ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್ ಶತಃಸಿದ್ಧ: ಸಿಎಂ ಕುಮಾರಸ್ವಾಮಿ
ಮಂಡ್ಯ, ಮೈಸೂರು

ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್ ಶತಃಸಿದ್ಧ: ಸಿಎಂ ಕುಮಾರಸ್ವಾಮಿ

November 24, 2018

ಮಂಡ್ಯ: ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್ ನಿರ್ಮಾಣ ಯೋಜನೆ ಕೈ ಬಿಡುವ ಪ್ರಶ್ನೆಯೇ ಇಲ್ಲ. ಕಾವೇರಿ ಮಾತೆ ಪ್ರತಿಮೆ ನಿರ್ಮಾಣ ಮಾತ್ರವಲ್ಲ, ವಿಶ್ವಮಟ್ಟದ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ತಾಲೂಕಿನ ದುದ್ದ ಗ್ರಾಮದಲ್ಲಿಂದು ಸಣ್ಣ ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ 718 ಕೋಟಿ ರೂ. ವೆಚ್ಚದಲ್ಲಿ 54 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, 47 ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಕೆಆರ್‌ಎಸ್‌ನಲ್ಲಿ ಉದ್ದೇಶಿತ ಡಿಸ್ನಿಲ್ಯಾಂಡ್ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಮೈಸೂರಿನಲ್ಲಿ ಇಂಜಿನಿಯರ್ಸ್‍ಗಳ ಅಸೋಸಿಯೇಷನ್‍ನವರು ನೀಡಿರುವ ಹೇಳಿಕೆಯನ್ನೂ ಗಮನಿಸಿದ್ದೇನೆ. ಇಲ್ಲಿ ಕಾವೇರಿ ಪ್ರತಿಮೆ ಮಾಡುವುದಷ್ಟೇ ಅಲ್ಲ. ವಿಶ್ವದ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಯೋಜನೆ ರೂಪಿಸÀ ಲಾಗುತ್ತಿದೆ. ನಮ್ಮ ತಲೆಯಲ್ಲಿ ಬುದ್ಧಿ ಇಲ್ವಾ? ನಿಮ್ಮಗಳ ತಾಂತ್ರಿಕ ನೈಪುಣ್ಯ ಕುರಿತು ಚರ್ಚೆ ಮಾಡುತ್ತೇನೆ. ನಿಮ್ಮ ಮಾಹಿತಿ ಏನೇ ಇದ್ದರೂ ಮುಕ್ತವಾಗಿ ಚರ್ಚೆ ಮಾಡಲಾಗುವುದು. ಆನಂತರ ವಷ್ಟೇ ಅಂತಿಮ ನಿರ್ಧಾರ ಎಂದು ಅವರು ತಿಳಿಸಿದರು.

