Tag: Sabarimala temple

ಶಬರಿಮಲೆಗೆ ಮಹಿಳೆಯರ ಪ್ರವೇಶ  ಹಿಂದಿನ ಸಂಪ್ರದಾಯಕ್ಕೆ ಮರಳಿದ ಕೇರಳ ಸರ್ಕಾರ
ಮೈಸೂರು

ಶಬರಿಮಲೆಗೆ ಮಹಿಳೆಯರ ಪ್ರವೇಶ ಹಿಂದಿನ ಸಂಪ್ರದಾಯಕ್ಕೆ ಮರಳಿದ ಕೇರಳ ಸರ್ಕಾರ

December 4, 2020

ಕೊಚ್ಚಿ, ಡಿ.3- ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆ ಯಲ್ಲಿ ಪೆÇಲೀಸರ ಭದ್ರತೆಯೊಂದಿಗೆ ಶಬರಿಮಲೆ ಅಯ್ಯಪ್ಪ ದೇವ ಸ್ಥಾನಕ್ಕೆ ಇಬ್ಬರು ಮಹಿಳೆಯರಿಗೆ ಪ್ರವೇಶ ನೀಡಿದ 2 ವರ್ಷಗಳ ನಂತರ ಕೇರಳ ಸರ್ಕಾರ ಮತ್ತು ತಿರುವಂಕೂರು ದೇವಸ್ವಮ್ ಮಂಡಳಿ (ಟಿಡಿಬಿ) ಮಹಿಳೆಯರ ಪ್ರವೇಶದ ಕುರಿತು ತಮ್ಮ ನಿಲುವನ್ನು ಬದಲಾಯಿಸಿವೆ. ಕೇರಳ ಸರ್ಕಾರದ ಜೊತೆ ಸೇರಿ ಕೊಂಡು ಟಿಡಿಪಿ ಆನ್‍ಲೈನ್ ಸೇವೆಗೆ ಪೆÇೀರ್ಟಲ್‍ನ್ನು ಆರಂಭಿಸಿದ್ದು, ದರ್ಶ ನಕ್ಕೆ ವರ್ಚುವಲ್ ಸಾಲು ಇರುವಂತೆ ಇದರಲ್ಲಿ ಕೂಡ 50 ವರ್ಷಕ್ಕಿಂತ ಕೆಳಗಿ ರುವ ಮಹಿಳೆಯರು ಮತ್ತು…

ಶಬರಿಮಲೆ ದೇಗುಲಕ್ಕೆ ಮಹಿಳೆಯರ  ಪ್ರವೇಶ: ಮೈಸೂರಲ್ಲೂ ವಿರೋಧ
ಮೈಸೂರು

ಶಬರಿಮಲೆ ದೇಗುಲಕ್ಕೆ ಮಹಿಳೆಯರ  ಪ್ರವೇಶ: ಮೈಸೂರಲ್ಲೂ ವಿರೋಧ

November 21, 2018

ಮೈಸೂರು: ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಅನಗತ್ಯ ಗೊಂದಲ ಸೃಷ್ಟಿಸಿ, ಪಿತೂರಿ ನಡೆಸಿ, ಹಿಂದೂಗಳ ಭಾವನೆಗೆ ವಿರುದ್ಧ ವಾಗಿ ವರ್ತಿಸುತ್ತಿರುವ ಕೇರಳದ ಕಮ್ಯು ನಿಸ್ಟ್ ಸರ್ಕಾರವನ್ನು ವಜಾಗೊಳಿಸುವಂತೆ ಮೈಸೂರಿನ ಶಬರಿಮಲೆ ಕ್ಷೇತ್ರ ಸಂರಕ್ಷಣಾ ಕ್ರಿಯಾ ಸಮಿತಿ ಕಾರ್ಯಕರ್ತರು ಮಂಗಳವಾರ ಇಲ್ಲಿನ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಕೇರಳ ಸರ್ಕಾರ ಹಾಗೂ ಅಲ್ಲಿನ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶಿ ಸಬೇಕು. ಹಿಂದೂಗಳ…

