ಮತದಾರರು ನನ್ನ ಪುನರಾಯ್ಕೆ ಬಯಸಿದ್ದಾರೆ
ಮೈಸೂರು

ಮತದಾರರು ನನ್ನ ಪುನರಾಯ್ಕೆ ಬಯಸಿದ್ದಾರೆ

April 24, 2018

ಕೆ.ಆರ್.ನಗರ: ತನಗೆ ಮತ ನೀಡಿದ ಮತದಾರರಿಗೆ ಯಾವುದೇ ತಾರತಮ್ಯವಿಲ್ಲದೆ ಸ್ಪಂದಿಸಿರು ವುದರಿಂದ ಮೂರನೇ ಬಾರಿಯೂ ಅತ್ಯಧಿಕ ಮತ ನೀಡುವುದರ ಮೂಲಕ ಈ ಕ್ಷೇತ್ರದ ಜನ ತನ್ನನು ಆಯ್ಕೆ ಮಾಡಲಿ ದ್ದಾರೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.

ನಿವೃತ್ತ ಡಿಡಿಪಿಐ ರಾಮ ಲಿಂಗು ಅವರನ್ನು ಪಟ್ಟಣದ ಅವರ ನಿವಾಸದಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತ ನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸಿನಿಂದ ಕೆಲಸ ಮಾಡಿ ಈಗ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಅಪಾರ ಬಲ ಬಂದಂತಾಗಿದೆ. ಅವರ ಹಿತೈಷಿಗಳೂ ತÀನ್ನನು ಬೆಂಬಲಿಸಿ ದ್ದಾರೆ ಎಂದರು. ವಿಶ್ವಕರ್ಮ ಜನಾಂಗದ ಯುವ ಮುಖಂಡರುಗಳಾದ ಧನಂಜಯ, ಕಾರ್ತಿಕ್, ಯೋಗೇಶ್, ಪವನ್, ರೋಷನ್, ಮುಬಾರಕ್, ಇಸ್ತರ್ ಸೇರಿದಂತೆ 30ಕ್ಕೂ ಹೆಚ್ಚು ಯುವ ಮುಖಂಡರು ಕಾಂಗ್ರೆಸ್ ತೊರದು ಜೆಡಿಎಸ್‍ಗೆ ಸೇರಿದರು.

ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರ ದಲ್ಲಿ ಇಲ್ಲದಿದ್ದರೂ ವಿರೋಧÀ ಪಕ್ಷದ ಶಾಸಕ ನಾಗಿ ಅನುದಾನ ತಂದು ಯಾವು ದೇ ತಾರತಮ್ಯ ವಿಲ್ಲದೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ದುಡಿದಿದ್ದೇನೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು ರೈತರ ಆತ್ಮಹತ್ಯೆ ತಡೆಗಟ್ಟುವಲ್ಲಿ ವಿಫಲವಾಗಿದೆ. ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ರಾಜ್ಯದ ಜನ ತಿರ್ಮಾನ ಮಾಡಿದ್ದಾರೆ ಎಂದು ತಿಳಿಸಿದರು
ಪುರಸಭಾ ಸದಸ್ಯರಾದ ಕೆ.ಎಲ್. ಜಗದೀಶ್, ಉಮೇಶ್, ಯುವ ಜೆಡಿಎಸ್ ಕಾರ್ಯಾಧ್ಯಕ್ಷ ಎಂ.ಎಸ್.ಕಿಶೋರ್, ಎಂ.ಜಿ.ಮಂಜುನಾಥ, ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ಕಾರ್ಯದರ್ಶಿ ಕುಚೇಲ, ಪುರಸಭಾ ಮಾಜಿ ಸದಸ್ಯ ರತ್ನಮ್ಮ ಜಯಾರಾಜೇಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ಎಂ.ಕೆ.ಮಹದೇವ, ನಾಮ ದಾರಿ ಸಮುದಾಯದ ಮುಖಂಡ ಹಾರಂಬಳ್ಳಿ ರಾಮಚಂದ್ರ, ಮಧು, ನವೀನ, ರಾಮೇಗೌಡ, ಅಣ್ಣೇಗೌಡ, ಅಭಿ, ಚೇತು, ಮನು, ಹೋಟೆಲ್ ರವಿ ಹಾಗೂ ಇನ್ನಿತರರು ಹಾಜರಿದ್ದರು.

Translate »