ತ.ನಾಡು ಸಾರಿಗೆ ಬಸ್ ಪ್ರಪಾತಕ್ಕೆ ಉರುಳಿ 8 ಮಂದಿ ಸಾವು: ಊಟಿ ಬಳಿ ದುರ್ಘಟನೆ
ಮೈಸೂರು

ತ.ನಾಡು ಸಾರಿಗೆ ಬಸ್ ಪ್ರಪಾತಕ್ಕೆ ಉರುಳಿ 8 ಮಂದಿ ಸಾವು: ಊಟಿ ಬಳಿ ದುರ್ಘಟನೆ

June 15, 2018

ಊಟಿ: ಮಳೆಯ ನಡುವೆ ಚಲಿಸುತ್ತಿದ್ದ ತಮಿಳುನಾಡು ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ 200 ಅಡಿ ಆಳದ ಪ್ರಪಾತಕ್ಕೆ ಉಳಿಬಿದ್ದ ಬಿದ್ದ ಪರಿಣಾಮ 13 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ಊಟಿ ಬಳಿ ಕುನ್ನೂರು ರಸ್ತೆಯಲ್ಲಿ ಗುರುವಾರ ಬೆಳಗ್ಗೆ ಸಂಬವಿಸಿದೆ.

ಊಟಿ ಬಸ್ ನಿಲ್ದಾಣದಿಂದ ಕುನ್ನೂರಿಗೆ ಇಂದು ಬೆಳಗ್ಗೆ 11.30ಕ್ಕೆ 40 ಪ್ರಯಾಣಿಕರನ್ನು ಹೊತ್ತು ಪ್ರಯಾಣ ಆರಂಭಿಸಿತ್ತು. ಊಟಿ ಬಸ್ ನಿಲ್ದಾಣದಿಂದ 10 ಕಿ.ಮಿ ದೂರವಷ್ಟೇ ತೆರಳಿದ್ದ ತಮಿಳುನಾಡು ಸಾರಿಗೆ ಸಂಸ್ಥೆಗೆ ಸೇರಿದ ಬಸ್(ಟಿಎನ್ 43, ಎನ್ 568) ಕುನ್ನೂರು ರಸ್ತೆಯಲ್ಲಿ ಮಂದಡ ಹಾಗೂ ಕೆಟ್ಟಿ ವೆಲ್ಲಿ ಎಂಬ ಸ್ಥಳದ ನಡುವೆ ತಿರುವಿನಲ್ಲಿ ಸುಮಾರು 300 ಅಡಿ ಆಳದ ಪ್ರಪಾತಕ್ಕೆ ಉರುಳಿದ ಬಸ್ ಹತ್ತಾರು ಪಲ್ಟಿಯಾಗಿ ಛಿದ್ರಗೊಂಡ ಬಸ್ 200 ಅಡಿ ಆಳದಲ್ಲಿ ನಿಂತಿದೆ.

ಘಟನೆಯ ಭೀಕರತೆಗೆ ಆರು ಟೈರ್ ಹೊರತುಪಡಿಸಿ ಉಳಿದ ಎಲ್ಲಾ ಭಾಗಗಳು ಚೆಲ್ಲಾಪಿಲ್ಲಿಯಾಗಿದೆ. ರಭಸವಾಗಿ ಉರುಳುತ್ತಿದ್ದ ಹಿನ್ನೆಲೆಯಲ್ಲಿ ಬಸ್‍ನಲ್ಲಿದ್ದ ಪ್ರಯಾಣಿಕರು ಎಸೆಯಲ್ಪಟ್ಟಿದ್ದಾರೆ. ಇದರಿಂದ ಸ್ಥಳದಲ್ಲಿಯೇ 8 ಮಂದಿ ಮೃತಪಟ್ಟಿದ್ದಾರೆ. ಸುಮಾರು 25 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಊಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಿಸಲಾಗಿದೆ. ಮೃತರೆಲ್ಲರೂ ಕುನ್ನೂರಿನ ಸುತ್ತಮುತ್ತಲಿನ ನಿವಾಸಿಗಳೆಂದು ಗುರುತಿಸಲಾಗಿದೆ.

ಘಟನೆಯ ಹಿನ್ನೆಲೆಯಲ್ಲಿ ಸುಮಾರು ಒಂದು ತಾಸು ಊಟಿ-ಕುನ್ನೂರು ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಊಟಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳು ತೆರಳಿ ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ಪ್ರಪಾತದಿಂದ ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಳೆದ 15 ದಿನದ ಹಿಂದಷ್ಟೇ ಊಟಿ-ಮೈಸೂರು ರಸ್ತೆಯ ಗೂಡಲೂರು ಬಳಿ ಬೆಂಗಳೂರಿನ ಖಾಸಗಿ ಬಸ್ ಪ್ರಪಾತಕ್ಕೆ ಬಿದ್ದು ನಾಲ್ವರು ಮೃತಪಟ್ಟಿದ್ದನ್ನು ಸ್ಮರಿಸಬಹುದು. ಘಟನೆಗೆ ಮಳೆಯ ನಡುವೆ ವೇಗವಾಗಿ ಬಸ್ ಚಾಲನೆ ಮಾಡಿದ್ದೇ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

Translate »