3ನೇ ಮಗುವೂ ಹೆಣ್ಣಾಗಿದ್ದರಿಂದ ಹರಿತವಾದ ಉಗುರಿನಿಂದ ನವಜಾತ ಶಿಶುವಿನ ಕತ್ತು ಸೀಳಿ ಕೊಂದ ತಾಯಿ
ದೇಶ-ವಿದೇಶ

3ನೇ ಮಗುವೂ ಹೆಣ್ಣಾಗಿದ್ದರಿಂದ ಹರಿತವಾದ ಉಗುರಿನಿಂದ ನವಜಾತ ಶಿಶುವಿನ ಕತ್ತು ಸೀಳಿ ಕೊಂದ ತಾಯಿ

April 24, 2018

ಥಾಣೆ,ಏ.23- ಪ್ರಧಾನಿ ನರೇಂದ್ರ ಮೋದಿ ಅವರು ಬೇಟಿ ಬಜಾವೋ ಬೇಟಿ ಪಡಾವೋ ಯೋಜನೆಗಳನ್ನು ಜಾರಿಗೆ ತಂದು ಹೆಣ್ಣುಮಕ್ಕಳ ಸುರಕ್ಷತೆ ಬಗ್ಗೆ ಹೋರಾಡುತ್ತಿದ್ದರೆ ಅತ್ತ ತಾಯಿಯೊಬ್ಬಳು ತನಗೆ ಹೆಣ್ಣು ಮಗು ಜನಿಸಿತ್ತೇಂದು ತನ್ನ ಕೈ ಉಗುರಿನಿಂದ ಮಗುವಿನ ಕತ್ತು ಸೀಳಿ ಕೊಲೆಗೈದಿರುವ ಅಮಾನವೀಯ ಘಟನೆ ಥಾಣೆಯ ಅಂಬಾರ್ಡೆ ಗ್ರಾಮದಲ್ಲಿ ನಡೆದಿದೆ.

27 ವರ್ಷದ ಮಹಿಳೆ ವೈಶಾಲಿ ಪ್ರಧಾನ್ ಎಂಬಾಕೆ ವಾರದ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮೂರನೇ ಬಾರಿಗೂ ಹೆಣ್ಣು ಮಗು ಜನಿಸಿದ್ದರಿಂದ ಮಗುವಿನ ಕತ್ತು ಸೀಳಿ ಕೊಲೆ ಮಾಡಿದ್ದು ಈ ಸಂಬಂಧ ಪೆÇಲೀಸರು ಆಕೆಯನ್ನು ಬಂಧಿಸಿದ್ದಾರೆ. ಗಂಡ ಕುಡುಕನಾಗಿದ್ದು ಮೂರನೇ ಮಗುವು ಹೆಣ್ಣಾಗಿದ್ದರಿಂದ ಅದರ ಪೆÇೀಷಣೆ ಕಷ್ಟವಾಗುತ್ತದೆ ಎಂದು ತೀರ್ಮಾನಿಸಿ ತನ್ನ ನವಜಾತ ಶಿಶುವನ್ನು ಕಳೆದ ಶನಿವಾರ ತನ್ನ ಹರಿತವಾದ ಉಗುರಿನಿಂದ ಕತ್ತು ಸೀಳಿ ಕೊಂದಿದ್ದಾಳೆ. ನವಜಾತ ಶಿಶುವನ್ನು ಕೊಂದ ಆರೋಪದ ಮೇಲೆ ಖಡಕ್ ಪಾಡಾ ಪೆÇಲೀಸರು ವೈಶಾಲಿಯನ್ನು ಬಂಧಿಸಿದ್ದಾರೆ.

Translate »