ಮುಕ್ತ ವಿವಿಯಲ್ಲಿ ಯಶಸ್ವಿ ಉದ್ಯೋಗ ಮೇಳ
ಮೈಸೂರು

ಮುಕ್ತ ವಿವಿಯಲ್ಲಿ ಯಶಸ್ವಿ ಉದ್ಯೋಗ ಮೇಳ

December 1, 2019

ಮೈಸೂರು, ನ.30(ಎಂಟಿವೈ)- ನಿರು ದ್ಯೋಗಿ ಯುವ ಜನರಿಗೆ ಉದ್ಯೋಗಾವ ಕಾಶ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಉದ್ಯೋಗ ಘಟಕ ಶನಿವಾರ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ 10 ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿ ಗಳಲ್ಲಿ 3900 ಮಂದಿ ಕೆಲಸ ಗಿಟ್ಟಿಸಿ ಕೊಂಡರೆ, 600 ಮಂದಿ ಎರಡನೇ ಹಂತದ ಸಂದರ್ಶನಕ್ಕೆ ಆಯ್ಕೆಯಾದರು.

ವಿವಿಧ ಪದವಿ ಪಡೆದು ಉದ್ಯೋಗ ಅನ್ವೇ ಷಣೆಯಲ್ಲಿ ತೊಡಗಿದ್ದ ನಿರುದ್ಯೋಗಿಗಳು ಶನಿವಾರ ಬೆಳಗಿನಿಂದಲೇ ತಂಡೋಪತಂಡ ವಾಗಿ ವೈಯಕ್ತಿಕ ವಿವರ, ವಿದ್ಯಾರ್ಹತೆಯ ದಾಖಲೆಗಳನ್ನು ಹಿಡಿದು ಮುಕ್ತ ವಿವಿಯತ್ತ ಧಾವಿಸಿದರು. ಇದರಿಂದ ಸಂಜೆವರೆಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲ ಯದ ಅಂಗಳ ಉದ್ಯೋಗಾಕಾಂಕ್ಷಿಗಳಿಂದ ತುಂಬಿ ತುಳುಕುತ್ತಿತ್ತು. ಮೈಸೂರು, ಚಾಮ ರಾಜನಗರ, ಕೊಡಗು, ಮಂಡ್ಯ, ಹಾಸನ, ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಉದ್ಯೋಗಾಕಾಂಕ್ಷಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದ ಕಂಪನಿಗಳ ಖಾಲಿ ಇರುವ ಹುದ್ದೆ ಗಿಟ್ಟಿಸಿಕೊಳ್ಳಲು ಸಂದರ್ಶನದಲ್ಲಿ ಭಾಗಿಯಾದರು.

ಮುಕ್ತ ವಿವಿ ಮೊದಲ ಬಾರಿಗೆ ಆಯೋ ಜಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ತಾಂತ್ರಿಕ ಮತ್ತು ವೈದ್ಯಕೀಯ ಕೋರ್ಸ್ ಮಾಡಿದ ಅಭ್ಯರ್ಥಿಗಳು ಹೊರತುಪಡಿಸಿ, ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಐಟಿಐ, ಡಿಪೆÇ್ಲಮಾ, ಸ್ನಾತಕೋತ್ತರ ಪದವಿ ಸೇರಿದಂತೆ ಇನ್ನಿತರ ಕೋರ್ಸ್ ಮಾಡಿರುವ ಅಭ್ಯರ್ಥಿಗಳು ಪಾಲ್ಗೊಂಡು ಅದೃಷ್ಟ ಪರೀಕ್ಷೆಗೆ ಒಳಗಾದರು. ಒಬ್ಬೊಬ್ಬರು ಮೂರ್ನಾಲ್ಕು ಕಂಪನಿಗಳ ಸಂದ ರ್ಶನ ಎದುರಿಸಲು ವೈಯಕ್ತಿಕ ವಿವರ ನೀಡಲು ಮುಗಿಬಿದ್ದರು.

ಎರಡನೇ ಹಂತದ ಸಂದರ್ಶನಕ್ಕೆ ಆಯ್ಕೆಯಾಗಿರುವ 600 ಮಂದಿ ಒಂದು ವಾರದೊಳಗೆ ಮತ್ತೆ ಸಂದರ್ಶನ ನಡೆಸಿ, ಉದ್ಯೋಗ ನೀಡುವುದಾಗಿ ಕಂಪನಿಗಳ ಮುಖ್ಯಸ್ಥರು ಭರವಸೆ ನೀಡಿದ್ದಾರೆ.

