ಮೈಸೂರು-ಚೆನ್ನೈ ಬುಲೆಟ್ ಟ್ರೇನ್ ಕನಸು ನನಸಾಗುವ ಕಾಲ ಸನ್ನಿಹಿತ
ಮೈಸೂರು

ಮೈಸೂರು-ಚೆನ್ನೈ ಬುಲೆಟ್ ಟ್ರೇನ್ ಕನಸು ನನಸಾಗುವ ಕಾಲ ಸನ್ನಿಹಿತ

November 24, 2018

ಮೈಸೂರು: ಅರಮನೆ ನಗರಿ ಮೈಸೂರಿಂದ ರಾಜ್ಯ ರಾಜಧಾನಿಗೆ ಕೇವಲ 45 ನಿಮಿಷಗಳ ಪಯಣ! ಮೈಸೂರಿ ನಿಂದ ಚೆನ್ನೈ ತಲುಪಲು ಕೇವಲ 2 ಗಂಟೆ 25 ನಿಮಿಷಗಳೇ ಸಾಕು!

ಮೈಸೂರು-ಚೆನ್ನೈ ನಡುವೆ ಹಾಲಿ ಅಂತರ 485 ಕಿಲೋಮೀಟರ್‍ಗಳಾ ಗಿದ್ದು, ಇದನ್ನು 435 ಕಿ.ಮೀ.ಗೆ ಕಡಿತ ಗೊಳಿಸಿ ಬುಲೆಟ್ ರೈಲು ಸಂಚಾರ ಪ್ರಸ್ತಾಪಕ್ಕೆ ಜರ್ಮನಿ ಸಲ್ಲಿಸಿರುವ ಅಧ್ಯ ಯನ ವರದಿಯಂತೆ ಯೋಜನೆ ಅನು ಷ್ಠಾನಕ್ಕೆ ಬಂದಲ್ಲಿ, ಗಂಟೆಗೆ 320 ಕಿ.ಮೀ. ವೇಗದಲ್ಲಿ ಬುಲೆಟ್ ಟ್ರೇನ್ ಸಂಚರಿಸು ವುದರಿಂದ ಈ ಶರವೇಗದ ಪ್ರಯಾಣ ಸಾಧ್ಯವಾಗಲಿದೆ ಎನ್ನುತ್ತದೆ ಜರ್ಮನಿ.

ಸದ್ಯ ಮೈಸೂರು-ಚೆನ್ನೈ ನಡುವೆ ಸಂಚರಿಸುತ್ತಿರುವ ಶತಾಬ್ದಿ ಎಕ್ಸ್‍ಪ್ರೆಸ್ ರೈಲು ಅತೀ ವೇಗ ಅಂದರೆ ಗಂಟೆಗೆ 110 ಕಿ.ಮೀ. ವೇಗದಲ್ಲಿ ಸಂಚರಿಸಿಯೂ ಈ ಮಾರ್ಗದ ಪ್ರಯಾಣಕ್ಕೆ 7 ಗಂಟೆಗಳನ್ನು ತೆಗೆದುಕೊಳ್ಳುತ್ತಿದೆ. ಸಾಮಾನ್ಯ ಎಕ್ಸ್‍ಪ್ರೆಸ್ ರೈಲುಗಳಲ್ಲಂತೂ 10 ಗಂಟೆಗೂ ಅಧಿಕ ಸಮಯ ಹಿಡಿಯುತ್ತಿದೆ. ಬುಲೆಟ್ ಟ್ರೇನ್ ಯೋಜನೆ ಮೂಲಕ ಮೈಸೂರು-ಚೆನ್ನೈ ನಡುವಿನ ರೈಲು ಮಾರ್ಗದ ಅಂತರ 435 ಕಿ.ಮೀ.ಗಳಿಗೆ ತಗ್ಗಲಿದ್ದು, ಏಕ ಕಾಲದಲ್ಲಿ ಸಮಯ, ಅಂತರ ಕಡಿಮೆ ಆಗಲಿದೆ ಎಂದು ಜರ್ಮನಿ, ಭಾರತೀಯ ರೈಲ್ವೆ ಮಂಡಳಿಗೆ ಸಲ್ಲಿಸಿರುವ ಅಂತಿಮ ವರದಿಯಲ್ಲಿ ತಿಳಿಸಿದೆ. ಭಾರತದಲ್ಲಿನ ಜರ್ಮನಿ ರಾಯಭಾರಿ ಮಾರ್ಟಿನ್ ನೇ ಅವರು ವರದಿಯನ್ನು ಭಾರತೀಯ ರೈಲ್ವೆ ಮಂಡಳಿಯ ಅಧ್ಯಕ್ಷ ಅಶ್ವನಿ ಲೊಹಾನಿ ಅವರಿಗೆ ಗುರುವಾರ ಸಂಜೆ ನವದೆಹಲಿಯಲ್ಲಿ ಸಲ್ಲಿಸಿದ್ದಾರೆ.