ಶ್ರೀರಂಗಪಟ್ಟಣದ ಮಾಜಿ ಶಾಸಕರೊಬ್ಬರ ಹೇಳಿಕೆ ನೋಡಿದೆ. ಕಾಂಗ್ರೆಸ್ ಸರ್ಕಾರದಲ್ಲಿಯೇ ಕಾವೇರಿ ಪ್ರತಿಮೆ ಮಾಡಲು ಯೋಜನೆ ಮಾಡಲಾಗಿತ್ತು. ರೂ. 8 ಕೋಟಿಯನ್ನು ಕೊಡಲು ನಿರ್ಧರಿಸಲಾಗಿತಂತೆ. ಇದು 8 ಕೋಟಿ, 200 ಕೋಟಿಯಲ್ಲಾ ಗುವ ಕೆಲಸವಲ್ಲ. ಸುಮಾರು 2000 ಕೋಟಿ ರೂ. ವೆಚ್ಚದ ಯೋಜನೆ ಇದು. ಇದರಿಂದ 50 ಸಾವಿರ ಯುವಕರಿಗೆ ಉದ್ಯೋಗ ಸೃಷ್ಟಿಯಾಗ ಲಿದೆ. ಮಂಡ್ಯದ ಯುವಜನ ಕೃಷಿಯನ್ನೇ ನಂಬಿ ಬದುಕಲು ಸಾಧ್ಯವಿಲ್ಲ ಎಂದರು. ಮೈಸೂರಿಗೆ ಬರುವ ವಿಶ್ವದ ಪ್ರವಾಸಿಗರನ್ನು ಕೆಆರ್‌ಎಸ್‌ಗೆ ಸೆಳೆಯುವ ಯೋಜನೆ ರೂಪಿಸಲು ಹೊರಟಿದ್ದೇವೆ. ಮೈಸೂರು ಮಹಾ ರಾಜರು ಕಷ್ಟಪಟ್ಟು ಕಟ್ಟಿದ ಜಲಾಶಯಕ್ಕೆ ಧಕ್ಕೆ ತರಲು ನಾವು ಹೊರಟಿಲ್ಲ. ಯಾರೂ ಗಾಬರಿ, ಆತಂಕ ಪಡಬೇಕಿಲ್ಲ,
ವಿರೋಧ ಮಾಡಬೇಕಾಗಿಲ್ಲ. ಕೆಆರ್‌ಎಸ್‌ ನಮ್ಮ ಜೀವನದಿ ಕಾವೇರಿ ತಾಣ. ಅದಕ್ಕೆ ಧಕ್ಕೆ ತರುವುದಿಲ್ಲ. ಅಪ ಪ್ರಚಾರಕ್ಕೆ ಬಲಿ ಆಗುವುದು ಬೇಡ ಎಂದರು.

ಗ್ರಾಮ ವಾಸ್ತವ್ಯ ನೆನಪಿಸಿಕೊಂಡ ಸಿಎಂ: ಸುಮಾರು ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾರ್ಯಕ್ರಮಗಳು ಒಂದೇ ಬಾರಿಗೆ ಜಾರಿಯಾಗುತ್ತಿರುವುದಕ್ಕೆ ಪುಟ್ಟರಾಜು ಅವರೊಬ್ಬರೇ ಕಾರಣವಲ್ಲ. ದುದ್ದ ಹೋಬಳಿಯ ಜನ ಈ ಚುನಾವಣೆಯಲ್ಲಿ ತೋರಿಸಿದ ಪ್ರೀತಿ ವಿಶ್ವಾಸ ಕಾರಣ. ಸುಮಾರು 12 ವರ್ಷಗಳ ಹಿಂದೆ ದುದ್ದ ಬಳಿ ಗ್ರಾಮ ವಾಸ್ತವ್ಯ ಮಾಡಿದ್ದೆ. ಆಗ ನೀಡಿದ್ದ ಕೆರೆಗಳಿಗೆ ನೀರು ತುಂಬಿಸುವ ಭರವಸೆಯನ್ನು ಈಗ ಈಡೇರಿಸಲು ಅವಕಾಶ ಒದಗಿ ಬಂದಿದೆ ಎಂಬುದನ್ನು ಮುಖ್ಯಮಂತ್ರಿಗಳು ನೆನಪಿಸಿಕೊಂಡರು.

