ಕಟ್ಟೆಮಳಲವಾಡಿ: ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ರಸ್ತೆ ಕೆಸರು ಗದ್ದೆಯಂತಾಗಿದೆ.
ಹುಣಸೂರು ತಾಲೂಕು ಕಟ್ಟೆಮಳಲವಾಡಿ ಗ್ರಾಮದ ಜಿ.ಟಿ. ಬಡಾವಣೆಯ ರಸ್ತೆಯ ಕಥೆ ಇದು. ಬಡಾವಣೆಯ ಪ್ರಾರಂಭದಿಂ ದಲೇ ಈ ಸಮಸ್ಯೆ ಎದುರಾಗಿದ್ದು ಬೈಕ್ ಸವಾರರು ದೂರದಲ್ಲಿಯೇ ನಿಲ್ಲಿಸಿ ಚರಂಡಿ ಅಂಚಿನಲ್ಲಿ ಸಾಗಬೇಕಿದೆ ಶಾಲೆ, ಕಾನ್ವೆಂಟ್‍ಗೆ ಹೋಗುವ ಮಕ್ಕಳು ಹಾಗೂ ಗ್ರಾಮಸ್ಥರಿಗೆ ಹೋಗಲು ಬಹಳ ತೊಂದರೆಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ದುರಸ್ತಿ ಮಾಡಿಸಿದರೆ ನಿವಾಸಿಗಳಿಗೆ ತಿರುಗಾಡಲು ಅನುಕೂಲವಾಗುತ್ತದೆ ಎಂದು ಬಡಾವಣೆಯ ನಿವಾಸಿಗಳು ತಿಳಿಸಿದ್ದಾರೆ.
ಜಿ.ಟಿ.ಬಡಾವಣೆ ರಸ್ತೆ ಹಾಗೂ ಚರಂಡಿಗೆ 20 ಲಕ್ಷ ರೂ. ವೆಚ್ಚದಲ್ಲಿ ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ಗುದ್ದಲಿ ಪೂಜೆ ನೆರವೇರಿಸಿ, ಚರಂಡಿ ಕಾಮಗಾರಿ ಮುಗಿದಿದೆ. ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತಿ ಜಾರಿಯಿಂದ ಹಣ ಬಿಡುಗಡೆಯಾಗಿರಲಿಲ್ಲ ಈಗ ರಸ್ತೆಗೆ ಹಣ ಬಿಡುಗಡೆಯಾಗಲಿದ್ದು ಶೀಘ್ರದಲ್ಲಿಯೇ ಕಾಮಗಾರಿ ಪೂರ್ಣಗೊಳಿ ಸಲಾಗುವುದು ಎಂದು ಭೂಸೇನಾ ನಿಗಮದ ಇಂಜಿನಿಯರ್ ರಮೇಶ್ ತಿಳಿಸಿದ್ದಾರೆ.