ಜಪಾನ್ ವರದಿ: ಇದಕ್ಕೂ ಮುನ್ನ ಕರ್ನಾ ಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ಮತ್ತು ತಮಿಳುನಾಡಿನ ಆಡಳಿತ ರಾಜಧಾನಿ ಚೆನ್ನೈ ನಡುವಿನ ಈ ಅತೀ ವೇಗದ ರೈಲು ಮಾರ್ಗ ನಿರ್ಮಾಣದ ಬಗ್ಗೆ ಬಹಳ ಆಸಕ್ತಿ ತೋರಿದ್ದ ಜಪಾನ್, ಯೋಜನಾ ವರದಿಯೊಂದನ್ನು ಸಲ್ಲಿಸಿತ್ತು. ಅದಾದ ಬಳಿಕ ಭಾರತ ಸರ್ಕಾರ ಜರ್ಮನಿಯನ್ನು ಸಂಪರ್ಕಿಸಿ ಅನುಷ್ಠಾನ ಯೋಗ್ಯ ಅಧ್ಯ ಯನ ವರದಿ ನೀಡುವಂತೆ ಕೋರಿತ್ತು. ಜರ್ಮನಿ ತಡವಾಗಿಯಾದರೂ ಈಗ ವರದಿ ಸಲ್ಲಿಸಿದೆ. 1 ಲಕ್ಷ ಕೋಟಿ ರೂ. ವೆಚ್ಚದ ಈ ಬೃಹತ್ ರೈಲು ಮಾರ್ಗ ನಿರ್ಮಾಣ ಯೋಜನೆಯು ಭಾರತ ಸರ್ಕಾರ ಮತ್ತು ಭಾರತೀಯ ರೈಲ್ವೆಗೆ ಒಪ್ಪಿತವಾಗಿ ತಕ್ಷಣದಲ್ಲೇ ಯೋಜನೆ ಅನುಷ್ಠಾನ ಕಾರ್ಯ ಆರಂಭಗೊಂಡರೆ ಮುಂದಿನ 12 ವರ್ಷ ಗಳಲ್ಲಿ, ಅರ್ಥಾತ್ 2030ರ ವೇಳೆಗೆ ಈ ಮಾರ್ಗದಲ್ಲಿ ಬುಲೆಟ್ ಟ್ರೇನ್ ಸಂಚಾರ ನಡೆಸಲಿದೆ. ವರದಿ ಹಸ್ತಾಂತರ ಬಳಿಕ ಮಾತನಾಡಿದ ಜರ್ಮನಿ ರಾಯಭಾರಿ ಮಾರ್ಟಿನ್ ನೇ ಅವರು, ಶರ ವೇಗದ ಈ ರೈಲು ಪ್ರಯಾಣದ ಯೋಜನೆ ಅನು ಷ್ಠಾನಕ್ಕೆ ಯೋಗ್ಯವಾಗಿದೆ. ಅಷ್ಟೇ ಅಲ್ಲ, ಸುಲಭ ನಿರ್ವಹಣೆಯ ಕಾರ್ಯ ಯೋಜ ನೆಯೂ ಇದರಲ್ಲಿದೆ ಎಂದರು. ಈ ಅಧ್ಯ ಯನ ವರದಿಯನ್ನು ಸಿದ್ಧಪಡಿಸಲು 18 ತಿಂಗಳು ಹಿಡಿದಿದೆ. ಜರ್ಮನಿ ಸರ್ಕಾ ರದ ಆರ್ಥಿಕ ವೆಚ್ಚದಲ್ಲೇ ಇದು ತಯಾ ರಾಗಿದೆ ಎಂದು ವಿವರ ನೀಡಿದರು.