ಶಬರಿಮಲೆ ವಿಚಾರದಲ್ಲಿ ಹಿಂದೆ ಸರಿಯುವುದಿಲ್ಲ: ಕೇರಳ ಸಿಎಂ
ಮೈಸೂರು

ಶಬರಿಮಲೆ ವಿಚಾರದಲ್ಲಿ ಹಿಂದೆ ಸರಿಯುವುದಿಲ್ಲ: ಕೇರಳ ಸಿಎಂ

November 11, 2018

ತಿರುವನಂತಪುರ:  ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತ ವಿಚಾರದಿಂದ ರಾಜ್ಯ ಸರ್ಕಾರ ಹಿಂದಕ್ಕೆ ಸರಿಯುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡಿದ್ದ ಅವರು, ಸಂಪ್ರದಾಯಗಳು ಬದಲಾದಾಗ ವಿರೋಧಗಳು ವ್ಯಕ್ತವಾಗುವುದು ಸಾಮಾನ್ಯ. ಆದರೆ, ಶಬರಿಮಲೆ ವಿಚಾರದಲ್ಲಿ ಸರ್ಕಾರದ ಹಿಂದಕ್ಕೆ ಸರಿಯುವುದಿಲ್ಲ. ದೇವಾಲಯಕ್ಕೆ ಬರುವ ಮಹಿಳೆಯರಿಗೆ ಶೌಚಾಲಯ, ಸ್ನಾನ ವ್ಯವಸ್ಥೆಗಳು ಸೇರಿ ಇತರೆ ವ್ಯವಸ್ಥೆಗಳನ್ನು ನೀಡಲಾಗುತ್ತದೆ. ಪ್ರಸ್ತುತ ಎದ್ದಿರುವ ಬಿಕ್ಕಟ್ಟು ತಾತ್ಕಾಲಿಕವಷ್ಟೇ ಎಂದು ಹೇಳಿದ್ದಾರೆ.

ಇಂದು ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ
ಮೈಸೂರು

ಇಂದು ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ

November 5, 2018

ತಿರುವನಂತಪುರ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನ ಒಂದು ದಿನದ ಪೂಜೆಗಾಗಿ ಸೋಮವಾರ ತೆರೆಯಲಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಶನಿವಾರದಿಂದಲೇ ಶಬರಿ ಮಲೆ ಸುತ್ತುಮುತ್ತ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ. ಎಲ್ಲಾ ವಯೋಮಾನದ ಮಹಿಳೆಯರು ಅಯ್ಯಪ್ಪಸ್ವಾಮಿ ದೇಗುಲ ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಕಳೆದ ತಿಂಗಳು 5 ದಿನಗಳ ಪೂಜೆಗಾಗಿ ಅಯ್ಯಪ್ಪ ಸ್ವಾಮಿ ದೇಗುಲ ತೆರೆದಾಗ ಅಹಿತಕರ ಘಟನೆ ಗಳು ನಡೆದಿದ್ದವು. ಕೆಲವು ಮಹಿಳೆಯರು ದೇಗುಲ ಪ್ರವೇಶಿಸಲು ಪ್ರಯತ್ನಿಸಿದರಾದರೂ, ಸಾವಿರಾರು ಭಕ್ತಾದಿಗಳು…

