ಬುಲೆಟ್‍ಗೆ ಕಾರು ಡಿಕ್ಕಿ: ಸವಾರ ಸಾವು
ಮೈಸೂರು

ಬುಲೆಟ್‍ಗೆ ಕಾರು ಡಿಕ್ಕಿ: ಸವಾರ ಸಾವು

January 28, 2019

ಭೇರ್ಯ: ಬುಲೆಟ್ ಬೈಕ್‍ಗೆ ಸ್ವಿಪ್ಟ್ ಕಾರು ಡಿಕ್ಕಿ ಹೊಡೆದ ಪರಿಣಾಮ ಇಂಜನಿಯರ್ ಓರ್ವ ಮೃತಪಟ್ಟಿರುವ ಘಟನೆ ಸಮೀಪದ ಬೊಮ್ಮೆನಹಳ್ಳಿ -ಚಿಕ್ಕವಡ್ಡರಗುಡಿ ಗ್ರಾಮಗಳ ಬಳಿಯ ಹಾಸನ-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ. ಕೆ.ಆರ್.ನಗರ ತಾಲೂಕಿನ ಬಟಿಗನಹಳ್ಳಿ ಗ್ರಾಮದ ಬಿ.ವಿ.ಶ್ರೀಧರ್ ಮೃತರು, ಇವರಿಗೆ ಪತ್ನಿ, ಇಬ್ಬರು ಪುತ್ರರಿದ್ದಾರೆ.

ಕೆ.ಆರ್.ನಗರದ ಖಾಸಗಿ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿದ್ದು, ಎಂದಿನಂತೆ ತನ್ನ ಕೆಲಸ ಮುಗಿಸಿಕೊಂಡು ಊರಿಗೆ ಬುಲೆಟ್‍ನಲ್ಲಿ ವಾಪಸ್ಸಾಗುತ್ತಿದ್ದಾಗ ಎದುರಿನಿಂದ ಬಂದ ಸ್ವಿಪ್ಟ್ ಕಾರ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬುಲೇಟ್ ಸ್ವಲ್ಪ ದೂರದಲ್ಲಿ ಬಿದ್ದಿದ್ದು, ಬಿ.ವಿ.ಶ್ರೀಧರ್ ಗಂಭೀರವಾಗಿ ಗಾಯ ಗೊಂಡಿದರು. ತಕ್ಷಣ ಸ್ಥಳಕ್ಕಾಗಮಿಸಿದ ಸ್ಥಳೀಯ ಪೊಲೀಸರು ತಮ್ಮ ವಾಹನದಲ್ಲೇ ಕೆ.ಆರ್.ನಗರ ತಾಲೂಕು ಆಸ್ಪತ್ರೆಗೆ ದಾಖಲಿಸಿದರು.

ಆದರೆ ಚಿಕ್ಕಿತ್ಸೆ ಫಲಕಾರಿಯಾಗದೇ ಶ್ರೀಧರ್ ಕೊನೆಯುಸಿರೆಳೆದರು. ಸುದ್ದಿ ತಿಳಿದು ಸಾಲಿಗ್ರಾಮ ಸಬ್‍ಇನ್ಸ್‍ಪೆಕ್ಟರ್ ಮಹೇಶ್ ತಮ್ಮ ಸಿಬ್ಬಂದಿಗಳೊಡನೆ ಆಗಮಿಸಿ ಮಹಜರ್ ನಡೆಸಿದರು. ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ದೇಹ ಹಸ್ತಾಂತರಿಸಿದರು. ವಿಷಯ ತಿಳಿದ ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ಅವರು ಕೆ.ಆರ್.ನಗರದ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದರು.

Translate »