) ಅಥವಾ ದಕ್ಷಿಣ ಠಾಣೆ(2444955) ಸಂಪರ್ಕಿಸುವಂತೆ ಸಬ್‍ಇನ್‍ಸ್ಪೆಕ್ಟರ್ ಡಿ.ಬಿ.ಜಯಪ್ರಕಾಶ್ ತಿಳಿಸಿದ್ದಾರೆ.

Translate »