ಜಿಲ್ಲೆಯ ಅಭಿವೃದ್ಧಿಗೆ ಸಮಗ್ರ ಚಿಂತನೆ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿ ದ್ದೇನೆ. ಸದ್ಯದಲ್ಲೇ ಶ್ರೀರಂಗಪಟ್ಟಣದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಚುನಾವಣೆಯ ವೇಳೆ ನೀಡಿದ್ದ ಭರವಸೆಯಂತೆಯೇ ಮಹದೇವಪುರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಯೋಜನೆಗೆ ಚಾಲನೆ ನೀಡಲಾಗುವುದು. ನಾಗಮಂಗಲ ಕೆರೆ ತುಂಬಿಸುವುದರ ಜೊತೆಗೆ ಕುಡಿಯುವ ನೀರಿನ ಸಮಸ್ಯೆಯತ್ತ ಗಮನ ಸೆಳೆದಿದ್ದಾರೆ. ಮದ್ದೂರು ತಾಲೂಕಿನ ಬಹುಗ್ರಾಮದ ಕುಡಿಯುವ ನೀರು ಯೋಜನೆಗೂ ಚಾಲನೆ. ಮಂಡ್ಯದ ಸಮಗ್ರ ಅಭಿವೃದ್ಧಿಗೆ ಕ್ಯಾಬಿನೆಟ್‍ನಲ್ಲಿ ತೀರ್ಮಾನ ಮಾಡಲಾಗಿದೆ. ವಿಸಿ ಫಾರಂನಲ್ಲಿ ಮುಂದಿನ ವರ್ಷದಿಂದ ಪಶು ವೈದ್ಯಕೀಯ ಕಾಲೇಜು ಆರಂಭಿಸಲಾ ಗುವುದು. ದುದ್ದಗೆ ಡಿಗ್ರಿ ಕಾಲೇಜು ನೀಡಲಾಗುವುದು ಎಂದು ತಿಳಿಸಿದರು.

ಸಾಲ ಮನ್ನಾ ಅನುಮಾನ ಬೇಡ: ರೈತರ ಸಾಲ ಮನ್ನಾ ವಿಚಾರದಲ್ಲಿ ಅನುಮಾನವೇ ಬೇಡ. ನನಗೆ ಆಗದ ಶಕ್ತಿಗಳು ಅಸೂಯೆಯಿಂದ ಸಾಲ ಮನ್ನಾ ವಿಚಾರವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದಿನ ಸರ್ಕಾರದ ಸಾಲ ಮನ್ನಾ ಯೋಜನೆಯ ಪೈಕಿ ಉಳಿಕೆ ಹಣವನ್ನು ಬಿಡುಗಡೆ ಮಾಡಿ ಸಂಪೂರ್ಣ ಜಾರಿಗೆ ತರಲಾಗಿದೆ. ಒಂದೇ ರಾತ್ರಿಯಲ್ಲಿ ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಜನರ ತೆರಿಗೆಯಿಂದ ಬರುವ ಆದಾಯದಿಂದಲೇ ಸರ್ಕಾರದ ಇತರೆ ಚಟುವಟಿಕೆಯ ಜೊತೆಗೆ ರೈತರ ಸಾಲಕ್ಕೂ ಖರ್ಚು ಮಾಡಬೇಕಿದೆ. ಆಯವ್ಯಯದ 2 ಲಕ್ಷದ 18 ಸಾವಿರ ಕೋಟಿ ಒಂದೇ ದಿನದಲ್ಲಿ ಖಜಾನೆಗೆ ಬಂದು ಸೇರುವುದಿಲ್ಲ. ತೆರಿಗೆ ಸಂಗ್ರಹದಿಂದಲೇ ಅಷ್ಟೂ ಹಣ ಬರಬೇಕಿದೆ. ಆದರೆ ಪುಣ್ಯಾತ್ಮರು ನನ್ನನ್ನು ಡೋಂಗಿ ಭಾಷಣ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಇಂತಹವರ ಹೇಳಿಕೆ ಬಗ್ಗೆ ನೀವೇ ಯೋಚಿಸಬೇಕಿದೆ ಎಂದರು. ಈ ವರ್ಷ ಪುನಃ ಸಹಕಾರಿ ವಲಯದ ರೈತರ 1 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಲಾಗುತ್ತಿದೆ. ಇದಕ್ಕೆ 10,300 ಕೋಟಿ ರೂ. ಕೊಡಬೇಕಿದೆ. ಈ ವರ್ಷ 9,458 ಕೋಟಿ ರೂ. ಸಾಲ ಮನ್ನಾ ಆಗುತ್ತಿದೆ ಇದರ ಬಗ್ಗೆ ಯಾರೂ ಕೂಡ ತುಟಿ ಬಿಚ್ಚುತ್ತಿಲ್ಲ. ಆದರೆ ರೈತರ ಆತ್ಮಹತ್ಯೆಗೆ ಪ್ರೇರೇಪಿಸು ವಂತಹ ಕೆಲಸ ಮಾಡಲಾಗುತ್ತಿದೆ. ವಾಸ್ತವ ಹೀಗಿರುವಾಗ ನನ್ನ ರೈತರು ತಪ್ಪು ನಿರ್ಧಾರ ಮಾಡಲು ಹೋಗಬೇಡಿ. ನನ್ನ ಮೇಲೆ ನಂಬಿಕೆಯಿಡಿ ನಿಮ್ಮ ಋಣ ತೀರಿಸಲು ಬದ್ಧ. ಡಿಸಿಸಿ ಬ್ಯಾಂಕ್‍ನವರು ರೈತರಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದರು.

