ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರೆ: ಮಹಿಳೆಯರಿಗೆ ಕೊನೆಗೂ ದರ್ಶನ ಭಾಗ್ಯವಿಲ್ಲ
ಮೈಸೂರು

ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರೆ: ಮಹಿಳೆಯರಿಗೆ ಕೊನೆಗೂ ದರ್ಶನ ಭಾಗ್ಯವಿಲ್ಲ

October 23, 2018

ಪಂಪಾ: ಕೇರಳದ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿ ಮಲೆ ಅಯ್ಯಪ್ಪ ದೇಗುಲದೊಳಕ್ಕೆ ಯಾವುದೇ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಬಳಿಕ ದೇಗುಲದ ಬಾಗಿಲು ತೆರೆದು 5 ದಿನಗಳಾದರೂ, ಈವರೆಗೂ 10-50 ವರ್ಷದೊಳಗಿನ ಒಬ್ಬ ಮಹಿಳೆಗೂ ದರ್ಶನ ಸಿಕ್ಕಿಲ್ಲ.

ಭಾನುವಾರ ದೇವರ ದರ್ಶನಕ್ಕೆ 6 ಮಹಿಳೆಯರು ಯತ್ನಿಸಿದರೂ ತಡೆ ಒಡ್ಡಲಾಯಿತು. ಈ ನಡುವೆ ಮಾಸಿಕ ಪೂಜೆ ನಿಮಿತ್ತ ತೆರೆಯಲಾಗಿದ್ದ ದೇಗುಲ ಇಂದು ಸಂಜೆ ಬಂದ್ ಆಯಿತು.

ಕಳೆದ ಐದು ದಿನಗಳಿಂದ ನಡೆದ ಹೈಡ್ರಾಮಾ, ಪ್ರತಿಭಟನೆಗೂ ತಾತ್ಕಾಲಿಕ ವಿರಾಮ ಬಿದ್ದಿದೆ. ಇಂದು ಅಂತಿಮ ಗಳಿಗೆಯಲ್ಲಿ ಬಿಂದು ಎಂಬ ದಲಿತ ಮಹಿಳೆ ದೇವಾಲಯ ಪ್ರವೇಶಕ್ಕೆ ಯತ್ನಿಸಿದರೂ, ಫಲ ಸಿಗಲಿಲ್ಲ. ಆದರೆ, ಮುಂದಿನ ತಿಂಗಳಿನಿಂದ 2 ತಿಂಗಳ ಶಬರಿಮಲೆ ಸೀಸನ್ ಆರಂಭವಾಗಲಿದ್ದು, ಆಗ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆಗಳಿವೆ. ಹೀಗಾಗಿ ಸರ್ಕಾರ, ಪೊಲೀಸರಿಗೆ ಆತಂಕ ಶುರುವಾಗಿದೆ.

Translate »