ಇಂದು ಚಾಮುಂಡೇಶ್ವರಿ ಮಹಾ ರಥೋತ್ಸವ
ಮೈಸೂರು

ಇಂದು ಚಾಮುಂಡೇಶ್ವರಿ ಮಹಾ ರಥೋತ್ಸವ

October 23, 2018

ಮೈಸೂರು: ನಾಳೆ(ಅ.23) ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಾಡಿನ ಅಧಿದೇವತೆ ತಾಯಿ ಚಾಮುಂಡೇ ಶ್ವರಿ ದೇವಿಯ ಮಹಾರಥೋತ್ಸವ (ರಥಾರೋಹಣ) ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಅಶ್ವಯುಜ ಶುಕ್ಲ ಚತುರ್ದಶಿ ಉತ್ತರ ಭಾದ್ರ ನಕ್ಷತ್ರ ಮಂಗಳವಾರ ಬೆಳಿಗ್ಗೆ 8.10ರಿಂದ 8.40 ಗಂಟೆ ಯೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡೇಶ್ವರಿಯ ರಥಾರೋಹಣ ನಡೆಯಲಿದೆ. ಸಂಜೆ ಸಿಂಹವಾಹನೋತ್ಸವ, ಹಂಸವಾಹನೋತ್ಸವ ಹಾಗೂ ಮಂಟಪೋತ್ಸವ ನಡೆಯಲಿದೆ ಎಂದು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸ ಲಾಗಿದೆ.

ಅಕ್ಟೋಬರ್ 24ರಂದು ಅಶ್ವಯುಜ ಪೂರ್ಣಿಮಾ ರೇವತಿ ನಕ್ಷತ್ರ ಅಶ್ವಾರೋಹಣ, ಅಕ್ಟೋಬರ್ 26ರಂದು ಸಂಜೆ ಪಂಚೋ ಪಚಾರ ಪೂಜೆ, ಕೈಲಾಸ ವಾಹನೋತ್ಸವ, ಅಕ್ಟೋಬರ್ 27ರಂದು ಮಹಾಭಿಷೇಕ, ಸಿಂಹವಾಹನ, ಮಂಟಪೋತ್ಸವ ಹಾಗೂ ಅಕ್ಟೋಬರ್ 28ರಂದು ಸಂಜೆ ಮುಡಿ ಉತ್ಸವ ನೆರವೇರಲಿದೆ.

ತೆಪ್ಪೋತ್ಸವ: ಅಕ್ಟೋಬರ್ 25ರಂದು ಬೆಳಿಗ್ಗೆ ಚಾಮುಂಡೇಶ್ವರಿ ದೇವಿಗೆ ವಸಂತ ಪೂಜೆ, ಆವಭೃತ ತೀರ್ಥಸ್ನಾನ, ಮಂಟ ಪೋತ್ಸವ, ಸಾಯಂಕಾಲ 7 ಗಂಟೆಗೆ ತೆಪ್ಪೋತ್ಸವ ಮತ್ತು ಆಂದೋಳಿಕಾ ರೋಹಣ, ಧ್ವಜಾರೋಹಣ ಧಾರ್ಮಿಕ ಕೈಂಕರ್ಯವನ್ನು ಏರ್ಪಡಿಸ ಲಾಗಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಧಾರ್ಮಿಕ ದತ್ತಿ ಇಲಾಖೆ ಹಾಗೂ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನದ ವತಿಯಿಂದ ತಾಯಿ ಚಾಮುಂಡೇಶ್ವರಿ ಮಹಾ ರಥೋತ್ಸವ ಮತ್ತು ತೆಪ್ಪೋ ತ್ಸವಕ್ಕೆ ಸಕಲ ಸಿದ್ಧತೆ ಮಾಡಲಾಗಿದ್ದು, ಈ ಕೈಂಕರ್ಯದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಲು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸುವ ನಿರೀಕ್ಷೆ ಇರುವುದರಿಂದ ಸಕಲ ವ್ಯವಸ್ಥೆ ಮಾಡಲಾಗುತ್ತಿದೆ.

Translate »