ಲಕ್ಷ್ಮೀಪುರಂ ಠಾಣೆ ಪೊಲೀಸರು, ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ
ಮೈಸೂರು

ಲಕ್ಷ್ಮೀಪುರಂ ಠಾಣೆ ಪೊಲೀಸರು, ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ

December 5, 2018

ಮೈಸೂರು: ಅಪ ರಾಧ ತಡೆ ಮಾಸಾಚರಣೆ-2018ರ ಅಂಗ ವಾಗಿ ಲಕ್ಷ್ಮೀಪುರಂ ಠಾಣೆ ಪೊಲೀಸರು ಮತ್ತು ಲಕ್ಷ್ಮೀಪುರಂ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳು ಅಪರಾಧ ತಡೆ ಬಗ್ಗೆ ಮಂಗಳವಾರ ಬಡಾವಣೆ ಜನರಲ್ಲಿ ಜಾಗೃತಿ ಮೂಡಿಸಿದರು.

ನಾರಾಯಣ ಶಾಸ್ತ್ರಿ ರಸ್ತೆಯ ಮಹದೇಶ್ವರ ದೇವಸ್ಥಾನದ ಬಳಿ ಜಾಥಾಗೆ ಕೆ.ಆರ್. ವಿಭಾಗದ ಎಸಿಪಿ ಧರ್ಮಪ್ಪ ಚಾಲನೆ ನೀಡಿದರು. ಈ ವೇಳೆ ಲಕ್ಷ್ಮೀ ಪುರಂ ಠಾಣೆ ಇನ್ಸ್‍ಪೆಕ್ಟರ್ ಕೆ.ಸಿ.ರಘು, ಎಎಸ್‍ಐ ಗೌರಿಶಂಕರ್ ಹಾಗೂ ಸಿಬ್ಬಂದಿ ಗಳಾದ ಕುಮಾರ್ ಸೇರಿದಂತೆ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.

ಜಾಥಾದಲ್ಲಿ ಸರಗಳ್ಳತನ, ರಸ್ತೆ ಸುರಕ್ಷತಾ ನಿಯಮಗಳು ಸೇರಿದಂತೆ ಅಪರಾಧಗಳನ್ನು ತಡೆಗಟ್ಟುವ ಬಗೆ ಕುರಿತು ಅರಿವು ಮೂಡಿಸುವ ಫಲಕ ಗಳನ್ನು ಹಿಡಿದು ಸಾಗಿದ ವಿದ್ಯಾರ್ಥಿಗಳು ಅಪರಾಧ ತಡೆ ಬಗ್ಗೆ 29 ಅಂಶಗಳ್ಳುಳ್ಳ ಕರಪತ್ರವನ್ನು ಸಾರ್ವಜನಿಕರಿಗೆ ನೀಡಿ, ಅರಿವು ಮೂಡಿಸಿದರು.

ಮಹದೇಶ್ವರ ದೇವಸ್ಥಾನ ಮುಂಭಾಗ ದಿಂದ ಆರಂಭಗೊಂಡ ಜಾಥಾ, ಜೈನ್ ಭವನ, ದಿವಾನ್ಸ್ ರಸ್ತೆ, ಚಾಮರಾಜ ಜೋಡಿ ರಸ್ತೆ ಮೂಲಕ ಹಾದು ರಾಮಸ್ವಾಮಿ ವೃತ್ತದಲ್ಲಿ ಅಂತ್ಯಗೊಂಡಿತು.

Translate »