ಬೆಟ್ಟದಪುರದಲ್ಲಿ ಗ್ರಂಥಾಲಯ ಸಪ್ತಾಹ
ಮೈಸೂರು

ಬೆಟ್ಟದಪುರದಲ್ಲಿ ಗ್ರಂಥಾಲಯ ಸಪ್ತಾಹ

November 19, 2018

ಬೆಟ್ಟದಪುರ: ನಾಗರಿಕರಿಗೆ ಗ್ರಂಥಾಲಯದಲ್ಲಿ ದೊರೆಯುವ ಪುಸ್ತಕಗಳ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಗ್ರಂಥಾಲಯದ ಮೇಲ್ವಿಚಾರಕ ಮೈಲಾರಿ ಅಭಿಪ್ರಾಯಪಟ್ಟರು.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದ ಪುರದಲ್ಲಿ ಗ್ರಂಥಾಲಯದಲ್ಲಿ ಏರ್ಪಡಿಸಿದ್ದ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಪುಸ್ತಕಗಳು ನಮ್ಮ ನಿಜವಾದ ಸ್ನೇಹಿತರಿದ್ದಂತೆ. ಅವುಗಳನ್ನು ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಎಲ್ಲರೂ ಗ್ರಂಥಾಲಯಕ್ಕೆ ಹೋಗಿ ಬೇಕಾದ ಪುಸ್ತಕ ಪಡೆದು ಜ್ಞಾನ ವೃದ್ಧಿಸಿಕೊಳ್ಳಬಹುದು ಎಂದು ಕಿವಿ ಮಾತು ಹೇಳಿದರು.

ಇದಕ್ಕೂ ಮುನ್ನ ಗ್ರಂಥಾಲಯ ಪಿತಾಮಹಾ ಎಸ್.ಆರ್.ರಂಗನಾಥ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಗ್ರಾಪಂನ ಗ್ರಂಥಾಲಯ ಗಳಲ್ಲಿ ನ.14ರಿಂದ ನ.20ರವರೆಗೆ ಗ್ರಂಥಾ ಲಯ ಸಪ್ತಾಹ ಆಚರಿಸಲಾಗುತ್ತಿದ್ದು, ವಿವಿಧ ಬಗೆಯ ಪುಸ್ತಕಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಇದೇ ಸಂದರ್ಭದಲ್ಲಿ ಬೆಟ್ಟದಪುರ ಗ್ರಾಮದ ಸುಮತಿ, ರಾಜೇಶ್ವರಿ, ಗೀತಾ, ಸುರೇಶ್‍ರನ್ನು ಸನ್ಮಾನಿಸಯಿತು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಶಂಕರ್, ಮಂಜುನಾಥ್, ಕೀರ್ತಿ, ಶಿವದೇವ್ ಹಾಗೂ ಗ್ರಾಮಸ್ಥರಿದ್ದರು.

Translate »