ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಫುಟ್‍ಪಾತ್ ಮೇಲೆ ಮಲಗಿದ್ದ ಅಮಾಯಕನ ಪ್ರಾಣ ತೆಗೆದ ಎಸ್‍ಐ ಪುತ್ರಿ!
ದೇಶ-ವಿದೇಶ

ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಫುಟ್‍ಪಾತ್ ಮೇಲೆ ಮಲಗಿದ್ದ ಅಮಾಯಕನ ಪ್ರಾಣ ತೆಗೆದ ಎಸ್‍ಐ ಪುತ್ರಿ!

April 24, 2018

ಹೈದಾರಾಬಾದ್:  ಪಾದಚಾರಿ ಮಾರ್ಗದಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಪುತ್ರಿ ಕಾರು ಹರಿಸಿ ಕೊಂದಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ. ಕುಶೈಗುಡಾ ಬಸ್ ಡಿಪೋ ಬಳಿ ಘಟನೆ ನಡೆದಿದ್ದು, ತಡರಾತ್ರಿ ಪಾರ್ಟಿ ಮುಗಿಸಿಕೊಂಡು ತನ್ನ ಮೂವರು ಸ್ನೇಹಿತರೊಂದಿಗೆ ಕಾರಿನಲ್ಲಿ ಯುವತಿ ಬರುತ್ತಿದ್ದ ವೇಳೆ ಕುಡಿದ ಮತ್ತಿನಲ್ಲಿ ಕಾರಿನ ನಿಯಂತ್ರಣ ಕಳೆದು ಕೊಂಡಿದ್ದಾಳೆ. ಈ ವೇಳೆ ಕಾರು ರಸ್ತೆ ವಿಭಜಕ ದಾಟಿ, ಮತ್ತೊಂದು ಬದಿಯ ಪಾದಚಾರಿ ಮಾರ್ಗದಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಏಕಾಏಕಿ ಹರಿದಿದೆ. ಕಾರು ಹರಿದ ಪರಿಣಾಮ ಪಾದಚಾರಿ ಮಾರ್ಗದಲ್ಲಿ ಮಲಗಿದ್ದ ವ್ಯಕ್ತಿ ಅಶೋಕ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಆರೋಪಿತ ವಿದ್ಯಾರ್ಥಿನಿ ಸ್ಥಳೀಯ ಪೊಲೀಸ್ ಇನ್ಸ್ ಪೆಕ್ಟರ್ ಪುತ್ರಿ ಎಂದು ತಿಳಿದುಬಂದಿದೆ. ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳೀಯರು 108 ಸಿಬ್ಬಂದಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊ ಲೀಸರು ವಿದ್ಯಾರ್ಥಿನಿ ಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಸ್ತುತ ವಿದ್ಯಾರ್ಥಿನಿ ವಿರುದ್ಧ ಐಪಿಸಿ ಸೆಕ್ಷನ್ 304 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸು ತ್ತಿದ್ದಾರೆ. ಅಪಘಾತದ ವೇಳೆ ವಿದ್ಯಾರ್ಥಿನಿ ಕುಡಿದಿದ್ದಳು ಎನ್ನಲಾಗಿದೆ.

Translate »