ತಿ.ನರಸೀಪುರ ಬಿಜೆಪಿ ಅಭ್ಯರ್ಥಿ ಶಂಕರ್ ನಾಮಪತ್ರ ಸಲ್ಲಿಕೆ
ಮೈಸೂರು

ತಿ.ನರಸೀಪುರ ಬಿಜೆಪಿ ಅಭ್ಯರ್ಥಿ ಶಂಕರ್ ನಾಮಪತ್ರ ಸಲ್ಲಿಕೆ

April 24, 2018

ತಿ.ನರಸೀಪುರ, ಏ.23(ಎಸ್‍ಕೆ)- ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜಾತ್ಯಾತೀತ ಜನತಾದಳ ಪಕ್ಷ ಗಳಿಗೆ ಸೆಡ್ಡು ಹೊಡೆಯಲು ಸಜ್ಜಾಗಿರುವ ಬಿಜೆಪಿ ಅಭ್ಯರ್ಥಿ ಎಸ್.ಶಂಕರ್ ಅವರು ಸೋಮವಾರ ಮಧ್ಯಾಹ್ನ ಮಿನಿ ವಿಧಾನ ಸೌಧದಲ್ಲಿ ನಾಮಪತ್ರ ಸಲ್ಲಿಸಿದರು.

ಪಟ್ಟಣದ ಶ್ರೀ ಗುಂಜಾ ನರಸಿಂಹ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ತೆರೆದ ವಾಹನದಲ್ಲಿ ಪ್ರಮುಖ ರಸ್ತೆಗಳಲ್ಲಿ ಮೆರವಣ ಗೆ ಮೂಲಕ ತಾಲೂಕು ಕಚೇರಿಯಲ್ಲಿ ಮಂಜುನಾಥ್ ಅವರಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿದ ನಂತರ ಎಸ್. ಶಂಕರ್ ಮಾತನಾಡಿ, ದಶಕದಿಂದ ಕಾಂಗ್ರೆಸ್ಸನ್ನು ಜೆಡಿಎಸ್‍ಗೆ ಕೆಡವಲು ಸಾಧ್ಯವಾಗಿಲ್ಲ. ಕೆಜೆಪಿ ಮತ್ತು ಬಿಎಸ್‍ಆರ್ ಪಕ್ಷ ಬಿಜೆಪಿ ಆಗಿದ್ದರಿಂದ ಬಿಜೆಪಿ ಶಕ್ತಿಯುತ ವಾಗಿದೆ. ಪರಿವಾರ ಮತ್ತು ತಳವಾರರನ್ನು ಎಸ್ಟಿಗೆ ಸೇರ್ಪಡೆ ಮಾಡಿದ್ದರಿಂದ ಆ ಸಮು ದಾಯಗಳು ನಮ್ಮ ಪರವಾಗಿವೆ. ಉತ್ತರ ಭಾರತದಲ್ಲಿ ಈಗಾಗಲೇ ಕಾಂಗ್ರೆಸ್ ಮುಕ್ತ ಗೊಂಡಿದ್ದು, ಕರ್ನಾಟಕದಲ್ಲೂ ಕಾಂಗ್ರೆಸ್ ಸೋತರೆ ಭಾರತ ಸಂಪೂರ್ಣವಾಗಿ ಕಾಂಗ್ರೆಸ್ ಮುಕ್ತವಾಗಲಿದೆ ಎಂದರು.

ಕಮಲಕ್ಕೆ ಸೈನಿಕರ ಕಾವಲು: ಪಟ್ಟಣದಲ್ಲಿ ಸೋಮವಾರ ನಡೆದ ಬಿಜೆಪಿ ಅಭ್ಯರ್ಥಿ ಎಸ್.ಶಂಕರ್ ನಾಮಪತ್ರ ಸಲ್ಲಿಸುವ ಮೆರ ವಣ ಗೆಗೆ ಅರೆಸೇನಾ ಪಡೆಯ ಕಾವಲನ್ನು ನೀಡಿದ್ದು, ವಿಶೇಷವಾಗಿತ್ತು. ಮೆರವಣ ಗೆ ಮುಂಭಾಗ ಪೊಲೀಸ್ ಜೀಪಿನೊಂದಿಗೆ ಆರೇಳು ಸೈನಿಕರು ಶಸ್ತ್ರಸಜ್ಜಿತರಾಗಿ ಮುಂದೆ ಬರುತ್ತಿದ್ದರೆ ಕೊನೆಯಲ್ಲಿ ಮೀಸಲು ತುಕಡಿ ಸಿಬ್ಬಂದಿಗಳಿದ್ದ ವ್ಯಾನ್ ಆಗಮಿಸುತ್ತಿತ್ತು. ಮೆರವಣ ಯುದ್ದಕ್ಕೂ ಕೇಸರಿ ಪಡೆ ಪಕ್ಷದ ಬಾವುಟ ಹಿಡಿದು ಬಂದರು. ಜೆಡಿಎಸ್ ಹಿರಿಯ ಮುಖಂಡ ದಿ.ಎಂ.ಸಿ.ಸುಂದ ರೇಶನ್ ಪತ್ನಿ ಧರಣ ದೇವಿ ಹಾಗೂ ಪುತ್ರ ಸಾಮ್ರಾಟ್ ಅವರು ಎಸ್.ಶಂಕರ್ ಸಾಥ್ ನೀಡಿ ಬಿಜೆಪಿಯಲ್ಲಿ ಗುರುತಿಸಿಕೊಂಡರು.

ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪ ಗೌಡ, ಕೆ.ಎಂ.ಚಿಕ್ಕಮಾದನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್, ಜಿಪಂ ಮಾಜಿ ಸದಸ್ಯ ಕೆ.ಸಿ.ಲೋಕೇಶ್ ನಾಯಕ, ಕ್ಷೇತ್ರಾಧ್ಯಕ್ಷ ಹೆಚ್.ಎಂ. ಪರಶಿವಮೂರ್ತಿ, ಮುಖಂಡರಾದ ಮೂಗೂರು ಸಿದ್ದರಾಜು, ಕರೋಹಟ್ಟಿ ಬಸವರಾಜು, ವೀಣಾ ಶಿವಕುಮಾರ್, ರಮೇಶ, ಗೌಡ್ರು ಪ್ರಕಾಶ್, ಜಿ.ಕೆ.ನಯನ್‍ಗೌಡ, ಕಾಳೇಗೌಡ, ನಾಗಲಗೆರೆ ಶಿವಕುಮಾರ್ ಹಾಗೂ ಇನ್ನಿತರರು ಹಾಜರಿದ್ದರು.

Translate »