ಮುಂದಿನ ಬಜೆಟ್‍ನಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ: ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ 35 ಸಾವಿರ ಕೋಟಿ ರೂ.ಗಳಷ್ಟು ರೈತರ ಸಾಲವಿದೆ. ಇದರ ಬಗ್ಗೆ 21 ಬ್ಯಾಂಕ್‍ಗಳಿಂದ ಮಾಹಿತಿ ಪಡೆಯಲಾಗಿದೆ. ಸಾಲಮನ್ನಾ ಯೋಜನೆಯಿಂದ 44 ಲಕ್ಷ ರೈತರಿಗೆ ಅನುಕೂಲವಾಗಲಿದೆ. 21 ಬ್ಯಾಂಕ್‍ಗಳ ಸಾಲ ಮನ್ನಾಕ್ಕೆ ಈಗಾಗಲೇ 6,500 ಕೋಟಿ ರೂ. ಹಣ ಮೀಸಲಿಡಲಾಗಿದೆ. ಹಣದ ಕೊರತೆಯೇನೂ ಇಲ್ಲ. ರೈತರ ಸಾಲ ತೀರಿಸಲು ಹಂತ ಹಂತವಾಗಿ ಹಣವನ್ನು ಬ್ಯಾಂಕ್‍ಗಳಿಗೆ ತುಂಬಿಕೊಡಲು ಯೋಜಿಸಲಾಗಿದೆ. ಮುಂದಿನ ಬಜೆಟ್‍ನಲ್ಲಿ ಒಂದೇ ಕಂತಿನಲ್ಲಿ 24 ಸಾವಿರ ಕೋಟಿ ರೂ.ಗಳನ್ನು ವಾಣಿಜ್ಯ ಬ್ಯಾಂಕುಗಳಿಗೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ರೈತರು ಯಾವುದೇ ಅನುಮಾನ ಪಡಬೇಕಿಲ್ಲ ಎಂದು ಅವರು ತಿಳಿಸಿದರು.