ಶಬರಿಮಲೆಗೆ ಮಹಿಳೆಯರ ಪ್ರವೇಶ ನಿಷೇಧಿಸುವಂತೆ ಮನವಿ
ಮಂಡ್ಯ

ಶಬರಿಮಲೆಗೆ ಮಹಿಳೆಯರ ಪ್ರವೇಶ ನಿಷೇಧಿಸುವಂತೆ ಮನವಿ

October 25, 2018

ಶ್ರೀರಂಗಪಟ್ಟಣ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಮಾಡಬಹುದು ಎನ್ನುವ ಸುಪ್ರೀಂ ಕೋರ್ಟ್‍ನ ತೀರ್ಪಿನಿಂದ ಹಿಂದೂಗಳ ಭಾವನೆ ಹಾಗೂ ಭಾವೈಕ್ಯತೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ಬುಧವಾರ ಹಲವು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಜ್ಯೋತಿಷಿ ಡಾ.ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದರು. ಜ್ಯೋತಿಷಿ ಡಾ.ಭಾನುಪ್ರಕಾಶ್ ಶರ್ಮಾ ಮಾತನಾಡಿ, ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ತೀರ್ಪಿನಾದೇಶದ ಪ್ರಕಾರ 10ರಿಂದ 50ವರ್ಷ ವಯಸ್ಸಿನ ಮಹಿಳೆಯರಿಗೆ ಪ್ರವೇಶಾವಕಾಶ ನೀಡುವ ಮೂಲಕ ಧಾರ್ಮಿಕ ಪರಂಪರೆಗೆ ಪೆಟ್ಟುನೀಡಿದೆ. ಸನಾತನ ಕಾಲದಿಂದ ಆಚರಣೆಯಲ್ಲಿರುವ…

ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರೆ: ಮಹಿಳೆಯರಿಗೆ ಕೊನೆಗೂ ದರ್ಶನ ಭಾಗ್ಯವಿಲ್ಲ
ಮೈಸೂರು

ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರೆ: ಮಹಿಳೆಯರಿಗೆ ಕೊನೆಗೂ ದರ್ಶನ ಭಾಗ್ಯವಿಲ್ಲ

October 23, 2018

ಪಂಪಾ: ಕೇರಳದ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿ ಮಲೆ ಅಯ್ಯಪ್ಪ ದೇಗುಲದೊಳಕ್ಕೆ ಯಾವುದೇ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಬಳಿಕ ದೇಗುಲದ ಬಾಗಿಲು ತೆರೆದು 5 ದಿನಗಳಾದರೂ, ಈವರೆಗೂ 10-50 ವರ್ಷದೊಳಗಿನ ಒಬ್ಬ ಮಹಿಳೆಗೂ ದರ್ಶನ ಸಿಕ್ಕಿಲ್ಲ. ಭಾನುವಾರ ದೇವರ ದರ್ಶನಕ್ಕೆ 6 ಮಹಿಳೆಯರು ಯತ್ನಿಸಿದರೂ ತಡೆ ಒಡ್ಡಲಾಯಿತು. ಈ ನಡುವೆ ಮಾಸಿಕ ಪೂಜೆ ನಿಮಿತ್ತ ತೆರೆಯಲಾಗಿದ್ದ ದೇಗುಲ ಇಂದು ಸಂಜೆ ಬಂದ್ ಆಯಿತು. ಕಳೆದ ಐದು ದಿನಗಳಿಂದ ನಡೆದ ಹೈಡ್ರಾಮಾ, ಪ್ರತಿಭಟನೆಗೂ…

