ಇಂದಿನಿಂದ ಹಲವು ಶಾಕಿಂಗ್ ನಿರ್ಧಾರ ಜಾರಿ
ಮೈಸೂರು

ಇಂದಿನಿಂದ ಹಲವು ಶಾಕಿಂಗ್ ನಿರ್ಧಾರ ಜಾರಿ

December 1, 2019

ನವದೆಹಲಿ, ನ.30-ಡಿಸೆಂಬರ್ 1 ರಿಂದ ಅನೇಕ ಬದಲಾವಣೆಗಳಾಗಲಿದ್ದು, ಇದು ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರಲಿದೆ. ಎಲ್‍ಐಸಿ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಮೊಬೈಲ್ ಸುಂಕ ಇತ್ಯಾದಿಗಳಿಗೆ ಸಂಬಂ ಧಿಸಿದ ಹಲವು ಯೋಜನೆಗಳ ನಿಯಮಗಳಲ್ಲಿ ಬದಲಾವಣೆಯಾಗಲಿದೆ.

6000 ರೂಪಾಯಿಗಳನ್ನು ಪಡೆಯಲು ಆಧಾರ್ ಲಿಂಕ್ ಅನಿವಾರ್ಯ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕಂತು ಪಡೆಯಲು ಆಧಾರ್ ಕಡ್ಡಾಯ ವಾಗಿದೆ. ಆಧಾರ್ ಜೊತೆ ಯೋಜನೆ ಲಿಂಕ್ ಮಾಡಿದ ರೈತರಿಗೆ ಮಾತ್ರ ಕಂತಿನ ಹಣ ಸಿಗಲಿದೆ. ಆಧಾರ್ ಲಿಂಕ್ ಮಾಡಲು ಇಂದು ಕೊನೆ ದಿನವಾಗಿದೆ.

ಮೊಬೈಲ್ ಕರೆ ದುಬಾರಿ: ಈ ವರ್ಷದ ಕೊನೆ ತಿಂಗಳ ಮೊದಲ ದಿನದಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳಲಿದೆ. ಇಷ್ಟು ದಿನ ಉಚಿತ ಕರೆ ಸೇರಿದಂತೆ ಅಗ್ಗದ ಪ್ಲಾನ್‍ನಲ್ಲಿ ಕರೆ, ಡೇಟಾ ಪ್ಲಾನ್ ಪಡೆಯುತ್ತಿದ್ದ ಗ್ರಾಹಕರು ಇನ್ಮುಂದೆ ಹೆಚ್ಚಿನ ಹಣ ಪಾವತಿಸಬೇಕಾಗಿದೆ. ಏರ್ಟೆಲ್, ಜಿಯೋ, ಐಡಿಯಾ ಸೇರಿದಂತೆ ಎಲ್ಲ ಟೆಲಿಕಾಂ ಕಂಪನಿಗಳೂ ಬೆಲೆ ಏರಿಕೆ ಘೋಷಣೆ ಮಾಡಿವೆ.

ಜೀವ ವಿಮೆಯ ನಿಯಮಗಳಲ್ಲಿನ ಬದಲಾವಣೆ: ಡಿಸೆಂಬರ್‍ನಲ್ಲಿ ಜೀವ ವಿಮೆಗೆ ಸಂಬಂಧಿಸಿದಂತೆ ಅನೇಕ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಹೊಸ ನಿಯಮದ ಪ್ರಕಾರ ಪ್ರೀಮಿಯಂ ಸ್ವಲ್ಪ ದುಬಾರಿಯಾಗಲಿದೆ. ಎಲ್‍ಐಸಿ ಕೆಲ ಯೋಜನೆಗಳು ರದ್ದು: ವಿಮಾ ನಿಯಂತ್ರಣ ಪ್ರಾಧಿಕಾರದ ಹೊಸ ಮಾರ್ಗಸೂಚಿಗಳ ಅನುಷ್ಠಾನದ ನಂತರ ಎಲ್‍ಐಸಿ ಪ್ರಸ್ತುತ ಜಾರಿಯಲ್ಲಿರುವ ಕೆಲ ಯೋಜನೆಗಳನ್ನು ರದ್ದು ಮಾಡುತ್ತಿದೆ.

 

Translate »