ಕಬ್ಬು ಬೆಳೆಗಾರರ ವಿಚಾರ: ಕಬ್ಬಿನ ಹಣ ಕೊಡಿಸುವುದು ನನ್ನ ಜವಾಬ್ದಾರಿ. ಎಫ್‍ಆರ್‍ಪಿ ಹಣ ಕೊಡುವ ವಿಚಾರದಲ್ಲಿ ಬದ್ಧನಾಗಿದ್ದೇನೆ. ಈಗಾಗಲೇ ಕೆಲವು ಕಾರ್ಖಾನೆಗಳಿಂದ ರೈತರಿಗೆ ಹಣ ಕೊಡಲಾಗಿದೆ. ಇನ್ನು 38 ಕೋಟಿ ಮಾತ್ರ ಬಾಕಿ ಇದೆ. ಆದರೂ ಸಿರೂರು ಗ್ರಾಮದಲ್ಲಿ ನನ್ನ ಪ್ರತಿಕೃತಿಗೆ ಕೊಡಲಿಯಲ್ಲಿ ಹೊಡೆಯುತ್ತಾರೆ. ನನಗೆ ಯಾಕೆ ಹೊಡೆಯುತ್ತೀರಿ? ರೈತರ ಸಾಲ ಮನ್ನಾ ಮಾಡಿದ ತಪ್ಪಿಗಾ? ಕಬ್ಬಿಗೆ ಬೆಂಬಲ ಬೆಲೆ ಕೊಡಿಸುವ ಯತ್ನ ಮಾಡುತ್ತಿರುವುದಕ್ಕಾ? ಎಂದು ಸಿಎಂ ಪ್ರಶ್ನಿಸಿದರು. ವೇದಿಕೆಯಲ್ಲಿ ಸಣ್ಣ ನೀರಾವರಿ ಸಚಿವರೂ ಆದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವÀ ಸಿ.ಎಸ್.ಪುಟ್ಟರಾಜು, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಸಂಸದ ಎಲ್.ಆರ್.ಶಿವರಾಮೇಗೌಡ, ವಿಧಾನ ಪರಿಷತ್ ಸದಸ್ಯರಾದ ಶ್ರೀಕಂಠೇಗೌಡ, ಅಪ್ಪಾಜಿಗೌಡ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.

ಪ್ರೇರಣೆಯಿಂದ ರೈತರ ಆತ್ಮಹತ್ಯೆ: ಕನ್ನಟ್ಟಿ ಜೈಕುಮಾರ್ ಆತ್ಮಹತ್ಯೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಸಾಲದ ಜೊತೆಗೆ ಅನಾರೋಗ್ಯ ಪೀಡಿತನಾಗಿದ್ದ ಆತನಿಗೆ ವೈದ್ಯರು ಹೆಚ್ಚುದಿನ ಬದುಕುವುದು ಕಷ್ಟ ಎಂದು ಹೇಳಿದ್ದಾರೆ. ಹಾಗಾಗಿ ನಾನು ಬರುವಾಗ ಆತ್ಮಹತ್ಯೆ ಮಾಡಿಕೊಂಡರೆ ಪರಿಹಾರ ಸಿಗಬಹುದು ಎಂಬ ಉದ್ದೇಶದಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ. ರೈತ ಸಂಘದ ಕೆಲವರು ಈತನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಎತ್ತಿ ಕಟ್ಟುವ ಕೆಲಸ ಮಾಡಿದ್ದಾರೆ. ಜೈ ಕುಮಾರ್ ಆತ್ಮಹತ್ಯೆ ಬದಲು ನನ್ನ ಬಳಿಗೆ ಕರೆ ತಂದಿದ್ದರೆ ಸಾಲ ತೀರಿಸುವುದರ ಜೊತೆಗೆ ಆರೋಗ್ಯಕ್ಕೂ ಹಣಕಾಸು ಮತ್ತು ಚಿಕಿತ್ಸಾ ಸೌಲಭ್ಯ ಕೊಡಿಸುತ್ತಿದ್ದೆ. ಇನ್ನಷ್ಟು ತಿಂಗಳು ಆತ ಬದುಕಬಹುದಿತ್ತು. ನಾನು ಅಪರಾಧಿಯಲ್ಲ, ನನ್ನ ತಪ್ಪಿಲ್ಲ ಎಂದರು.

