ಜೀಪ್‍ನಿಂದ ಜಿಗಿದು ಕಾರ್ಮಿಕ ಮಹಿಳೆ ಸಾವು
ಕೊಡಗು

ಜೀಪ್‍ನಿಂದ ಜಿಗಿದು ಕಾರ್ಮಿಕ ಮಹಿಳೆ ಸಾವು

November 25, 2018

ಸೋಮವಾರಪೇಟೆ: ಜೀಪಿನಿಂದ ಜಿಗಿದು ಕಾರ್ಮಿಕ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಇಲ್ಲಿಗೆ ಸಮೀಪದ ನಂದಿಮೊಟ್ಟೆ ಗ್ರಾಮದಲ್ಲಿ ಸಂಭವಿಸಿದೆ.

ಅಸ್ಸಾಂ ಮೂಲದ ಸಲ್ಮ(30) ಮೃತಪಟ್ಟ ದುರ್ದೈವಿ. ನಂದಿಮೊಟ್ಟೆ ಕಾಫಿ ತೋಟದಲ್ಲಿ ಕೆಲಸ ಮುಗಿಸಿ ಮಹೇಂದ್ರ ಕ್ಯಾಂಟರ್‍ನಲ್ಲಿ ಕುಳಿತುಕೊಂಡ ಸಂದರ್ಭ ಚಾಲಕ ಕ್ಯಾಂಟರ್‍ನ ಹ್ಯಾಂಡ್ ಬ್ರೇಕನ್ನು ಸರಿಯಾಗಿ ಹಾಕದೆ ನಿಲ್ಲಿಸಿದ್ದರು ಎನ್ನಲಾಗಿದೆ. ಏಕಾ ಏಕಿ ವಾಹನ ಹಿಂದಕ್ಕೆ ಚಲಿಸಿದ್ದು ಕ್ಯಾಂಟರ್‍ನಲ್ಲಿ ಕುಳಿತಿದ್ದ ಸಲ್ಮ ಹೊರಗೆ ಜಿಗಿದ ಪರಿಣಾಮ ತೀವ್ರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿ ದ್ದಾರೆ. ಈ ಬಗ್ಗೆ ಇಲ್ಲಿನ ಪೊಲೀಸುರರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Translate »