ಮೈಸೂರು

ಕೋಣನೂರಿನಲ್ಲಿ ಬಿರುಗಾಳಿ ಸಹಿತ ಮಳೆ-ಅಪಾರ ನಷ್ಟ

April 24, 2018

ತಗಡೂರು, ಏ. 23(ಗುರುಸ್ವಾಮಿ)- ನಂಜನಗೂಡು ತಾಲೂಕಿನ ಕೋಣನೂರು ಗ್ರಾಮದಲ್ಲಿ ನಿನ್ನೆ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಅಪಾರ ನಷ್ಟ ಸಂಭವಿಸಿದೆ.

ಕಿಟ್ಟಪ್ಪ ಎಂಬುವರಿಗೆ ಸೇರಿದ ಬಾಳೆ ಸಂಪೂರ್ಣ ನಾಶವಾಗಿದೆ. ಕೂಸಣ್ಣ ಎಂಬುವರಿಗೆ ಸೇರಿದ 4 ತೆಂಗಿನ ಮರಗಳು ಧರೆಗುರುಳಿವೆ. ಗ್ರಾಮದ ಕರಿಯಪ್ಪ ಎಂಬುವರಿಗೆ ಸೇರಿದ ಮನೆ ಮೇಲ್ಛಾವಣ ಹಾರಿ ಹೋಗಿದ್ದು, ಅಪಾರ ನಷ್ಟ ಸಂಭವಿಸಿದೆ. ಲಕ್ಷಾಂತರ ರೂ.ಗಳ ನಷ್ಟವಾಗಿ ಇನ್ನಿತರ ಫಸಲು ಕೂಡ ಮಳೆಗೆ ಹಾಳಾಗಿವೆ. ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ರೈತರು ಆಗ್ರಹಿಸಿದ್ದಾರೆ.

Translate »