ಮತ್ತೆ ಮಾಧ್ಯಮಗಳ ವಿರುದ್ಧ ಆಕ್ರೋಶ: ನಾನೂ ಒಬ್ಬ ಮನುಷ್ಯ. ನಾನು ನಿಮಗೆ ಮಾಡಿದ ದ್ರೋಹ ಏನು. ಕೆಲವು ಮಾಧ್ಯಮಗಳು ಮಾತ್ರ ರೈತರನ್ನು ದಿಕ್ಕು ತಪ್ಪಿಸುವ ರೀತಿ ನನ್ನ ವಿರುದ್ಧ ಸಲ್ಲದ ಸುದ್ದಿ ಬಿತ್ತರಿಸುತ್ತಿವೆ. ನಾನು ಪ್ರೀತಿಗೆ ಗೌರವ ಕೊಡುವವ. ನಾನು ಭಂಡ ಅಲ್ಲ. ಭಂಡತನದ ರಾಜಕರಣ ಮಾಡಲ್ಲ. ಬಡವರ ಕಷ್ಟಕ್ಕೆ ಸ್ಪಂದಿಸುತ್ತೇನೆ. ನಾನು 120 ಸ್ಥಾನ ಗೆದ್ದು ಸಿಎಂ ಆಗಿಲ್ಲ. ದೇವರು ಕೊಟ್ಟ ಅಧಿಕಾರದಿಂದ ಉಳಿದಿದ್ದೇನೆ. ನಾನು ಜಾತಿಯ ಹೆಸರಿನಲ್ಲಿ ರಾಜಕಾರಣ ಮಾಡಲ್ಲ. ನಾನು ಯಾವುದೇ ಭಾಗದ ವಿರೋಧಿ ಅಲ್ಲ. ನನಗೆ ಜಾತಿ ಇಲ್ಲ. ಎಲ್ಲರೂ ನನ್ನವರು. ಸುಳ್ಳು ಸುದ್ದಿ ಬಿತ್ತರಿಸುವ ಮೂಲಕ ನೀವು ನನ್ನನ್ನು ಇಳಿಸಲು ಸಾಧ್ಯವಿಲ್ಲ. ಟಿವಿ ಮಾಧ್ಯಮದವರು ಸ್ಟೋರಿ ಮಾಡಿ ನನ್ನ ಇಳಿಸಲು ಸಾಧ್ಯವಿಲ್ಲ. ನಾನು ತಾಯಿ ಎಂದು ಗೌರವ ತೋರಿಸಿದೆ. ಆದರೆ ಅದನ್ನೇ ಅವರ ಅನುಕೂಲಕ್ಕೆ ತಕ್ಕಂತೆಯೇ ಬಿಂಬಿಸಲಾಗುತ್ತಿದೆ ಎಂದು ಖಾಸಗಿ ಚಾನಲ್ ವಿರುದ್ಧ ವಾಗ್ದಾಳಿ ನಡೆಸಿದರು.

ಸಿಎಂ ಸ್ಥಾನ ಪರ್ಮನೆಂಟ್ ಛೇರ್ ಅಲ್ಲ: ನನಗೆ ಏನೂ ಚಿಂತೆ ಇಲ್ಲ. ಈ ಛೆÉೀರ್ ಪರ್ಮನೆಂಟ್ ಅಲ್ಲ. ಜನರ ಹೃದಯದಲ್ಲಿ ಸ್ಥಾನ ಮುಖ್ಯ, ನಾನು ಯಾವುದೇ ತಪ್ಪು ಮಾಡದೇ ಇರೋದರಿಂದ ನನಗೆ ಭಯ ಇಲ್ಲ. ಮುದ್ರಣ ಮಾಧ್ಯಮದವರು ನಮ್ಮನ್ನು ಬದುಕಿಸಿದ್ದಾರೆ. 8 ಗಂಟೆಗಳ ಕಾಲ ಕಬ್ಬು ಬೆಳೆಗಾರರ ಸಭೆ ಮಾಡಿದೆ. ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿದರೂ ಜನರ, ನಮ್ಮ ಮದ್ಯೆ ಕಂದಕ ಸೃಷ್ಟಿ ಮಾಡುತ್ತಿದ್ದೀರಿ, ಇದು ಸರಿನಾ ಎಂದು ಅವರು ಚಾನಲ್‍ಗಳನ್ನು ಪ್ರಶ್ನಿಸಿದರು.

Translate »