7300 ನೋಂದಣಿ: ಕಳೆದ 1 ತಿಂಗ ಳಿಂದ ಆನ್‍ಲೈನ್ ಮೂಲಕ ಹೆಸರು ನೋಂದಣಿ ಮಾಡಿಕೊಳ್ಳಲು ಅವ ಕಾಶ ಇತ್ತು. ನ.29ರವರೆಗೆ 4100 ಮಂದಿ ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಂಡಿ ದ್ದರು. ಇಂದು ಬೆಳಿಗ್ಗೆ ಸ್ಥಳದಲ್ಲೇ ನೂರಾರು ಮಂದಿ ನೋಂದಣಿ ಮಾಡಿಕೊಂಡರು. ಹಾಗಾಗಿ 7300 ಮಂದಿ ಸಂದರ್ಶನ ಎದು ರಿಸಿದರು. ಈ ನಡುವೆ ನೋಂದಣಿ ಮಾಡದ ಸಾವಿರಾರು ಮಂದಿ ಆಗಮಿಸಿದ್ದರು.

105 ಕಂಪನಿ ಭಾಗಿ: ಉದ್ಯೋಗ ಮೇಳ ದಲ್ಲಿ 86 ಕಂಪನಿ ಪಾಲ್ಗೊಳ್ಳಲಿವೆ ಎಂದು ಹೇಳಲಾಗಿತ್ತು. ಆದರೆ ಶನಿವಾರ ಉದ್ಯೋ ಗಾಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗ ಮಿಸಿದ್ದರಿಂದ ಇನ್ನಷ್ಟು ಕಂಪನಿಗಳು ಪಾಲ್ಗೊಂ ಡವು. ಇದರಿಂದ ಇನ್ಫೋಸಿಸ್, ವಿಪೆÇ್ರೀ, ಎಲ್‍ಆಂಡ್‍ಟಿ, ಗ್ರಾಸ್ ರೂಟ್, ಹಿಂದುಜಾ ಗ್ಲೋಬಲ್, ಎಲ್‍ಐಸಿ, ಅದಿತ್ಯ ಬಿರ್ಲಾ, ಮಹೀಂದ್ರ, ಕೋಶ, ಯುಬಿ, ಜೆ.ಕೆ.ಟೈರ್ಸ್, ಬಿಇಎಂಎಲ್, ಏಷಿಯನ್ ಪೇಂಟ್ಸ್, ಮುತ್ತೂಟ್ ಫೈನಾನ್ಸ್, ಅಪೆÇೀಲೋ, ಊಬರ್, ಯಂಗ್ ಇಂಡಿಯಾ, ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್, ಬಿಬಿ ಮೋಟಾರ್ಸ್, ಹೆಚ್‍ಜಿಎಸ್, ರ್ಯಾಪಿಡೋ, ಹೋಮ್ ನರ್ಸಿಂಗ್ ಸರ್ವೀಸ್, ಶ್ರೀ ದುರ್ಗಾಂಬ ಎಂಟರ್‍ಪ್ರೈಸಸ್ ಸೇರಿದಂತೆ ಅನೇಕ ಕಂಪನಿಗಳು ಭಾಗವಹಿಸಿದ್ದವು. ಸುರಕ್ಷತೆ ದೃಷ್ಟಿಯಿಂದ ಪೆÇಲೀಸ್ ಬಂದೋ ಬಸ್ತ್ ಮಾಡಲಾಗಿತ್ತು. ಒಟ್ಟು ಉದ್ಯೋಗ ಮೇಳದಲ್ಲಿ 105 ಕಂಪನಿಗಳು ಪಾಲ್ಗೊಂಡು, ಅಭ್ಯರ್ಥಿಗಳ ಸಂದರ್ಶನ ನಡೆಸಿದವು. ವಿವಿಧ ಕಂಪನಿಗಳಲ್ಲಿ 5600 ಹುದ್ದೆ ಖಾಲಿ ಯಿದ್ದವು. ಎಲ್ಲಾ ಕಂಪನಿಗಳಿಗೂ ಅಭ್ಯರ್ಥಿಗಳನ್ನು ಸಂದರ್ಶನ ಮಾಡಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು.