ಭೂಸ್ವಾಧೀನ ಸಮಸ್ಯೆ ಕಡಿಮೆ: ಬುಲೆಟ್ ರೈಲು ಯೋಜನೆ ಹಾಲಿ ಇರುವ ರೈಲು ಮಾರ್ಗಕ್ಕೆ ಹೊಂದಿಕೊಂಡಂತೆ ನಿರ್ಮಾಣಗೊಳ್ಳಲಿದೆ. ಇದರಿಂದ ಭೂಸ್ವಾಧೀನ ಪ್ರಕ್ರಿಯೆಯ ತಲೆ ಬಿಸಿ ಕಡಿಮೆ. ಶೇ.85ರಷ್ಟು ಮೇಲ್ಸೇತುವೆ ರೀತಿಯಲ್ಲಿದ್ದರೆ, ಶೇ.14ರಷ್ಟು ಸುರಂಗ ಮಾರ್ಗವಾಗಿರುತ್ತದೆ. ಉಳಿದ ಶೇ.5ರಷ್ಟು ಮಾರ್ಗ ಸಮತಟ್ಟು ಪ್ರದೇಶದಲ್ಲಿ ಸಾಗಲಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಜರ್ಮನಿಯ ವರದಿ ಕುರಿತು ಪ್ರತಿಕ್ರಿಯಿಸಿದ ಭಾರತೀಯ ರೈಲ್ವೆ ಮಂಡಳಿಯ ಅಧ್ಯಕ್ಷ ಅಶ್ವನಿ ಲೊಹಾನಿ, ಇದು ಕಾರ್ಯರೂಪಕ್ಕೆ ತರಬಹುದಾದ ಯೋಜನೆಯೇ ಆಗಿದೆ. ಸಮಗ್ರ ಅಧ್ಯಯನದ ಬಳಿಕ ಮುಂದಿನ ಹೆಜ್ಜೆ ಇರಿಸಲಾ ಗುವುದು ಎಂದರು.

ಈ ಬುಲೆಟ್ ಟ್ರೇನ್ ಯೋಜನೆ ಕಾರ್ಯಗತವಾದರೆ ನಿತ್ಯವೂ ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಸಂಚರಿಸುತ್ತಿರುವ ಸಾವಿರಾರು ಪ್ರಯಾಣಿಕರಿಗೆ ಬಹಳ ಅನುಕೂಲವಾಗಲಿದೆ. ದಿನ ಕಳೆದಂತೆ ಈ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿದೆ. ಹಾಗಾಗಿ ಕೆಲವು ಪ್ರಯಾಣಿಕರು ವಿಮಾನ ಪ್ರಯಾಣ ಆಯ್ದುಕೊಳ್ಳುತ್ತಿದ್ದಾರೆ. ಬುಲೆಟ್ ಟ್ರೇನ್ ಸಂಚಾರ ಆರಂಭಗೊಂಡರೆ ಈ ವಿಮಾನ ಯಾತ್ರಿಕರೂ ರೈಲಿಗೇ ಬರುತ್ತಾರೆ. ಆಗ ಅವರಿಗೆ ಪ್ರಯಾಣ ವೆಚ್ಚ ಮತ್ತು ಸಮಯ ಎರಡರಲ್ಲೂ ಉಳಿತಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

Translate »