ಮೈಸೂರು: ನಾಳೆ(ಅ.23) ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಾಡಿನ ಅಧಿದೇವತೆ ತಾಯಿ ಚಾಮುಂಡೇ ಶ್ವರಿ ದೇವಿಯ ಮಹಾರಥೋತ್ಸವ (ರಥಾರೋಹಣ) ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಅಶ್ವಯುಜ ಶುಕ್ಲ ಚತುರ್ದಶಿ ಉತ್ತರ ಭಾದ್ರ ನಕ್ಷತ್ರ ಮಂಗಳವಾರ ಬೆಳಿಗ್ಗೆ 8.10ರಿಂದ 8.40 ಗಂಟೆ ಯೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡೇಶ್ವರಿಯ ರಥಾರೋಹಣ ನಡೆಯಲಿದೆ. ಸಂಜೆ ಸಿಂಹವಾಹನೋತ್ಸವ, ಹಂಸವಾಹನೋತ್ಸವ ಹಾಗೂ ಮಂಟಪೋತ್ಸವ ನಡೆಯಲಿದೆ ಎಂದು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸ ಲಾಗಿದೆ. ಅಕ್ಟೋಬರ್ 24ರಂದು ಅಶ್ವಯುಜ ಪೂರ್ಣಿಮಾ ರೇವತಿ ನಕ್ಷತ್ರ ಅಶ್ವಾರೋಹಣ, ಅಕ್ಟೋಬರ್…