ಸನ್ಮಾನಗಳು ಜವಾಬ್ದಾರಿಯನ್ನು ಹೆಚ್ಚಿಸುತ್ತದೆ
ಮೈಸೂರು

ಸನ್ಮಾನಗಳು ಜವಾಬ್ದಾರಿಯನ್ನು ಹೆಚ್ಚಿಸುತ್ತದೆ

November 19, 2018

ಪಿರಿಯಾಪಟ್ಟಣ: ಸನ್ಮಾನಗಳು ಸಮಾಜದಲ್ಲಿ ವ್ಯಕ್ತಿಗತವಾಗಿ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದು ಶಾಸಕ ಕೆ.ಎಂ.ಮಾದೇವ್ ತಿಳಿಸಿದರು.ಇಂದು ಪಟ್ಟಣದ ರೋಟರಿ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಸನ್ಮಾನ ಸ್ವೀಕರಿಸಿ, ಮಾತನಾಡಿದರು. ತಾಲೂಕಿನ ಅಭಿವೃದ್ಧಿಯೇ ನನ್ನ ಕನಸು. ಈ ನಿಟ್ಟಿನಲ್ಲಿ ನಾನು ಅಭಿವೃದ್ಧಿಗಾಗಿ ಮೊದಲ ಹೆಜ್ಜೆಯನ್ನು ಇಡುತ್ತಿದ್ದೇನೆ. ಈ ರೀತಿಯ ಸನ್ಮಾನಗಳು ನನಗೆ ಎಚ್ಚರಿಕೆ ಗಂಟೆ ಎಂದರು ಸರ್ಕಾರ ಇಂದು ರೈತರ ಸಾಲ ಮನ್ನಾ ಯೋಜನೆಯಲ್ಲಿ ಅತ್ಯಂತ ಜವಾಬ್ದಾರಿ ನಿರ್ಧಾರವನ್ನು ತೆಗೆದುಕೊಂಡಿದ್ದು, ಇದು ಅತ್ಯಂತ ದೊಡ್ಡ ಹೊರೆಯಾಗಿದ್ದರಿಂದ ಹಂತ ಹಂತವಾಗಿ ಬಗಹರಿಸಲಿದೆ ಎಂದು ತಿಳಿಸಿದರು.

ಶಾಸಕ ಕೆ.ಮಹದೇವ್‍ರನ್ನು ಸನ್ಮಾನಿಸಿ ತಾಲೂಕು ಕರವೇ ಗೌರವಾಧ್ಯಕ್ಷ ಎನ್.ಎಲ್. ಗಿರೀಶ್ ಮಾತನಾಡಿ, ತಾಲೂಕಿನ ಹಲವು ವರ್ಷಗಳಿಂದ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ನಾಡು ನುಡಿ ನೆಲ ಜಲದ ಬಗ್ಗೆ ಹೋರಾಟ ನಡೆಸುತ್ತಲೇ ಬಂದಿದೆ. ಅಂದಿನಿಂದ ಇಂದಿ ನವರೆಗೆ ತಾಲೂಕಿನಲ್ಲಿ ಅತ್ಯಂತ ಜವಾಬ್ದಾರಿ ಯುತ ಸ್ಥಾನ ಹೊಂದಿದ ಎಲ್ಲಾ ವರ್ಗದವ ರನ್ನು ಕರವೇ ಸನ್ಮಾನಿಸಿ ಗೌರವಿಸುತ್ತಲೇ ಬಂದಿದೆ. ಅದರಂತೆಯೇ ಇಂದು ತಾಲೂಕಿನ ಶಾಸಕ ಕೆ.ಮಹದೇವ ಅವರನ್ನು ಸನ್ಮಾನಿಸಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನ ಅಭಿ ವೃದ್ಧಿಗೆ ಹೆಚ್ಚು ಒತ್ತು ನೀಡಲಿ ಎಂದು ಮನವಿ ಮಾಡಿದರು ಸಮಾರಂಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗೊರಳ್ಳಿ ಜಗದೀಶ್, ರೋಟರಿ ಅಧ್ಯಕ್ಷ ಹಾಗೂ ಸಾಹಿತಿ ಬಸವೇಗೌಡ, ಕರವೇ ಗೌರವಾಧ್ಯಕ್ಷ ಎನ್.ಎಲ್.ಗಿರೀಶ್, ತಾಪಂ ಮಾಜಿ ಸದಸ್ಯ ತೆಲಗಿನ ಕುಪ್ಪೆ ರಘು, ಆಟೋ ಚಾಲಕರ ಸಂಘದ ಅಧ್ಯಕ್ಷ ನಾಗರಾಜ್ , ಪುರಸಭಾ ಸದಸ್ಯ ನಿರಂಜನ್, ಅಣ್ಣಯ್ಯ ಮೋಹನ್ ಯಾದವ್ ಸೇರಿದಂತೆ ಕರವೇ ಕಾರ್ಯಕರ್ತರಿದ್ದರು.

Translate »