ಮೈಸೂರು: ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಅನಗತ್ಯ ಗೊಂದಲ ಸೃಷ್ಟಿಸಿ, ಪಿತೂರಿ ನಡೆಸಿ, ಹಿಂದೂಗಳ ಭಾವನೆಗೆ ವಿರುದ್ಧ ವಾಗಿ ವರ್ತಿಸುತ್ತಿರುವ ಕೇರಳದ ಕಮ್ಯು ನಿಸ್ಟ್ ಸರ್ಕಾರವನ್ನು ವಜಾಗೊಳಿಸುವಂತೆ ಮೈಸೂರಿನ ಶಬರಿಮಲೆ ಕ್ಷೇತ್ರ ಸಂರಕ್ಷಣಾ ಕ್ರಿಯಾ ಸಮಿತಿ ಕಾರ್ಯಕರ್ತರು ಮಂಗಳವಾರ ಇಲ್ಲಿನ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕೇರಳ ಸರ್ಕಾರ ಹಾಗೂ ಅಲ್ಲಿನ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶಿ ಸಬೇಕು. ಹಿಂದೂಗಳ ಭಾವನೆಗೆ ಆಗುತ್ತಿರುವ ಧಕ್ಕೆಯನ್ನು ತಪ್ಪಿಸಬೇಕು. ಸಾವಿರಾರು ವರ್ಷ ಗಳಿಂದ ಅಯ್ಯಪ್ಪ ದೇಗುಲದಲ್ಲಿ ನಡೆದು ಕೊಂಡು ಬಂದಿರುವ ಹಿಂದೂ ಪರಂಪರೆಯನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿದರು.
ಶಬರಿಮಲೆ ಭೇಟಿ ಮುನ್ನ 41 ದಿನಗಳ ವ್ರತ ಮಾಡುವುದು ಸಂಪ್ರದಾಯ, ಪರಂಪ ರಾಗತ ಸಂಪ್ರದಾಯವನ್ನು ಕಾಪಾಡಿ, ಸಂಸ್ಕøತಿ, ಸಂಪ್ರದಾಯ, ನಂಬಿಕೆಗಳನ್ನು ಗೌರವಿಸಿ, ಶಬರಿಮಲೆ ಉಳಿಸಿ ಎಂಬಿತ್ಯಾದಿ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.
ಸಂಘ ಪರಿವಾರದ ಮೈಸೂರು ಜಿಲ್ಲಾ ಪ್ರಮುಖ್ ರಾಜೇಶ್, ಕ್ರಿಯಾ ಸಮಿತಿ ಮೈಸೂರು ಜಿಲ್ಲಾ ಕಾರ್ಯದರ್ಶಿ ಪ್ರದೀಶ್‍ಕುಮಾರ್, ವಿಎಚ್‍ಪಿ ಮಾತೃಶಕ್ತಿ ಜಿಲ್ಲಾ ಪ್ರಮುಖ್ ಲತಾ, ದುರ್ಗಾವಾಹಿನಿ ಪ್ರಮುಖ್ ಕುಮಾರಿ, ಬಿಜೆಪಿ ವಿಭಾಗೀಯ ಮುಖ್ಯಸ್ಥ ಎನ್.ವಿ.ಫಣೀಶ್, ಪಕ್ಷದ ನಗರಾಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್, ನಗರಪಾಲಿಕೆ ಸದಸ್ಯ ಸತೀಶ್, ಮುಖಂಡರಾದ ಸೋಮಶೇಖರರಾಜು, ಪ್ರೇಮ್ ಕುಮಾರ್, ಚೇತನ್, ಮಂಜುನಾಥ್ ಇನ್ನಿತ ರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.