ಶಬರಿಮಲೆ ವಿವಾದ: ರೆಹಾನ ವಿರುದ್ಧ ಶಿಸ್ತುಕ್ರಮ ಸಾಧ್ಯತೆ
ಮೈಸೂರು

ಶಬರಿಮಲೆ ವಿವಾದ: ರೆಹಾನ ವಿರುದ್ಧ ಶಿಸ್ತುಕ್ರಮ ಸಾಧ್ಯತೆ

October 23, 2018

ಕೊಚ್ಚಿ: ಶಬರಿಮಲೆ ದೇಗುಲ ಪ್ರವೇಶಿಸಲು ಪ್ರಯತ್ನಿಸಿದ್ದ ಕೇರಳದ ಮಾನವ ಹಕ್ಕು ಹೋರಾಟಗಾರ್ತಿ ರೆಹಾನ ಫಾತಿಮಾ ಅವರಿಗೆ ವರ್ಗಾವಣೆ ಶಿಕ್ಷೆ ನೀಡಿರುವ ಬಿಎಸ್‍ಎನ್‍ಎಲ್ ಇದೀಗ ಮತ್ತಷ್ಟು ಕ್ರಮ ಕೈಗೊಳ್ಳುವ ಸುಳಿವನ್ನು ನೀಡಿದೆ. ಆಂತರಿಕ ತನಿಖೆ ಬಳಿಕ ಶಿಸ್ತು ಕ್ರಮ ಕೈಗೊಂಡಿರುವ ಬಿಎಸ್‍ಎನ್‍ಎಲ್ ಫಾತಿಮಾ ಅವರನ್ನು ಕೊಚ್ಚಿಯ ರವಿಪುರಂ ಬ್ರಾಂಚ್‍ಗೆ ವರ್ಗಾವಣೆ ಮಾಡಿದೆ ಎಂದು ತಿಳಿದುಬಂದಿದೆ. ರೂಪದರ್ಶಿಯಾಗಿರುವ ಹೋರಾಟಗಾರ್ತಿ ರೆಹಾನ ಅವರು ಎರ್ನಾಕುಲಂ ಮೂಲದವರಾ ಗಿದ್ದು, ಕೊಟ್ಟಿ ಬೋಟ್ ಜೆಟ್ಟಿ ಬ್ರ್ಯಾಂಚ್‍ನಲ್ಲಿ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿ ಸುತ್ತಿದ್ದರು. ಇದೀಗ ಅವರಿಗೆ…

ಶಬರಿಮಲೆಗೆ ಸ್ತ್ರೀಯರ ಪ್ರವೇಶ: ಪಾಲಿಬೆಟ್ಟದಲ್ಲಿ ಬೃಹತ್  ಪ್ರತಿಭಟನಾ ಮೆರವಣಿಗೆ
ಕೊಡಗು

ಶಬರಿಮಲೆಗೆ ಸ್ತ್ರೀಯರ ಪ್ರವೇಶ: ಪಾಲಿಬೆಟ್ಟದಲ್ಲಿ ಬೃಹತ್  ಪ್ರತಿಭಟನಾ ಮೆರವಣಿಗೆ

October 15, 2018

ಸಿದ್ದಾಪುರ: ಶಬರಿಮಲೆ ಪ್ರಕರಣ ಕುರಿತು ಸುಪ್ರೀಂಕೋರ್ಟ್‍ಗೆ ಮರು ಪರಿಶೀಲನೆ ಅರ್ಜಿ ಸಲ್ಲಿಸಲು ವಿಫಲವಾಗಿರುವ ಕೇರಳ ಸರಕಾರದ ವಿರುದ್ಧ ಪಾಲಿಬೆಟ್ಟ ಗ್ರಾಮದಲ್ಲಿ ಅಯ್ಯಪ್ಪ ಭಕ್ತರು ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿದರು. ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲಿಬೆಟ್ಟ ಹಾಗೂ ಚನ್ನಯ್ಯನಕೊಟೆ ಗ್ರಾಮದ ನೂರಾರು ಮಹಿಳೆಯರು ಹಾಗೂ ಪುರುಷರು ಮೆರವಣೆಗೆಯಲ್ಲಿ ಭಾಗವಹಿಸಿದ್ದರು. ಪಾಲಿಬೆಟ್ಟ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿ ಭಟನಾ ಸಭೆಯಲ್ಲಿ ಕೇರಳ ರಾಜ್ಯದ ಕಣ್ಣೂರು ಹಿಂದೂ ಐಕ್ಯವೇದಿಕೆಯ ಜಿಲ್ಲಾಧ್ಯಕ್ಷ ಮಣಿ ವರ್ಣನ್ ಮಾತನಾಡಿ, ಶಬರಿಮಲೆಗೆ ಸ್ತ್ರೀಯ…

