ಶಬರಿಮಲೆಗೆ ಮಹಿಳೆಯರ ಪ್ರವೇಶ  ಹಿಂದಿನ ಸಂಪ್ರದಾಯಕ್ಕೆ ಮರಳಿದ ಕೇರಳ ಸರ್ಕಾರ
ಮೈಸೂರು

ಶಬರಿಮಲೆಗೆ ಮಹಿಳೆಯರ ಪ್ರವೇಶ ಹಿಂದಿನ ಸಂಪ್ರದಾಯಕ್ಕೆ ಮರಳಿದ ಕೇರಳ ಸರ್ಕಾರ

December 4, 2020

ಕೊಚ್ಚಿ, ಡಿ.3- ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆ ಯಲ್ಲಿ ಪೆÇಲೀಸರ ಭದ್ರತೆಯೊಂದಿಗೆ ಶಬರಿಮಲೆ ಅಯ್ಯಪ್ಪ ದೇವ ಸ್ಥಾನಕ್ಕೆ ಇಬ್ಬರು ಮಹಿಳೆಯರಿಗೆ ಪ್ರವೇಶ ನೀಡಿದ 2 ವರ್ಷಗಳ ನಂತರ ಕೇರಳ ಸರ್ಕಾರ ಮತ್ತು ತಿರುವಂಕೂರು ದೇವಸ್ವಮ್ ಮಂಡಳಿ (ಟಿಡಿಬಿ) ಮಹಿಳೆಯರ ಪ್ರವೇಶದ ಕುರಿತು ತಮ್ಮ ನಿಲುವನ್ನು ಬದಲಾಯಿಸಿವೆ.

ಕೇರಳ ಸರ್ಕಾರದ ಜೊತೆ ಸೇರಿ ಕೊಂಡು ಟಿಡಿಪಿ ಆನ್‍ಲೈನ್ ಸೇವೆಗೆ ಪೆÇೀರ್ಟಲ್‍ನ್ನು ಆರಂಭಿಸಿದ್ದು, ದರ್ಶ ನಕ್ಕೆ ವರ್ಚುವಲ್ ಸಾಲು ಇರುವಂತೆ ಇದರಲ್ಲಿ ಕೂಡ 50 ವರ್ಷಕ್ಕಿಂತ ಕೆಳಗಿ ರುವ ಮಹಿಳೆಯರು ಮತ್ತು ತೃತೀಯ ಲಿಂಗಿಗಳು ಹಾಗೂ 65 ವರ್ಷಕ್ಕಿಂತ ಮೇಲ್ಪಟ್ಟವರನ್ನು ದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ನಮೂದಿಸಲಾಗಿದೆ. ಕೇರಳ ಸರ್ಕಾರ ಈ ಹಿಂದೆ 10 ವರ್ಷ ಕ್ಕಿಂತ ಕೆಳಗಿರುವ ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟವರನ್ನು ಕೋವಿಡ್-19 ನಿರ್ಬಂಧ ಹಿನ್ನೆಲೆಯಲ್ಲಿ ಪ್ರವೇಶಕ್ಕೆ ಬಿಡುತ್ತಿರಲಿಲ್ಲ. ಕಳೆದ ಫೆಬ್ರವರಿಯಲ್ಲಿ ಐವರು ಸದಸ್ಯರ ನ್ನೊಳಗೊಂಡ ಸಮಿತಿ ಮುಂದೆ ವಾದ ಮಂಡಿಸಿದ್ದ ಟಿಡಿಪಿ ಜೈವಿಕ ನ್ಯೂನತೆಯಿಂದ ದೇವಾಲಯದೊಳಗೆ ಒಂದು ಲಿಂಗಕ್ಕೆ ಮಾತ್ರ ಪ್ರವೇಶ ನೀಡಲು ನಿರ್ಬಂಧ ವಿಧಿಸುವುದು ಸರಿಯಲ್ಲ ಎಂದು ಹೇಳಿತ್ತು.

Translate »