ಚಾಲನೆ: ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಸಂಸದ ಪ್ರತಾಪಸಿಂಹ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನನ್ನ ಕ್ಷೇತ್ರ ದಲ್ಲಿ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮುಕ್ತ ವಿಶ್ವವಿದ್ಯಾಲಯದಲ್ಲಿ ಉದ್ಯೋಗ ಮೇಳ ಆಯೋಜಿಸಿರುವುದು ಶ್ಲಾಘನೀಯ. ಈ ಹಿಂದೆ ಮನೆಯಲ್ಲಿ ಹೆಣ್ಣು ಮಕ್ಕಳು ಜನಿಸಿದರೆ, ಆ ದಿನದಿಂದಲೇ ಪೋಷಕರು ಮಗಳ ಭವಿಷ್ಯ ರೂಪಿಸಲು ಹಣ ಕೂಡಿ ಡಲು ಮುಂದಾಗುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಹೆಣ್ಣಾಗಲೀ, ಗಂಡು ಮಗುವಾಗಲೀ ಹುಟ್ಟಿದ ದಿನದಿಂದಲೇ ಮಕ್ಕಳು ವಿದ್ಯಾವಂತರಾಗಿ ಒಳ್ಳೆಯ ಉದ್ಯೋಗ ಮಾಡಲಿ ಎಂದು ಆಶಿಸುತ್ತಿದ್ದಾರೆ. ಆದರೆ ವಿದ್ಯಾವಂತರಾಗಿದ್ದರೂ ನಿರುದ್ಯೋಗಿ ಗಳಾವುದು ದುರದೃಷ್ಟಕರ ಎಂದರು.

ಸಾಂಸ್ಕøತಿಕ ನಗರಿ ಮೈಸೂರಿಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಬರುತ್ತಾರೆ. ಇಲ್ಲಿನ ಪ್ರವಾಸಿ ತಾಣ ವೀಕ್ಷಿಸಿದ ಬಳಿಕ ವಾಪ ಸ್ಸಾಗುತ್ತಾರೆ. ಯಾರೊಬ್ಬರೂ ಹೊಸದಾಗಿ ಕಂಪನಿ ಸ್ಥಾಪಿಸಿ, ಸ್ಥಳೀಯರಿಗೆ ಉದ್ಯೋಗ ನೀಡಲು ಮುಂದಾಗುತ್ತಿಲ್ಲ. ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ ಇಲ್ಲದಿ ರುವುದೇ ಸಮಸ್ಯೆ ಉಲ್ಬಣವಾಗಲು ಕಾರಣ. ಆದರೆ ಕಳೆದ 6 ವರ್ಷದಿಂದ ಮೈಸೂರಿಗೆ ಉತ್ತಮ ಸಂಪರ್ಕದ ವ್ಯವಸ್ಥೆ ಮಾಡುತ್ತಿ ದ್ದೇನೆ. ಸ್ಥಗಿತಗೊಂಡಿದ್ದ ವಿಮಾನ ನಿಲ್ದಾಣ ಪುನರಾರಂಭವಾಗಿದೆ, 7 ವಿಮಾನ ಹಾರಾಟ ನಡೆಸುತ್ತಿವೆ. ಮೈಸೂರು-ಬೆಂಗಳೂರು ನಡುವೆ ಜೋಡಿ ರೈಲ್ವೆ ಹಳಿ ಕಾಮಗಾರಿ ಪೂರ್ಣಗೊಳಿಸಿದ್ದೇವೆ. ಮೈಸೂರು-ಬೆಂಗ ಳೂರು ಮುಖ್ಯರಸ್ತೆಯನ್ನು 10 ಪಥದ ರಸ್ತೆ ಯಾಗಿ ಮಾರ್ಪಡಿಸಲಾಗುತ್ತಿದೆ. 2024ರ ವೇಳೆಗೆ ಮೈಸೂರಿನ ಚಿತ್ರಣ ಬದಲಾಗುತ್ತದೆ. ಉತ್ತಮ ಸಂಪರ್ಕ ದೊರೆಯಲಿದ್ದು, ಹತ್ತಾರು ಕೈಗಾರಿಕೆ ಸ್ಥಾಪನೆಯಾಗಲಿವೆ. ಇಲ್ಲಿನ ಯುವಕ ರಿಗೆ ಉದ್ಯೋಗ ಸುಲಭವಾಗಿ ದೊರೆಯು ತ್ತದೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮುಕ್ತ ವಿವಿ ಕುಲಪತಿ ಡಾ.ಎಸ್.ವಿದ್ಯಾಶಂಕರ್, ಕುಲಸಚಿವ ಪೆÇ್ರ. ಬಿ.ರಮೇಶ್, ಯುಸಿಹೆಚ್ ಸಲಹೆಗಾರ ಎಸ್.ವಿ.ವೆಂಕಟೇಶ್, ಉದ್ಯೋಗ ಘಟಕದ ಉದ್ಯೋಗಾಧಿಕಾರಿ ಆರ್.ಹೆಚ್.ಪವಿತ್ರಾ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕಿ ಡಿ.ಎಂ.ರಾಣಿ, ರೆಡಿಯೋ ಜಾಕಿ ಅವಿನಾಶ್ ಇದ್ದರು.

Translate »