ಶಬರಿಮಲೆಯಲ್ಲಿ ಹಿಂದಿನ ಪದ್ಧತಿ ಅನುಸರಣೆಗೆ ಅವಕಾಶ ಕಲ್ಪಿಸಲು ಆಗ್ರಹಿಸಿ ಜಾಥಾ ನಡೆಸಿದ ಭಕ್ತರು
ಮೈಸೂರು

ಶಬರಿಮಲೆಯಲ್ಲಿ ಹಿಂದಿನ ಪದ್ಧತಿ ಅನುಸರಣೆಗೆ ಅವಕಾಶ ಕಲ್ಪಿಸಲು ಆಗ್ರಹಿಸಿ ಜಾಥಾ ನಡೆಸಿದ ಭಕ್ತರು

October 10, 2018

ಮೈಸೂರು: ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ನೀಡಿರುವ ತೀರ್ಪನ್ನು ಸುಪ್ರೀಂ ಕೋರ್ಟ್ ಮರುಪರಿ ಶೀಲಿಸಿ ಈ ಹಿಂದಿನ ಪದ್ಧತಿ ಆಚರಣೆಗೆ ಆದೇಶಿಸಬೇಕೆಂದು ಕೋರಿ ಮೈಸೂರಿನ ಅಯ್ಯಪ್ಪಸ್ವಾಮಿ ಭಕ್ತ ಮಂಡಳಿ ವತಿಯಿಂದ `ಶಬರಿಮಲೆ ಉಳಿಸಿ’ ಘೋಷ ವಾಕ್ಯದೊಂದಿಗೆ ಮಂಗಳವಾರ ಜಾಥಾ ನಡೆಸಲಾಯಿತು. ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಮಾವೇಶಗೊಂಡ ಭಕ್ತ ಮಂಡಳಿ ಕಾರ್ಯಕರ್ತರು, ಶಬರಿಮಲೆಯ ಪರಂಪರಾಗತ ಸಂಸ್ಕøತಿಯನ್ನು ಉಳಿಸ ಬೇಕಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ವಯೋ ಮಾನದ…

ಶಬರಿಮಲೆ ದೇವಾಲಯಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶ
ಮೈಸೂರು

ಶಬರಿಮಲೆ ದೇವಾಲಯಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶ

September 29, 2018

ನವದೆಹಲಿ: 800 ವರ್ಷಗಳ ಪದ್ಧತಿ ತೆರೆ ಎಳೆಯಲಾಗಿದ್ದು, ಶಬರಿಮಲೆ ದೇವಾಲಯಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡುವ ಮೂಲಕ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಸುಪ್ರೀಂಕೋರ್ಟ್ ನ ಸಿಜೆ ದೀಪಕ್ ಮಿಶ್ರಾ ಸೇರಿದಂತೆ ಪಂಚ ಪೀಠ ನ್ಯಾಯಮೂರ್ತಿಗಳು ಪ್ರತ್ಯೇಕ ತೀರ್ಪನ್ನು ನೀಡಿದ್ದಾರೆ. ದೀಪಕ್ ಮಿಶ್ರಾ ಅವರು ತಮ್ಮ ತೀರ್ಪಿನಲ್ಲಿ ಮಹಿಳೆಯರೂ ಯಾವಾಗಲೂ ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದಾರೆ. ಮಹಿಳೆಯರನ್ನು ದುರ್ಬಲರಂತೆ ನೋಡಬಾರದು. ಭಾರತದಲ್ಲಿ ಮಹಿಳೆಯರಿಗೆ ದೇವತೆಯ ಸ್ಥಾನ ನೀಡಲಾಗಿದೆ. ಮಹಿಳೆಯರ ಕುರಿತು ಸಮಾಜದ ಗ್ರಹಿಕೆ ಬದಲಾಗಬೇಕು…

Translate »