ಮೈಸೂರು: ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ನೀಡಿರುವ ತೀರ್ಪನ್ನು ಸುಪ್ರೀಂ ಕೋರ್ಟ್ ಮರುಪರಿ ಶೀಲಿಸಿ ಈ ಹಿಂದಿನ ಪದ್ಧತಿ ಆಚರಣೆಗೆ ಆದೇಶಿಸಬೇಕೆಂದು ಕೋರಿ ಮೈಸೂರಿನ ಅಯ್ಯಪ್ಪಸ್ವಾಮಿ ಭಕ್ತ ಮಂಡಳಿ ವತಿಯಿಂದ `ಶಬರಿಮಲೆ ಉಳಿಸಿ’ ಘೋಷ ವಾಕ್ಯದೊಂದಿಗೆ ಮಂಗಳವಾರ ಜಾಥಾ ನಡೆಸಲಾಯಿತು.
ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಮಾವೇಶಗೊಂಡ ಭಕ್ತ ಮಂಡಳಿ ಕಾರ್ಯಕರ್ತರು, ಶಬರಿಮಲೆಯ ಪರಂಪರಾಗತ ಸಂಸ್ಕøತಿಯನ್ನು ಉಳಿಸ ಬೇಕಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ವಯೋ ಮಾನದ ಮಹಿಳೆಯರಿಗೆ ಅಯ್ಯಪ್ಪಸ್ವಾಮಿ ಸನ್ನಿಧಿಗೆ ಪ್ರವೇಶ ಕಲ್ಪಿಸುವುದು ಶಬರಿಮಲೆ ದೇವಾಲಯದ ಆಚರಣೆಗೆ ವಿರುದ್ಧ ವಾಗಿದೆ. ಹೀಗಾಗಿ ಸುಪ್ರೀಂಕೋರ್ಟ್ ತನ್ನ ಆದೇಶವನ್ನು ಮರುಪರಿಶೀಲಿಸಿ ಹಿಂದಿನ ಆಚರಣೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮಹಿಳಾ ಮುಖಂಡರಾದ ಲೀಲಾಶೆಣೈ, ಅಯ್ಯಪ್ಪಸ್ವಾಮಿ ದೇವ ಸ್ಥಾನಕ್ಕೆ 10 ವರ್ಷದ ಒಳಗಿನ ಬಾಲಕಿಯರು ಹಾಗೂ 50 ವರ್ಷ ಪೂರೈಸಿದ ಮಹಿಳೆ ಯರು ಹೋಗುವುದು ದೇವಾಲಯದ ಸಂಪ್ರದಾಯ. ನಾವು ಕಾನೂನು ಹಾಗೂ ಮಹಿಳೆಯರನ್ನು ಗೌರವಿಸುವ ಜೊತೆಗೆ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನೂ ಗೌರವಿಸಬೇಕು. ಈ ಹಿನ್ನೆಲೆಯಲ್ಲಿ ಎಲ್ಲಾ ವಯೋಮಾನದ ಮಹಿಳೆಯರು ಅಯ್ಯಪ್ಪ ದೇಗುಲಕ್ಕೆ ಪ್ರವೇಶ ಪಡೆಯಲು ಅವಕಾಶ ನೀಡಿರುವುದನ್ನು ಹಿಂಪಡೆದು ಈ ಮೊದಲಿನಂತೆಯೇ ಆಚರಣೆಗಳು ನಡೆ ಯಲು ಅವಕಾಶ ನೀಡಬೇಕು ಎಂದು ಕೋರಿದರು.
ಸ್ವಾಮಿಯೇ ಅಯ್ಯಪ್ಪೊ… ಉಳಿಸಿ ಉಳಿಸಿ ಶಬರಿಮಲೆ ಉಳಿಸಿ… ಎಂಬಿತ್ಯಾದಿ ಘೋಷಣೆಗಳೊಂದಿಗೆ ಮುಂದೆ ಸಾಗಿದ ಜಾಥಾವು, ಚಾಮರಾಜ ಒಡೆಯರ್ ವೃತ್ತ, ಗಾಂಧೀ ವೃತ್ತ, ಕೆಟಿ ಸ್ಟ್ರೀಟ್, ಇರ್ವಿನ್ ರಸ್ತೆಗಳಲ್ಲಿ ಸಾಗಿ, ಸಯ್ಯಾಜಿರಾವ್ ರಸ್ತೆಯ ಶ್ರೀ ಸತ್ಯನಾರಾಯಣ ದೇವಸ್ಥಾನದ ಬಳಿ ಅಂತ್ಯಗೊಂಡಿತು. ಅಯ್ಯಪ್ಪಸ್ವಾಮಿ ಭಕ್ತ ಮಂಡಳಿಯ ಕಾರ್ಯಕರ್ತರಾದ ಗೋವ ರ್ಧನ್, ವಿನಯ್, ಮನು ಅಯ್ಯಪ್ಪ, ಗಣೇಶ್ ಪ್ರಸಾದ್ ಸೇರಿದಂತೆ ಹಲವು ಮಹಿಳೆ ಯರು ಜಾಥಾದಲ್ಲಿ ಪಾಲ್ಗೊಂಡಿದ್ದರು.