ರಸ್ತೆಗಳ ಅಭಿವೃದ್ಧಿಗೆ 100 ಕೋಟಿ ಬಿಡುಗಡೆ
ಮೈಸೂರು

ರಸ್ತೆಗಳ ಅಭಿವೃದ್ಧಿಗೆ 100 ಕೋಟಿ ಬಿಡುಗಡೆ

November 21, 2018

ಕೆ.ಆರ್.ನಗರ: ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗು ವುದು ಎಂದು ರೇಷ್ಮೆ ಮತ್ತು ಪ್ರವಾಸೋ ದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು.

ಪಟ್ಟಣದ ಹೆಚ್.ಡಿ.ದೇವೇಗೌಡ ಸಮು ದಾಯ ಭವನದಲ್ಲಿ ನಡೆದ 65ನೇ ಅಖಿಲ ಭಾರತ ಸಹಕಾರ ಸಪ್ತಾಹ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಘಗಳಿಗೆ ರೈತರು ಕಷ್ಟ ಪಟ್ಟು ಕಟ್ಟುವ ಹಣ ದುರ್ಬಳಕೆಯಾಗ ದಂತೆ ಎಚ್ಚರಿಕೆಯಿಂದ ವ್ಯವಹರಿಸಬೇಕು. ಸಹಕಾರಿ ಕ್ಷೇತ್ರ ಜನರ ಸೇವೆ ಮಾಡಲು ಇರುವ ಒಳ್ಳೆಯ ಕ್ಷೇತ್ರವಾಗಿದ್ದು, ನಾವು ಅಧಿಕಾರದಲ್ಲಿದ್ದಷ್ಟು ದಿನ ರೈತರು ಹಾಗೂ ಸಾಮಾನ್ಯರಿಗೆ ಒಳ್ಳೆಯ ಸೇವೆಯನ್ನೇ ನೀಡಬೇಕು ಎಂದು ಸಲಹೆ ನೀಡಿದರು.

ನಾನು ತಾಲೂಕಿನಲ್ಲಿ 3 ಬಾರಿ ಶಾಸಕ ನಾಗಿ ಆಯ್ಕೆಯಾಗಿ ಪ್ರಸ್ತುತ ಮಂತ್ರಿಯಾಗಲು ಕ್ಷೇತ್ರದ ಮತದಾರರ ಜತೆ ಸಹಕಾರಿ ಬಂಧು ಗಳೂ ಕಾರಣ. ಸಹಕಾರಿ ಕ್ಷೇತ್ರದಲ್ಲಿ ಬಲಾಢ್ಯ ಸಮುದಾಯಗಳಿಗೆ ಮಾತ್ರ ಅವಕಾಶ ಸಿಗುತ್ತದೆ ಎಂಬ ಆರೋಪವಿದ್ದು, ಇದನ್ನು ಹೋಗಲಾಡಿ ಸಲು ಕಟ್ಟಕಡೆಯ ಸಮುದಾಯಕ್ಕೂ ಅವಕಾಶ ನೀಡಿದ್ದೇನೆ ಎಂದು ಹೇಳಿದರು.

ತಾಲೂಕಿನ ಕಾಳಮ್ಮನ ಕೊಪ್ಪಲು ಗ್ರಾಮಕ್ಕೆ ನದಿಯಿಂದ ಕುಡಿಯುವ ನೀರು ಸರಬರಾಜು, ಸುವರ್ಣ ಗ್ರಾಮ ಯೋಜನೆ ಯಡಿ ರಸ್ತೆ ಅಭಿವೃದ್ಧಿ ಸೇರಿದಂತೆ ದೇವ ಸ್ಥಾನಗಳು, ಸಮುದಾಯ ಭವನಗಳ ನಿರ್ಮಾಣದಂತಹ ಅನೇಕ ಕೆಲಸ ಕಾರ್ಯ ಗಳನ್ನು ಮಾಡಿದ್ದರೂ ಕೆಲವರು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಾರೆ ಎಂದು ವಿಷಾದಿಸಿದರಲ್ಲದೆ, ಆರೋಪ ಮಾಡುವುದನ್ನು ಬಿಟ್ಟು ಅಭಿವೃದ್ಧಿ ಕೆಲಸ ಮಾಡುವವರನ್ನು ಪ್ರೀತಿಸಿ, ಗೌರವಿಸಿ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಹೆಚ್.ವಿ. ರಾಜೀವ್, ನವನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್ ಮಾತನಾಡಿದರು. ಪುರಸಭಾ ಅಧ್ಯಕ್ಷೆ ಹರ್ಷಲತಾ ಶ್ರೀಕಾಂತ್, ಸದಸ್ಯ ಎನ್.ಶಿವ ಕುಮಾರ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ರಮೇಶ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಪ್ರಧಾನ ಕಾರ್ಯದರ್ಶಿ ಮಿರ್ಲೆ ಧನಂಜಯ್, ಪುರ ಸಭೆ ಮಾಜಿ ಅಧ್ಯಕ್ಷ ವೈ.ಆರ್.ಪ್ರಕಾಶ್, ತಹ ಶೀಲ್ದಾರ್ ನಿಖಿತಾ ಎಂ.ಚಿನ್ನಸ್ವಾಮಿ, ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ಉಪ ವ್ಯವಸ್ಥಾಪಕ ಡಾ.ಸಣ್ಣತಮ್ಮೇಗೌಡ ಇನ್ನಿತರರಿದ್ದರು.

Translate »