ಕೆ.ಆರ್.ನಗರದಲ್ಲಿ ಉಪ ವಿಶ್ವವಿದ್ಯಾನಿಲಯ ಸ್ಥಾಪನೆ
ಮೈಸೂರು

ಕೆ.ಆರ್.ನಗರದಲ್ಲಿ ಉಪ ವಿಶ್ವವಿದ್ಯಾನಿಲಯ ಸ್ಥಾಪನೆ

January 28, 2019

ಕೆ.ಆರ್.ನಗರ: ನನ್ನ ವಿದ್ಯಾಭ್ಯಾಸದ ದಿನದಲ್ಲಿ ಅನುಭವಿಸಿದ ಕಷ್ಟವನ್ನು ನೀವು ಅನುಭವಿಸಬಾರದೆಂಬ ಅಶಯದಿಂದ ಕೆ.ಆರ್. ನಗರ ತಾಲೂಕಿನಲ್ಲಿ ವೃತ್ತಿಪರ ಶಿಕ್ಷಣ ಸೇರಿದಂತೆ ಉಪ ವಿಶ್ವವಿದ್ಯಾ ನಿಲಯ ಪ್ರಾರಂಭಿಸಬೇಕೆಂಬ ನಿರ್ಧಾರಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅನುಮತಿ ನೀಡಿದ್ದಾರೆ ಎಂದು ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2018-19ನೇ ಶೈಕ್ಷಣಿಕ ಸಾಲಿನ ಕ್ರೀಡಾ ಮತ್ತು ಸಾಂಸ್ಕøತಿಕ ಚಟುವಟಿಕೆಗಳ ಸಮಾರೋಪ ಸಮಾ ರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸರ್ಕಾರ ಎಲ್ಲಾ ರೀತಿಯ ಸವಲತ್ತು ಸಹ ಕಾರ ನೀಡುತ್ತಿದ್ದು, ನಮ್ಮ ಸರ್ಕಾರ ಸದಾ ನಿಮ್ಮೊಂದಿಗಿದೆ. ಧೈರ್ಯವಾಗಿ ವಿದ್ಯಾ ಭ್ಯಾಸ ಮಾಡಿ ಎಂದು ಕರೆ ನೀಡಿದರು.

ಸಮಾಜದಲ್ಲಿ ಮಹಿಳೆಯರ ಪಾತ್ರ ಕುಟುಂಬದ ಹೊರಗೆ ಮತ್ತು ಒಳಗೆ ಹೆಚ್ಚು ಪ್ರಾಮಖ್ಯತೆ ಪಡೆದಿದೆ. ನಿಮ್ಮಲ್ಲಿ ದೃಢವಾದ ಧೈರ್ಯ ಮತ್ತು ಶಕ್ತಿ ಇದ್ದರೇ ಎಂತಹ ಸಮಸ್ಯೆ ಬಂದರೂ ಎದುರಿಸಬಹುದು. ಒಬ್ಬರು ಬೆಳೆಯುವಾಗ ಕಾಲೆಳೆ ಯುವವರು ಸದಾ ಇರುತ್ತಾರೆ. ಅದೆಲ್ಲವನ್ನೂ ಮೆಟ್ಟಿ ನಿಂತು ಸತ್ಯ ಮತ್ತು ನೇರ ನಡೆ ಯಿಂದ ಹೇಳುವ ಹಾಗೂ ಕೇಳುವ ಪರಿಪಾಠ ಬೆಳೆಸಿ ಕೊಳ್ಳಬೇಕು. ಮನಸ್ಸಾಕ್ಷಿಗೆ ವಿರುದ್ಧ ನಡೆಯಬಾರದು ಎಂದು ತಿಳಿಸಿದರು.
ಈ ಕಾಲೇಜು ವಿದ್ಯಾರ್ಥಿಗಳಿಗೆ ಸ್ಥಳಾ ವಕಾಶದ ಕೊರತೆ ಇರುವುದರಿಂದ ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸು ತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ಕಟ್ಟಡದಲ್ಲಿ ಕಲಿಯಲು ಅವಕಾಶ ಮಾಡಿಕೊಡಲಾಗುವುದು. ಅಲ್ಲದೆ ಉನ್ನತ ವಿದ್ಯಾಭ್ಯಾಸಕ್ಕಾಗಿ ತಾಲೂಕಿನ ಮಕ್ಕಳು ಬೇರೆಡೆಗೆ ತೆರಳಲು ತೊಂದರೆಯಾಗುತ್ತಿದ್ದ ಹಿನ್ನೆಲೆ ಎಲ್ಲಾ ಉನ್ನತ ವಿದ್ಯಾಭ್ಯಾಸದ ಕೋರ್ಸ್ ಗಳನ್ನು ಇಲ್ಲೇ ಪ್ರಾರಂಭಿಸಲಾಗಿದೆ.

ಆದ್ದರಿಂದ ವಿದ್ಯಾರ್ಥಿನಿಯರು ವಿದ್ಯಾರ್ಥಿ ದೆಶೆಯಲ್ಲಿ ಶೈಕ್ಷಣಿಕ ಪ್ರಗತಿಗೆ ಒತ್ತು ಕೊಡುವ ಮೂಲಕ ತಮ್ಮ ಕುಟುಂಬ, ಕಾಲೇಜು ಹಾಗೂ ತಾಲೂಕಿಗೆ ಕೀರ್ತಿ ತರುವಂತವರಾಗಬೇಕು ಎಂದು ಆಶಿಸಿದರಲ್ಲದೆ, ನಾನು ತಾಲೂಕಿನಲ್ಲಿ ರುವವರೆಗೂ ಶೈಕ್ಷಣಿಕ ಪ್ರಗತಿಗೆ ವೈಯಕ್ತಿಕ ಸೇವೆ, ಸರ್ಕಾರದ ಅನುದಾನ ಒದಗಿಸುತ್ತೇನೆ ಎಂದು ಇದೇ ವೇಳೆ ಭರವಸೆ ನೀಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ವತಿಯಿಂದ ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‍ರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿನಿ ಯರು ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮ ವನ್ನು ಉದ್ದೇಶಿಸಿ ಉಪನ್ಯಾಸಕ ಡಾ. ಹೆಚ್.ಎಸ್.ಸತ್ಯನಾರಾಯಣ, ಪ್ರಭಾರ ಪ್ರಾಂಶುಪಾಲ ಡಿ.ಜಿ.ಗೋಪಾಲ್ ಮಾತ ನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವೈ.ಆರ್.ಪ್ರಕಾಶ್, ಉಪಾಧ್ಯಕ್ಷೆ ಭಾನು ಮತಿ ಹರೀಶ್, ಸದಸ್ಯರಾದ ಪಾರ್ವತಿ ಗಣೇಶ್, ಎಂ.ಎಸ್.ರವಿಕುಮಾರ್, ಕೆ.ಎಲ್. ಜಗದೀಶ್, ಮಹೇಂದ್ರ, ಶ್ರೀನಿವಾಸ್, ನಿವೃತ್ತ ಉಪನ್ಯಾಸಕ ಕೆ.ಆರ್. ಲಕ್ಕೇಗೌಡ, ಸ್ವರಾಜ್ ಇಂಡಿಯಾದ ತಾಲೂಕು ಅಧ್ಯಕ್ಷ ಗರುಡಗಂಭದಸ್ವಾಮಿ ಇನ್ನಿತರರಿದ್ದರು.

Translate »