ವಿಶ್ವಭ್ರಾತೃತ್ವ, ಸಮಾನತೆಯ ಬಿಂಬ ವಚನ ಸಾಹಿತ್ಯ
ಮೈಸೂರು

ವಿಶ್ವಭ್ರಾತೃತ್ವ, ಸಮಾನತೆಯ ಬಿಂಬ ವಚನ ಸಾಹಿತ್ಯ

August 25, 2018

ನಂಜನಗೂಡು:  ವಚನ ಸಾಹಿತ್ಯ ವಿಶ್ವಭ್ರಾತೃತ್ವ ಮತ್ತು ಸಮಾನತೆ ಯನ್ನು ಬಿಂಬಿಸುತ್ತದೆ ಎಂದು ಜೆಎಸ್‍ಎಸ್ ಪ್ರೌಢಶಾಲೆಯ ಮುಖ್ಯಶಿಕ್ಷಕ ಸೋಮ ಸುಂದರ್ ಹೇಳಿದರು.

ಶರಣು ವಿಶ್ವವಚನ ಫೌಂಡೇಶನ್ ನಂಜನಗೂಡಿನ ಜೆಎಸ್‍ಎಸ್ ಪ್ರೌಢಶಾಲೆ ಯಲ್ಲಿ ಆಯೋಜಿಸಿದ್ದ ಶಾಲೆಗಳೆಡೆಗೆ ವಚನಗಳ ನಡಿಗೆ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶರ ಣರು ಎಲ್ಲಾ ಜನರನ್ನು ಒಂದೆಡೆ ಸೇರಿಸಿ ಅವರಲ್ಲಿದ್ದ ಪ್ರತಿಭೆಯನ್ನು ಅನುಭವ ಮಂಟಪದ ಮುಖಾಂತರ ಹೊರ ತಂದರು. ಸಮ ಹಾಗೂ ಶರಣ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಶರಣರ ವಚನಗಳ ಆಶಯ ಎಲ್ಲರಿಗೂ ಅರ್ಥ ವಾಗುತ್ತಿದೆ ಎಂದರು. ಶರಣು ವಿಶ್ವವಚನ ಫೌಂಡೇಶನ್ ನಿರ್ದೇಶಕಿ ರೂಪ ಕುಮಾರಸ್ವಾಮಿ ಮಾತನಾಡಿ ಬಸವಣ್ಣನವರ ಆದಿಯಾಗಿ ಎಲ್ಲಾ ವಚನ ಕಾರರ ವಚನಗಳನ್ನು ಅಧ್ಯಯನ ಮಾಡಿ ದರೆ ವಿದ್ಯೆಯ ಜೊತೆಗೆ ವಿನಯತೆಯೂ ಮೈಗೂಡುತ್ತದೆ ಎಂದರು.

ಅನುರಾಗ ಸೇವಾ ಟ್ರಸ್ಟ್ ಸಂಸ್ಥಾಪಕ ಸೋಮಶೇಖರ್ ಅವರು ಎಳೆಯ ವಯ ಸ್ಸಿನಲ್ಲಿ ವಚನ ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸಲು ಶರಣು ವಿಶ್ವವಚನ ಫೌಂಡೇ ಷನ್ ಪ್ರಯತ್ನಿಸು ತ್ತಿರುವುದು ಸ್ತುತ್ಯಾರ್ಹ ವಾದ ಕೆಲಸ, ವಚನಗಳನ್ನು ಅರಿತು ಅದರಂತೆ ನಡೆ ದಾಗ ಮಾತ್ರ ಸುಸಂಸ್ಕøತ ಸಮಾಜ ನಿರ್ಮಾಣವಾಗುತ್ತದೆ ಎಂದರು.

ವಚನ ವಾಚನ ಮಾಡಿದ ವಿದ್ಯಾರ್ಥಿ ಗಳಿಗೆ ವಚನ ದೀವಿಗೆ ಪ್ರಮಾಣಪತ್ರ ಮತ್ತು ವಚನಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸ ಲಾಯಿತು. ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಗುರು ಮಲ್ಲೇಶ್ವರ ಮಹಿಳಾ ಪತ್ತಿನ ಸಹಕಾರ ನಿಯಮಿತ ಅಧ್ಯಕ್ಷೆ ನಂದಿನಿ, ತಾಲೂಕು ಅಧ್ಯಕ್ಷೆ ಶಶಿಕಲಾ ಗಿರೀಶ್, ಉಪಾಧ್ಯಕ್ಷ ಕಣೆನೂರು ನಾಗೇಶ್‍ಮೂರ್ತಿ ಕಾರ್ಯಾಧ್ಯಕ್ಷ ಪಂಪಾಪತಿ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಮಾಧ್ಯಮ ಸಂಚಾ ಲಕ ನಾಗೇಂದ್ರ, ಕಾವೇರಿ ಅನಿಲ್, ಕೋಮಲ, ಉಪಸ್ಥಿತರಿದ್ದರು.

Translate »