ಹೆಚ್.ಪಿ. ಮಂಜುನಾಥ್ ಬಿರುಸಿನ ಪ್ರಚಾರ
ಮೈಸೂರು

ಹೆಚ್.ಪಿ. ಮಂಜುನಾಥ್ ಬಿರುಸಿನ ಪ್ರಚಾರ

April 27, 2018

ಹುಣಸೂರು: ಹುಣಸೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ. ಮಂಜುನಾಥ್ ಬನ್ನಿಕುಪ್ಪೆ, ಕಾಡನಕೊಪ್ಪಲು, ತೆಂಕಲಕೊಪ್ಪಲು, ಮರಳಯ್ಯನಕೊಪ್ಪಲು, ಮಾದಹಳ್ಳಿ, ಮೂಡಲಕೊಪ್ಪಲು, ಮಧುಗಿರಿಕೊಪ್ಪಲು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮತ ಯಾಚಿಸಿದರು.

ಈ ವೇಳೆ ನಂತರ ಮಾತನಾಡಿದ ಶಾಸಕ ಹೆಚ್.ಪಿ. ಮಂಜುನಾಥ್, ಬನ್ನಿಕುಪ್ಪೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಹತ್ತಾರು ಕೋಟಿ ರೂ.ಗಳ ರಸ್ತೆ, ನೀರು, ವಸತಿ, ಸಮುದಾಯ ಭವನಗಳು, ದೇವಸ್ಥಾನಗಳು ಜಾತ್ರೆ ಹಬ್ಬ ಹರಿದಿನಗಳು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ನನ್ನ ಅವಧಿಯಲ್ಲಿ ನಡೆದಿವೆ. ಇನ್ನೂ ಹೆಚ್ಚಿನ ಸೇವೆ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದರು.

ಬಿಜೆಪಿ ಹಾಗೂ ಜೆಡಿಎಸ್ ತೊರೆದು ಅನೇಕ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ ಗೊಂಡರು. ಗ್ರಾ.ಪಂ ಅಧ್ಯಕ್ಷೆ ಚಿಕ್ಕಸುಜಾತ, ಮುಖಂಡರಾದ ಸೋಮಶೇಖರ್, ಡಾ.ವೃಷಭೇಂದ್ರಪ್ಪ, ನಾರಾಯಣ್, ಬಸವರಾಜು, ರಾಘು ಮತ್ತಿತರರು ಹಾಜರಿದ್ದರು.

Translate »