ಇಂದು ಶ್ರೀ ಸುಬ್ರಹ್ಮಣ್ಯ ಷಷ್ಠಿ
ಮೈಸೂರು

ಇಂದು ಶ್ರೀ ಸುಬ್ರಹ್ಮಣ್ಯ ಷಷ್ಠಿ

December 2, 2019

ಮೈಸೂರು, ಡಿ.1(ಆರ್‍ಕೆ)- ನಾಳೆ (ಡಿ.2) ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ನಡೆ ಯಲಿದೆ. ಷಷ್ಠಿ ಅಂಗ ವಾಗಿ ಸಿದ್ದಲಿಂಗಪುರ ಬಳಿ ಬೆಂಗಳೂರು-ಮೈಸೂರು ಹೆದ್ದಾರಿ ಯಲ್ಲಿರುವ ಶ್ರೀ ಸುಬ್ರ ಹ್ಮಣ್ಯೇಶ್ವರ ದೇವ ಸ್ಥಾನ ದಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆಯಲಿದೆ. ಸೋಮವಾರ ಮುಂಜಾನೆ 4 ಗಂಟೆಯಿಂದ ದೇವರಿಗೆ ಅಭಿಷೇಕ, ಅರ್ಚನೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ. ಸಾವಿ ರಾರು ಭಕ್ತರು ದೇವರ ದರ್ಶನಕ್ಕೆ ತೆರಳುವುದರಿಂದ ಅಲ್ಲಿ ಬ್ಯಾರಿಕೇಡ್ ಅಳವಡಿಸಿ ಸೂಕ್ತ ವ್ಯವಸ್ಥೆ ಮಾಡಿರುವ ಮೈಸೂರು ತಹಶೀಲ್ದಾರ್ ಟಿ.ರಮೇಶ ಬಾಬು ನೇತೃತ್ವದ ಕಂದಾಯ ಇಲಾಖೆ ಅಧಿಕಾರಿಗಳು ಸಕಲ ಸೌಲಭ್ಯ ಕಲ್ಪಿಸಿ ದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ಪೂಜಾ ಸಾಮಗ್ರಿ, ಆಟಿಕೆ, ತಿಂಡಿ, ತಿನಿಸು, ಪಾನೀಯ ಅಲಂಕಾರಿಕ ವಸ್ತುಗಳ ಅಂಗಡಿ ಗಳು ತಲೆ ಎತ್ತಿದ್ದು, ಭಕ್ತಾದಿಗಳ ಸಂಚಾರಕ್ಕೆ ಅಡ್ಡಿಯಾಗ ದಂತೆ ಎನ್‍ಆರ್ ಸಂಚಾರ ಠಾಣೆ ಇನ್‍ಸ್ಪೆಕ್ಟರ್ ದಿವಾ ಕರ್ ನೇತೃತ್ವದಲ್ಲಿ ಸಿಬ್ಬಂದಿ ಅಗತ್ಯ ಕ್ರಮಕೈಗೊಂಡಿದ್ದಾರೆ.

ಸಂಚಾರ ನಿರ್ಬಂಧ: ಶ್ರೀ ಸುಬ್ರಹ್ಮಣ್ಯ ಷಷ್ಠಿ ಹಿನ್ನೆಲೆ ಯಲ್ಲಿ ಮೈಸೂರಿನಿಂದ ಪಶ್ಚಿಮ ವಾಹಿನಿವರೆಗೆ ಮೈಸೂರು -ಬೆಂಗಳೂರು ಹೆದ್ದಾರಿಯಲ್ಲಿ ಇಂದು ರಾತ್ರಿ 12 ಗಂಟೆಯಿಂದ ನಾಳೆ (ಡಿ.2) ರಾತ್ರಿ 11 ಗಂಟೆವರೆಗೆ ಎಲ್ಲಾ ಬಗೆಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಶ್ರೀರಂಗಪಟ್ಟಣ ಕಡೆಯಿಂದ ಬರುವ ವಾಹನಗಳು ಮಾತ್ರ ಎಂದಿನಂತೆ ಅದೇ ಮಾರ್ಗದಲ್ಲಿ ಮೈಸೂರು ತಲುಪಬಹುದು ಎಂದು ಎನ್.ಆರ್. ಸಂಚಾರ ಠಾಣೆ ಇನ್‍ಸ್ಪೆಕ್ಟರ್ ತಿಳಿಸಿದ್ದಾರೆ. ಭಕ್ತಾದಿಗಳಿಗೆ ನಾಗನಹಳ್ಳಿ ಕ್ರಾಸ್ ಮತ್ತು ಫಿಷ್‍ಲ್ಯಾಂಡ್ ಹೊಟೇಲ್ ಬಳಿ ಕಾರು, ಆಟೋ ಮತ್ತು ದ್ವಿಚಕ್ರ ವಾಹನಗಳಿಗೆ ನಿಲುಗಡೆ ವ್ಯವಸ್ಥೆ ಮಾಡ ಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೇವಸ್ಥಾನ ಬಳಿ ಎನ್‍ಆರ್ ಹಾಗೂ ಮೇಟಗಳ್ಳಿ ಠಾಣೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

Translate »