ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ: ಸಿಎಂ ಕೆಸಿಆರ್
ಮೈಸೂರು

ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ: ಸಿಎಂ ಕೆಸಿಆರ್

December 2, 2019

ಹೈದರಾಬಾದ್, ಡಿ.1- ತೆಲಂಗಾಣದ ರಾಜಧಾನಿ ಹೈದರಾ ಬಾದ್‍ನ ಶಾನ್‍ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ 26 ವರ್ಷದ ಪಶು ವೈದ್ಯೆಯ ಸಾಮೂಹಿಕ ಅತ್ಯಾಚಾರ-ಹತ್ಯೆ ಪ್ರಕರಣದ ವಿಚಾರಣೆಗೆ `ತ್ವರಿತಗತಿ ನ್ಯಾಯಾ ಲಯ’ ಸ್ಥಾಪಿಸಲಾಗುವುದು ಎಂದು ತೆಲಂ ಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಭಾನುವಾರ ಪ್ರಕಟಿಸಿದ್ದಾರೆ.

ಪಶುವೈದ್ಯೆಯ ಅತ್ಯಾಚಾರ-ಹತ್ಯೆ ಕೃತ್ಯ ಬಲು ಅಮಾನವೀಯ, ಅಷ್ಟೇ ಭಯಾನಕ ಎಂದು ಮುಖ್ಯಮಂತ್ರಿ ಕೆಸಿಆರ್ ಪ್ರತಿಕ್ರಿಯಿಸಿದ್ದಾರೆ. ನ.27ರ ಬುಧವಾರ ರಾತ್ರಿ ಘಟನೆ ನಡೆದ (ನಾಲ್ಕು ದಿನಗಳ) ಬಳಿಕ ಇದೇ ಮೊದಲ ಬಾರಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಇದೇ ವೇಳೆ, ಸರಣಿ ಟ್ವೀಟ್‍ಗಳನ್ನು ಮಾಡಿರುವ ಮುಖ್ಯಮಂತ್ರಿ ಗಳ ಪುತ್ರನೂ ಆಗಿರುವ ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ. ರಾಮರಾವ್, ಹೀಗೆ ಮಹಿಳೆ ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ದುರುಳರನ್ನು ಕ್ಷಿಪ್ರಗತಿಯಲ್ಲಿ ಅತ್ಯಂತ ಕಠಿಣ ವಾಗಿ ಶಿಕ್ಷಿಸಲು ಅವಕಾಶವಾಗುವಂತೆ ಬಲಿಷ್ಠ ಕಾನೂನನ್ನು ಜಾರಿಗೆ ತರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪೊಲೀಸರ ಅಮಾನತು: ಈ ಮಧ್ಯೆ, ಪಶುವೈದ್ಯೆಯ ಅತ್ಯಾಚಾರ- ಹತ್ಯೆ ಪ್ರಕರಣ ಸಂಬಂಧ ಕರ್ತವ್ಯ ಲೋಪದ ಮೇರೆಗೆ ಮೂವರು ಪೊಲೀಸ್ ಅಧಿಕಾರಿಗಳನ್ನು ಭಾನುವಾರ ಅಮಾನತು ಮಾಡ ಲಾಗಿದೆ. ಹಿಂದಿನ ರಾತ್ರಿ ಪಶುವೈದ್ಯೆಯ ಪೋಷಕರು ಪೊಲೀಸ್ ಠಾಣೆಗೆ ಬಂದು, `ಮಗಳು ಕಾಣೆಯಾಗಿದ್ದಾಳೆ, ಹುಡುಕಲು ನೆರವಾಗಿ’ ಎಂದು ಮನವಿ ಮಾಡಿದಾಗ ಸ್ಪಂದಿಸದೇ ಉಡಾಫೆ ವರ್ತನೆ ತೋರಿದ, ದೂರು ದಾಖಲಿಸಿಕೊಳ್ಳದೇ ಠಾಣೆಯಿಂದ ಠಾಣೆಗೆ ಅಲೆದಾಡಿಸಿದ ಆರೋಪದ ಮೇರೆಗೆ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಪ್ರತಿಭಟನೆ: ಇದೇ ವೇಳೆ, ಪಶುವೈದ್ಯೆ ಹಂತಕರನ್ನು ಸಾರ್ವ ಜನಿಕವಾಗಿ ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಗಳು ದೇಶದ ವಿವಿಧೆಡೆ ಮುಂದುವರಿದಿವೆ. ನಗ ರದ ಹೊರವಲಯದಲ್ಲಿ ಸರಕು ಸಾಗಣೆ ಲಾರಿಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಲಾರಿ ಚಾಲಕರು ಅನೈತಿಕ ಚಟುವಟಿಕೆಗಳಲ್ಲಿ ತೊಡಗುತ್ತಿದ್ದರೂ ನಿಯಂತ್ರಿಸದೇ ಇರುವ, ಸರಿಯಾಗಿ ಗಸ್ತು ತಿರುಗದೇ ಇರುವ ಬಗೆಗೂ ಪೊಲೀಸ್ ಅಧಿಕಾರಿಗಳ ವಿರುದ್ಧ ಹೈದರಾ ಬಾದ್‍ನಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೂ ಈ ಸಂಬಂಧ ಕಿರಿಯ ಶ್ರೇಣಿ ಪೊಲೀಸ್ ಅಧಿಕಾರಿಗಳ ಮೇಲೆ ಕಿಡಿಕಾರಿದ್ದಾರೆ.

.

Translate »