ಬಿರುಗಾಳಿಗೆ ತೆಂಗಿನ ಮರಗಳು ಧರೆಗೆ
ಮೈಸೂರು

ಬಿರುಗಾಳಿಗೆ ತೆಂಗಿನ ಮರಗಳು ಧರೆಗೆ

April 24, 2018

ಹುಣಸೂರು: ಕಳೆದೆರಡು ದಿನಗಳಿಂದ ಹುಣಸೂರು ತಾಲೂಕಿನ ಅಲ್ಲಲ್ಲಿ ಗುಡುಗು, ಬಿರುಗಾಳಿ ಸಹಿತ ಬಿದ್ದ ಮಳೆಗೆ ತೆಂಗಿನ ಮರಗಳು ಧರೆಗುರುಳಿದ್ದರೆ, ಮನೆಯ ಮೇಲ್ಚಾವಣೆ ಹಾರಿ ಹೋಗಿದೆ. ಲಕ್ಷಾಂತರ ರೂ.ಗಳ ನಷ್ಟಸಂಭವಿಸಿದೆ.

ತಾಲೂಕಿನ ಚಿಕ್ಕಹೆಜ್ಜೂರಿನ ದೇವರಾಜ ಅವರಿಗೆ ಸೇರಿದ ಮನೆ ಮುಂದಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಮರ ಅರ್ಧಕ್ಕೆ ಕಡಿದು ಬಿದ್ದಿದೆ. ಮನೆಯ ಮೇಲ್ಚಾವಣ ಗೆ ಹಾಕಿದ್ದ ಹೆಂಚುಗಳು ಬಿರುಗಾಳಿಗೆ ಹಾರಿ ಹೋಗಿದೆ, ಗೋಡೆ ಬಿರುಕು ಬಿಟ್ಟಿದೆ.

ಗ್ರಾಮದ ನಂಜುಂಡಪ್ಪ ಎಂಬುವರ ಮನೆ ಸಹ ಬಿರುಕು ಬಿಟ್ಟಿದೆ, ಮೂರ್ತಿ, ಮಾಜಿ ಚೇರ್ಮನ್ ಚಂದ್ರಶೇಖರ್ ಅವರಿಗೆ ಸೇರಿದ ಮನೆಯ ಹೆಂಚುಗಳು ಹಾರಿ ಹೋಗಿದೆ, ರೂಪಾ ನಂದೀಶ್ ಎಂಬು ವರು ಇತ್ತೀಚೆಗಷ್ಟೆ ನಿರ್ಮಿಸಿದ್ದ ಹೊಸ ಮನೆಯ ಮೇಲ್ಚಾವಣೆಗೆ ಹೊದಿಸಿದ್ದ ಕಲ್ನಾರ್ ಶೀಟ್ ಹಾರಿ ಹೋಗಿ ದೂರದ ವಿದ್ಯುತ್ ಲೈನ್ ಮೇಲೆ ಬಿದ್ದು, ಇಡೀ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತ ಗೊಂಡಿತ್ತು. ಸುಮಾರು 15ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಮೈಸೂರು ಬಂಟ್ವಾಳ ಹೆದ್ದಾರಿಯ ಪಕ್ಕದ ಯಶೋಧರಪುರ ಬಳಿ ಹೈಟೆನ್ಸ್‍ನ್ ತಂತಿ ಮೇಲೆ ತೆಂಗಿನ ಮರ ಉರುಳಿ ಬಿದ್ದಿದ್ದರಿಂದಾಗಿ ಆ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿದು ಹೋಗಿತ್ತು.

Translate »