ಪಶುವೈದ್ಯೆ ಅತ್ಯಾಚಾರ-ಹತ್ಯೆ: ನಾಲ್ವರೂ ಆರೋಪಿಗಳಿಗೆ ನ್ಯಾಯಾಂಗ ಬಂಧನ
ಮೈಸೂರು

ಪಶುವೈದ್ಯೆ ಅತ್ಯಾಚಾರ-ಹತ್ಯೆ: ನಾಲ್ವರೂ ಆರೋಪಿಗಳಿಗೆ ನ್ಯಾಯಾಂಗ ಬಂಧನ

December 1, 2019

ಹೈದರಾಬಾದ್,ನ.30-ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿದ ಪಶುವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಆರೋಪಿಗಳನ್ನು ತಕ್ಷಣವೇ ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿ ಸ್ಥಳೀ ಯರು, ಮಹಿಳಾ ಸಂಘಟನೆ ಸದಸ್ಯರು, ವಿದ್ಯಾರ್ಥಿಗಳು ಶಂಶಾ ಬಾದ್ ಪೆÇಲೀಸ್ ಠಾಣೆ ಎದುರು ಶನಿವಾರ ಭಾರೀ ಪ್ರತಿಭಟನೆ ನಡೆಸಿದರು. ಬಹಳ ರೊಚ್ಚಿಗೆದ್ದ ಪ್ರತಿಭಟನಾಕಾರರು ಠಾಣೆಯೊ ಳಗೆ ನುಗ್ಗಲೂ ಯತ್ನಿಸಿದರು. ಆಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದರು.

ಶಂಶಾಬಾದ್ ಪೆÇಲೀಸ್ ಠಾಣೆಯಲ್ಲಿ ಏರ್ಪಟ್ಟಿದ್ದ ಸಂದಿಗ್ಧ ಸ್ಥಿತಿಯಲ್ಲೇ ಹಿಂದಿನ ಬಾಗಿಲಿನಿಂದ ಆಗಮಿಸಿದ ಮ್ಯಾಜಿಸ್ಟ್ರೇಟ್ ನಾಲ್ವರು ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸುವಂತೆ ಆದೇಶಿಸಿದ್ದಾರೆ. ಆರೋಪಿಗಳಾದ ಮೊಹಮ್ಮದ್ ಆರಿಫ್, ಜೊಲ್ಲು ನವೀನ್, ಜೊಲ್ಲು ಶಿವಾ ಮತ್ತು ಚಿಂತಕುಂಟಾ ಕೇಶವುಲು ಅವರನ್ನು ಮಹಬೂಬ್‍ನಗರ ಜೈಲಿಗೆ ಸ್ಥಳಾಂತರಿಸ ಲಾಗಿದೆ. ಪೆÇಲೀಸ್ ಠಾಣೆ ಮುಂದೆ ಜಮಾವಣೆಗೊಂಡಿದ್ದ ನೂರಾರು ಜನರು, ಬಹಳ ಆಕ್ರೋಶಗೊಂಡಿದ್ದರು. ಸ್ಥಳೀಯ ನಿವಾಸಿಗಳು, ಮಹಿಳಾ ಸಂಘಟನೆಗಳ ಸದಸ್ಯರು ಮತ್ತು ಕಾಲೇಜು ವಿದ್ಯಾರ್ಥಿಗಳು ಭಾರೀ ಸಂಖ್ಯೆಯಲ್ಲಿ ಪೆÇಲೀಸ್ ಠಾಣೆ ಎದುರು ನೆರೆದಿದ್ದರು. ಅತ್ಯಂತ ಹೇಯ ಕೃತ್ಯವೆಸಗಿರುವ ನಾಲ್ವರೂ ಆರೋಪಿಗಳ ವಿಚಾರ ದಲ್ಲಿ ಯಾವುದೇ ತನಿಖೆ, ವಿಚಾರಣೆಯ ಅಗತ್ಯವಿಲ್ಲ. ತಕ್ಷಣವೇ ನಾಲ್ವರೂ ಆರೋಪಿಗಳನ್ನು ಸಾರ್ವ ಜನಿಕವಾಗಿ ನೇಣಿ ಗೇರಿಸ ಬೇಕು ಎಂದು ಒತ್ತಾಯಿಸಿ ದರು. ಆರೋಪಿಗಳ ವಿರುದ್ಧ ಸಾಮಾಜಿಕ ಜಾಲ ತಾಣದಲ್ಲಿ ಜನರು ಹಾಗೂ ಸೆಲೆಬ್ರಿಟಿಗಳಿಂದಲೂ ಆಕ್ರೋಶ ವ್ಯಕ್ತವಾಗುತ್ತಿದೆ.

ವಕಾಲತು ಇಲ್ಲ: ಪಶುವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಾಲ್ವರೂ ಆರೋಪಿಗಳ ಪರ ವಕಾಲತು ವಹಿಸದಿ ರಲು ತೆಲಂಗಾಣ ವಕೀಲರ ಸಂಘ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಪ್ರಕರಣದ ಆರೋಪಿಗಳಿಗೆ ಯಾವುದೇ ರೀತಿಯ ಕಾನೂನು ನೆರವು ನೀಡುವುದಿಲ್ಲ ಎಂದು ಶಾದ್ ನಗರದ ಬಾರ್ ಅಸೋಸಿಯೇಷನ್ ಘೋಷಿಸಿದೆ.

Translate »