ಇಂದು ಮುಕ್ತ ವಿವಿ ಘಟಿಕೋತ್ಸವ ಭವನ ಲೋಕಾರ್ಪಣೆ
ಮೈಸೂರು

ಇಂದು ಮುಕ್ತ ವಿವಿ ಘಟಿಕೋತ್ಸವ ಭವನ ಲೋಕಾರ್ಪಣೆ

December 1, 2018

ಮೈಸೂರು:  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸುಸಜ್ಜಿತ ಘಟಿಕೋತ್ಸವ ಭವನವನ್ನು ನಾಳೆ(ಡಿ.1) ಬೆಳಿಗ್ಗೆ 11ಕ್ಕೆ ರಾಜ್ಯಪಾಲ ವಜುಭಾಯ್ ರೂಢಾಭಾಯ್ ವಾಲಾ ಉದ್ಘಾಟಿಸ ಲಿದ್ದಾರೆ ಎಂದು ಮುಕ್ತ ವಿವಿ ಕುಲಪತಿ ಪ್ರೊ.ಡಿ. ಶಿವಲಿಂಗಯ್ಯ ತಿಳಿಸಿದ್ದಾರೆ.

ಮುಕ್ತ ಗಂಗೋತ್ರಿ ಆವರಣದಲ್ಲಿ 18.50 ಕೋಟಿ ರೂ. ವೆಚ್ಚದಲ್ಲಿ 3 ಸಾವಿರ ಚದರ ಮೀಟರ್ ವಿಸ್ತೀರ್ಣ ದಲ್ಲಿ ನಿರ್ಮಿಸಿರುವ ಘಟಿಕೋತ್ಸವ ಭವನ ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿಯೇ ಅತ್ಯಂತ ವಿಸ್ತಾರ ಹಾಗೂ ಸುಸಜ್ಜಿತ ಭವನ ಎಂಬ ಕೀರ್ತಿಗೆ ಪಾತ್ರವಾಗಲಿದೆ. ಸುಮಾರು ಎರಡು ಸಾವಿರ ಆಸನಗಳ ಸೌಲಭ್ಯವುಳ್ಳ ಈ ಸಭಾಂಗಣ ಹವಾನಿಯಂತ್ರಿತ ಸೌಲಭ್ಯ, ಉತ್ತಮ ದ್ವನಿ, ಬೆಳಕು ವ್ಯವಸ್ಥೆ ಹೊಂದಿದೆ. ವಿಶಾಲವಾದ ವೇದಿಕೆ, ಬಾಲ್ಕನಿ, 9 ದ್ವಾರಗಳು, ಪ್ರೊಜೆಕ್ಟರ್ ವ್ಯವಸ್ಥೆ, ಬೆಂಕಿ ನಂದಿ ಸುವ ಸಲಕರಣೆ, ವೇದಿಕೆಗೆ ಮರದ ಹಾಸು(ವುಡನ್ ಪ್ಲೋರ್) ಸೇರಿದಂತೆ ಇನ್ನಿತರ ಅತ್ಯಾಧುನಿಕ ಸೌಲಭ್ಯ ಕಲ್ಪಿಸಲಾಗಿದೆ ಎಂದು ಅವರು ವಿವರಿಸಿದರು.

