ಪಿಯು ವಿದ್ಯಾರ್ಥಿಗಳಿಗೆ ಮೈಸೂರು ಜಿಲ್ಲಾ ಮಟ್ಟದ ಸಾಂಸ್ಕøತಿಕ ಸಹಪಠ್ಯ ಸ್ಪರ್ಧೆ
ಮೈಸೂರು

ಪಿಯು ವಿದ್ಯಾರ್ಥಿಗಳಿಗೆ ಮೈಸೂರು ಜಿಲ್ಲಾ ಮಟ್ಟದ ಸಾಂಸ್ಕøತಿಕ ಸಹಪಠ್ಯ ಸ್ಪರ್ಧೆ

November 21, 2018

ಮೈಸೂರು:  ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಎಸ್‍ಬಿಆರ್‍ಆರ್ ಮಹಾ ಜನ ಪದವಿಪೂರ್ವ ಕಾಲೇಜು ಜಂಟಿಯಾಗಿ ಮಂಗಳವಾರ ಮೈಸೂರು ಜಿಲ್ಲಾ ಮಟ್ಟದ ಸಾಂಸ್ಕøತಿಕ ಸಹಪಠ್ಯ ಸ್ಪರ್ಧೆ ಆಯೋಜಿಸಿತ್ತು.

ಮೈಸೂರು ಜಿಲ್ಲೆಯ ವಿವಿಧ ಕಾಲೇಜುಗಳ ಮೊದಲ ಮತ್ತು ದ್ವಿತೀಯ ಪಿಯುಸಿಯ 750 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಕನ್ನಡ ಮತ್ತು ಇಂಗ್ಲಿಷ್ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಭಾವಗೀತೆ, ಏಕಪಾತ್ರಾಭಿನಯ, ರಸಪ್ರಶ್ನೆ, ಜನಪದ ಗೀತೆ, ಚಿತ್ರಕಲೆ, ಭಕ್ತಿಗೀತೆ, ಆಶುಭಾಷಣ ಸ್ಪರ್ಧೆಗಳು ನಡೆದವು.

ಸ್ವಚ್ಛ ಭಾರತ ನಿರ್ಮಾಣದಲ್ಲಿ ಸರ್ಕಾರದ ಪಾತ್ರಕ್ಕಿಂತ ಸಾರ್ವಜನಿಕರ ಸಹಭಾಗಿತ್ವ ಎಷ್ಟು? ಅಧುನಿಕ ತಂತ್ರಜ್ಞಾನದಿಂದ ಪುಸ್ತಕಗಳ ಮಹತ್ವ ಕುಸಿದಿದೆ. ಪರಿಸರದ ಉಳಿವು ನಮ್ಮ ಉಳಿವು, ದೇಶದ ಪ್ರಗತಿಯಲ್ಲಿ ಮಾಧ್ಯಮ ಗಳ ಪಾತ್ರ ಕುರಿತು ಪ್ರಬಂಧ ಸ್ಪರ್ಧೆ, ಪರಿಸರ ಮಾಲಿನ್ಯ ಮತ್ತು ನೈಸರ್ಗಿಕ ವಿಕೋಪ ಕುರಿತು ಚಿತ್ರಕಲಾ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಅತ್ಯುತ್ಸಾಹ ದಿಂದ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಕಾಲೇಜಿನ ವಿವೇಕಾನಂದ ಸಭಾಂ ಗಣದಲ್ಲಿ ಮೈಸೂರು ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ದಯಾನಂದ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿ, ಮಕ್ಕಳಲ್ಲಿರುವ ಸೃಜನ ಶೀಲತೆಗೆ ಮುಕ್ತ ಪ್ರತಿಭೆಗೆ ಅವಕಾಶ ನೀಡುವ ಹಿನ್ನೆಲೆಯಲ್ಲಿ ಸಾಂಸ್ಕøತಿಕ ಸಹ ಪಠ್ಯ ಸ್ಪರ್ಧೆ ಏರ್ಪಡಿಸಿದ್ದು, ವಿದ್ಯಾರ್ಥಿ ಗಳು ಓದುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿಯಿಂದ ತೊಡಗಬೇಕು ಎಂದರು.

ಮಹಾಜನ ವಿದ್ಯಾಸಂಸ್ಥೆಯ ಅಧ್ಯಕ್ಷ ಆರ್.ವಾಸುದೇವ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎಸ್.ಎಂ. ತುಳಸೀದಾಸ್, ಉಪಾಧ್ಯಕ್ಷರಾದ ಡಾ.ಬಿ.ಎನ್.ನಾಗರತ್ನ, ಖಜಾಂಚಿ ವಿ.ನಾಗರಾಜು, ಮಹಾಜನ ಪಿಯು ಕಾಲೇಜಿನ ಪ್ರಾಂಶುಪಾಲರಾದ ಎಸ್.ಉಮಾರಾಣಿ, ಕನ್ನಡ ಉಪನ್ಯಾಸಕ ಸ್ವಾಮಿಗೌಡ, ಸಂಸ್ಕøತ ಉಪನ್ಯಾಸಕ ಗಡ್ಡಿ ಶರಬಪ್ಪ ಇನ್ನಿತರರು ಉಪಸ್ಥಿತರಿದ್ದರು.

Translate »