ಸೇವಾ ಸಾಧನೆ ಮೆರೆದ 8 ಪೊಲೀಸರಿಗೆ `ನೈಟ್ಸ್ ಇನ್ ಖಾಕಿ’ ಪಾರಿತೋಷಕ ಪ್ರಧಾನ
ಮೈಸೂರು

ಸೇವಾ ಸಾಧನೆ ಮೆರೆದ 8 ಪೊಲೀಸರಿಗೆ `ನೈಟ್ಸ್ ಇನ್ ಖಾಕಿ’ ಪಾರಿತೋಷಕ ಪ್ರಧಾನ

June 15, 2018

ಮೈಸೂರು:  ಕೊಲೆ, ಸುಲಿಗೆ, ಕಳ್ಳತನ, ದೌರ್ಜನ್ಯ, ಗಲಾಟೆ, ಗದ್ದಲ ಹೀಗೆ ಸಮಾಜದಲ್ಲಿ ಯಾವುದೇ ಅಹಿತಕರ ಘಟನೆ ನಡೆದರು ಮೊದಲು ದೂಷಣೆಗೆ ಗುರಿಯಾಗುವುದು ಪೊಲೀಸರು. ತಮ್ಮದಲ್ಲದ ತಪ್ಪಿಗೂ ಆರೋಪ ಹೊರಬೇಕಾದ ಪರಿಧಿಯಲ್ಲಿ ಪೊಲೀಸರಿದ್ದಾರೆ. ಇಂತಹ ಸ್ಥಿತಿಯಲ್ಲೂ ನಿಷ್ಠೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿರುವ ಪೊಲೀಸರನ್ನು ಅಭಿನಂದಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಲಾಯಿತು.

ಮೈಸೂರು ರೌಂಡ್ ಟೇಬಲ್-21 (ಒಖಖಿ-21) ಮತ್ತು ಮೈಸೂರು ಲೇಡೀಸ್ ಸರ್ಕಲ್-9 (ಒಐಅ-9) ಸಹಯೋಗದಲ್ಲಿ ಚಾಮುಂಡಿಬೆಟ್ಟ ತಪ್ಪಲಿನ ಆಲೀವ್ ಗಾರ್ಡ್‍ನ್‍ನ ಸಮಾವೇಶ ಸಭಾಂಗಣದಲ್ಲಿ ಇಂದು ಸಂಜೆ ನಡೆದ 45ನೇ ವಾರ್ಷಿಕ ‘ನೈಟ್ಸ್ ಇನ್ ಖಾಕಿ’ ಪೊಲೀಸ್ ಪಾರಿತೋಷಕ ಪ್ರಧಾನ-2018 ಸಮಾರಂಭದಲ್ಲಿ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 8 ಮಂದಿ ಪೊಲೀಸರನ್ನು ಅಭಿನಂದಿಸಿ, ಅವರ ಉತ್ತಮ ಸೇವೆಯನ್ನು ಪ್ರಶಂಸಿಸಲಾಯಿತು.

ಯಾವುದೇ ಪ್ರಕರಣವನ್ನು ಭೇದಿಸುವಾಗ ಅಧಿಕಾರಿಗಳ ಮಾರ್ಗದರ್ಶನ, ನಿರ್ದೇಶನದಂತೆ ಹಗಲಿರುಳು ಶ್ರಮಿಸುವವರು ಸಿಬ್ಬಂದಿಗಳು. ಅನೇಕ ಸಂದರ್ಭದಲ್ಲಿ ನಿಷ್ಠೆಯಿಂದ ಕೆಲಸ ಮಾಡಿದವರು ಬೆಳಕಿಗೆ ಬರುವುದಿಲ್ಲ. ಹಾಗೆಂದ ಮಾತ್ರಕ್ಕೆ ತಮ್ಮ ಕರ್ತವ್ಯದ ಬಗ್ಗೆ ನಿರ್ಲಕ್ಷ್ಯ ತಾಳದೆ, ಸಮಾಜಕ್ಕಾಗಿ ದುಡಿಯುವ ಪೊಲೀಸರ ಸಂಖ್ಯೆ ಕ್ಷೀಣಿಸಿಲ್ಲ. ಹೀಗೆ ತಮ್ಮ ಕಾರ್ಯವ್ಯಾಪ್ತಿಯಲ್ಲೇ ಉತ್ತಮ ಕೆಲಸ ಮಾಡುವ ಮೂಲಕ ‘ನೈಟ್ಸ್ ಇನ್ ಖಾಕಿ’ ಪೊಲೀಸ್ ಪಾರಿತೋಷಕಕ್ಕೆ ಬಾಜನರಾದ ಮೈಸೂರಿನ ವಿವಿ ಪುರಂ ಠಾಣೆ ಹೆಡ್‍ಕಾನ್‍ಸ್ಟೇಬಲ್ ಆರ್.ಎಂ.ಸೋಮಶೇಖರ್, ಎನ್‍ಆರ್ ಠಾಣೆ ಕಾನ್‍ಸ್ಟೇಬಲ್ ಕೆ.ಸಿ.ಗಂಗಾಧರ್, ದೇವರಾಜ ಉಪವಿಭಾಗದ ಎಸಿಪಿ ಕಚೇರಿಯಲ್ಲಿ ಮಹಿಳಾ ಹೆಡ್ ಕಾನ್‍ಸ್ಟೇಬಲ್ ಆಗಿರುವ ನಸ್ರೀನ್ ತಾಜ್, ಕೆ.ಆರ್.ಸಂಚಾರ ಠಾಣೆ ಕಾನ್‍ಸ್ಟೇಬಲ್ ಎಸ್.ಆರ್.ರವೀಶ್, ನಂಜನಗೂಡು ಸಂಚಾರ ಪೊಲೀಸ್ ಠಾಣೆಯ ಎಎಸ್‍ಐ ಪ್ರಭುಲಿಂಗಾರಾಧ್ಯ, ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆಯಲ್ಲಿ ರೈಟರ್ ಆಗಿರುವ ಹೆಡ್‍ಕಾನ್‍ಸ್ಟೇಬಲ್ ಎಂ.ಮಹೇಶ್, ಹುಣಸೂರು ಗ್ರಾಮಾಂತರ ಠಾಣೆ ಕಾನ್‍ಸ್ಟೇಬಲ್ ಅಶ್ವಿನಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಶಸ್ತ್ರ ಮುಖ್ಯಪೇದೆ ರಾಜಕುಮಾರ್ ಅವರನ್ನು ಸಂಸದ ಪ್ರತಾಪ್‍ಸಿಂಹ ಹಾಗೂ ನಗರ ಪೊಲೀಸ್ ಆಯುಕ್ತರಾದ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಆತ್ಮೀಯವಾಗಿ ಅಭಿನಂದಿಸಿದರು.

ಎಂಆರ್‍ಟಿ-21ರ ಕಾರ್ಯದರ್ಶಿ ಅಲಿ ವಾಘ್, ವಲಯ 13ರ ಛೇರ್ಮನ್ ಮಯೂರ್ ಷಾ, ಎಂಎಲ್‍ಸಿ-9ರ ಛೇರ್ ಪರ್ಸನ್ ಕೇಕುಶ್ವ ಸೇರಿದಂತೆ ಅನೇಕ ಪದಾಧಿಕಾರಿಗಳು, ಸದಸ್ಯರು, ಪ್ರಶಸ್ತಿ ಪುರಸ್ಕøತ ಪೊಲೀಸರ ಕುಟುಂಬದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Translate »