ಘಟಿಕೋತ್ಸವ ಭವನವನ್ನು ಮುಕ್ತ ವಿಶ್ವವಿದ್ಯಾ ನಿಲಯಕ್ಕೆ ಸೀಮಿತಗೊಳಿಸಿಲ್ಲ. ಅತ್ಯುತ್ತಮವಾದ ಸಭಾಂಗಣವಾಗಿರುವ ಮುಕ್ತ ವಿವಿಯ ಘಟಿಕೋತ್ಸವ  ಭವನವನ್ನು ಖಾಸಗಿ ಸಂಸ್ಥೆಗಳು ನಡೆಸುವ ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಿಗೂ ನೀಡಲಾಗು ತ್ತದೆ. ರಾಷ್ಟ್ರೀಯ, ಅಂತಾ ರಾಷ್ಟ್ರೀಯ ಹಾಗೂ ವಿವಿಧ ಮಟ್ಟದ ವಿಚಾರ ಸಂಕಿರಣಗಳು, ಕಾರ್ಯಾ ಗಾರ ಹಾಗೂ ಇನ್ನಿ ತರ ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಗಳಿಗೆ ಅವಕಾಶ ನೀಡ ಲಾಗುತ್ತದೆ. ಶೈಕ್ಷಣಿಕ ಕಾರ್ಯಕ್ರಮಗಳಿಗೆ 1 ಲಕ್ಷ ರೂ, ಸಾಂಸ್ಕøತಿಕ ಕಾರ್ಯಕ್ರಮಗಳಿಗೆ 1.50 ಲಕ್ಷ ರೂ. ಬಾಡಿಗೆ ನಿಗದಿ ಮಾಡಲಾಗಿದೆ. ಮದುವೆ ಸೇರಿದಂತೆ ವೈಯಕ್ತಿಕ ಕಾರ್ಯಕ್ರಮಗಳಿಗೆ ಈ ಭವನವನ್ನು ನೀಡಲಾಗುವು ದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇಂದು ಉದ್ಘಾಟನೆ: ರಾಜ್ಯಪಾಲ ವಜುಭಾಯ್ ರೂಢಾಭಾಯ್ ವಾಲಾ ಅವರು ಮುಕ್ತ ವಿವಿಯ ಘಟಿಕೋ ತ್ಸವ ಭವನ ಹಾಗೂ ಮಂಡಕಳ್ಳಿಯಲ್ಲಿ ನಿರ್ಮಿಸಿರುವ ಶೈಕ್ಷಣಿಕ ಭವನವನ್ನು ನಾಳೆ(ಡಿ.1) ಉದ್ಘಾಟಿಸಲಿದ್ದಾರೆ. ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡರು ಪ್ರಾದೇಶಿಕ ಕೇಂದ್ರ ಕಟ್ಟಡಗಳನ್ನು ಉದ್ಘಾಟಿಸಲಿ ದ್ದಾರೆ. ಮುಕ್ತ ವಿವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಅಧ್ಯಕ್ಷತೆ ವಹಿಸುವ ಕಾರ್ಯಕ್ರಮದಲ್ಲಿ ವಿಧಾನ ಪರಿ ಷತ್ ಸದಸ್ಯರಾದ ಸಂದೇಶ್ ನಾಗರಾಜು,  ಪುಟ್ಟಣ್ಣ, ಶಾಸಕ ಎಲ್.ನಾಗೇಂದ್ರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಮುಕ್ತ ವಿವಿಯಲ್ಲಿಯೇ ವಾಸ್ತವ್ಯ:  ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ರಾಜ್ಯ ಪಾಲರು ಬಂದರೆ ಶಿಷ್ಟಾಚಾರದಂತೆ ಸರ್ಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡುವ ಸಂಪ್ರದಾಯವಿತ್ತು. ಆದರೆ ಮುಕ್ತ ವಿವಿಯ ಅತಿಥಿ ಗೃಹ ಸುಸಜ್ಜಿತವಾಗಿದೆ. ಈ ಹಿನ್ನೆಲೆಯಲ್ಲಿ ನಾವು ರಾಜ್ಯಪಾಲರನ್ನು ಕೇಳಿ ಕೊಂಡಾಗ ಇದೇ ಮೊದಲ ಬಾರಿಗೆ ಸರ್ಕಾರಿ ಅತಿಥಿ ಗೃಹದ ಬದಲಾಗಿ ಮುಕ್ತ ವಿವಿಯ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ಇದು ಹೆಮ್ಮೆಯ ಸಂಗತಿ ಯಾಗಿದೆ ಎಂದು ಅಭಿಪ್ರಾಯಪಟ್ಟರು.

ಯುಜಿಸಿ ಮಾನ್ಯತೆ ತರುವುದಕ್ಕೆ ಆದ್ಯತೆ ನೀಡಿದ್ದೆ: ಮುಕ್ತ ಗಂಗೋತ್ರಿಯಲ್ಲಿ ನೂತನವಾಗಿ ನಿರ್ಮಿಸಿರುವ ಘಟಿಕೋತ್ಸವ ಭವನ ನಾನು ಉಪ ಕುಲಪತಿಯಾಗಿ ನೇಮಕಗೊಳ್ಳುವ ಮುನ್ನವೇ ನಿರ್ಮಾಣವಾಗಿತ್ತು. 2015ರಲ್ಲಿ ಕಾಮಗಾರಿ ಆರಂಭಿಸಿತ್ತು. 2016ರಲ್ಲಿ ಕಟ್ಟಡದ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ ಮುಕ್ತ ವಿವಿಗೆ ಯುಜಿಸಿ ಮಾನ್ಯತೆ ರದ್ದು ಮಾಡಿದ್ದ ರಿಂದ ಹೊಸ ಕಟ್ಟಡಗಳ ಉದ್ಘಾಟನೆ ನಡೆಸಿರಲಿಲ್ಲ. ಮುಕ್ತ ವಿವಿಗೆ ಯುಸಿಜಿ ಮಾನ್ಯತೆ ದೊರಕಿಸಿ, ಈ ಹಿಂದೆ ಇದ್ದಂತೆ ಶೈಕ್ಷಣಿಕ ಚಟುವಟಿಕೆ ಆರಂಭಿಸು ವುದು ನಮ್ಮ ಮೊದಲ ಆದ್ಯತೆಯಾಗಿತ್ತು. ಸತತ ಪರಿಶ್ರಮದಿಂದ ಯುಜಿಸಿ ಮಾನ್ಯತೆ ಸಿಕ್ಕಿದೆ. ಇದ ರಿಂದ ಕಳೆದ ಎರಡು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಘಟಿಕೋತ್ಸವ ಭವನವನ್ನು ಉದ್ಘಾಟಿಸ ಬೇಕೆಂದು ರಾಜ್ಯಪಾಲರನ್ನು ಕೋರಿಕೊಂಡಿದ್ದೆವು. ಇದಕ್ಕೆ ಸಮ್ಮತಿಸಿ ನಾಳೆ ಹೊಸ ಭವನವನ್ನು ಉದ್ಘಾಟಿಸಲಿದ್ದಾರೆ ಎಂದು ಅವರು ಹೇಳಿದರು.

Translate »