ದಕ್ಷಿಣ ಕೊಡಗಿನಲ್ಲಿ ಸಂಭ್ರಮದ ಪುತ್ತರಿ ಆಚರಣೆ
ಕೊಡಗು

ದಕ್ಷಿಣ ಕೊಡಗಿನಲ್ಲಿ ಸಂಭ್ರಮದ ಪುತ್ತರಿ ಆಚರಣೆ

November 25, 2018

ಗೋಣಿಕೊಪ್ಪಲು: ದಕ್ಷಿಣ ಕೊಡ ಗಿನಲ್ಲಿ ಪುತ್ತರಿ ನಮ್ಮೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ದೇವಸ್ಥಾನದಲ್ಲಿ ಸಾಮೂಹಿಕವಾಗಿ ದೇವಕದ್, ಮನೆಯ ಗದ್ದೆಗಳಲ್ಲಿ ಗುರು ಕದ್ ಹೀಗೆ ಕದಿರು ತೆಗೆದು ಧಾನ್ಯ ಲಕ್ಷ್ಮಿಯನ್ನು ಬರಮಾಡಿಕೊಳ್ಳಲಾಯಿತು. ಆಚರಣೆಯಂತೆ ಕದಿರು ತೆಗೆಯುವ ಮುನ್ನ ಗಾಳಿಯಲ್ಲಿ ಗುಂಡು ಹೊಡೆದು ನಂತರ ಕದಿರು ತೆಗೆಯಲಾಯಿತು.

ವಿವಿಧ ಗ್ರಾಮಗಳಲ್ಲಿ ಪದ್ದತಿಯಂತೆ ಹಗಲು ಹಾಗೂ ರಾತ್ರಿ ಕದಿರು ತೆಗೆ ಯಲಾಯಿತು. ಮಳೆಯ ಚಿಂಚನದ ನಡುವೆ ಧಾನ್ಯಲಕ್ಷ್ಮಿ ಯನ್ನು ಮನೆ ಮನೆಗೆ ಬರಮಾಡಿಕೊಳ್ಳ ಲಾಯಿತು. ಶ್ರೀ ಇಗ್ಗುತ್ತಪ್ಪ ಕೊಡವ ಸಂಘದ ವತಿಯಿಂದ ಬ್ರಿಗೇಡಿಯರ್ (ನಿ) ಮನೆ ಯಪಂಡ ದೇವಯ್ಯ ಅವರ ಗದ್ದೆಯಲ್ಲಿ ಸಾಮೂಹಿಕವಾಗಿ ಕದಿರು ತೆಗೆಯಲಾಯಿತು. ಕೊಡವ ಸಂಘದ ಅಧ್ಯಕ್ಷೆ ಕೊಣಿಯಂಡ ಬೋಜಮ್ಮ ಉತ್ತಪ್ಪ ಮುಂದಾಳತ್ವದಲ್ಲಿ ಸದಸ್ಯರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಾಲ್ಗೊಂಡರು.

ಮಾಯಮುಡಿ ಕಮಟೆ ಮಹಾದೇವರ ದೇವಸ್ಥಾನದಲ್ಲಿ ರಾತ್ರಿ ಕದಿರು ತೆಗೆಯ ಲಾಯಿತು. ಕಾಡಾನೆಗಳಿಂದ ದೇವರ ಗದ್ದೆ ನೆಡಲಾಗದೆ ಗ್ರಾಮದ ಕೃಷಿಕನ ಗದ್ದೆ ಯಿಂದ ಕೊಯ್ಲು ಮಾಡಿಕೊಂಡು ಭತ್ತದ ತೆನೆಗಳನ್ನು ದೇವಸ್ಥಾನದ ಆವರಣದಲ್ಲಿ ಪದ್ದತಿಯಂತೆ ಆಚರಿಸಲಾಯಿತು. ದೇವ ಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸಣ್ಣು ವಂಡ ರಮೇಶ್ ಮುಂದಾಳತ್ವದಲ್ಲಿ ಪೂಜೆ, ಸಲ್ಲಿಸಿ ದೇವರಿಗೆ ಕದಿರು ಅರ್ಪಿಸಲಾಯಿತು. ನೂರಾರು ಕೃಷಿಕರು ಪಾಲ್ಗೊಂಡಿದ್ದರು.

ಬಾಳಾಜಿ ಮಾನಿಲ್ ಅಯ್ಯಪ್ಪ ಸ್ಥಾನ ದಲ್ಲಿ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಸಣ್ಣುವಂಡ ವಿನು ವಿಶ್ವನಾಥ್ ಮುಂದಾ ಳತ್ವದಲ್ಲಿ ದೇವಕದ್ ತೆಗೆಯಲಾಯಿತು.

ತೆರಾಲು ತೆರುಲ್ ಅಯ್ಯಪ್ಪ ದೇವರಿಗೆ ಕದಿರು ತೆಗೆಯಲಾಯಿತು. ಗ್ರಾಮಸ್ಥರು ತಮ್ಮ ಗುರುಕಾರೋಣರಿಗೆ ರಾತ್ರಿ ಕದಿರು ತೆಗೆದು ಮನೆಯಲ್ಲಿ ಸಂಭ್ರಮಿಸಿದರು. ನಿಟ್ಟೂರು ಕಾಲ ಭೈರವ ದೇವಸ್ಥಾನದಲ್ಲಿ ಹಗಲು ಕದಿರು ತೆಗೆಯಲಾಯಿತು.ಶಂಖನಾದದೊಂದಿಗೆ ಲಕ್ಷ್ಮಿಯನ್ನು ದೇವಸ್ಥಾನದವರೆಗೆ ಬರಮಾಡಿ ಕೊಳ್ಳಲಾಯಿತು. ನಾಲ್ಕೇರಿ ಮಹಾದೇಶ್ವರ ದೇವಸ್ಥಾನ, ಮಹಾಲಿಂಗೇಶ್ವರ, ಮಂದ ತ್ತವ್ವ ಸ್ಥಾನದಲ್ಲಿ ಸಾಮೂಹಿಕವಾಗಿ ಕದಿರು ತೆಗೆದು ಪೂಜೆ ಸಲ್ಲಿಸಲಾಯಿತು.

ಬೆಸಗೂರು ಗ್ರಾಮದಲ್ಲಿ ಹಗಲು ಕದಿರು ತೆಗೆಯಲಾಯಿತು. ದೇವನೂರು ಬಸವೇ ಶ್ವರ ದೇವಸ್ಥಾನದಲ್ಲಿ ಕದಿರು ತೆಗೆಯಲಾಯಿತು.
ನೊಕ್ಯಾ ಗ್ರಾಮದ ಶ್ರೀಕೃಷ್ಣ ಬಲರಾಮ ದೇವಸ್ಥಾನ ಗದ್ದೆಯಲ್ಲಿ ಕಾಡಾನೆಗಳಿಂದ ಕಾಪಾಡಿಕೊಂಡ ಭತ್ತದ ತೆನೆಯನ್ನು ದೇವ ಸ್ಥಾನ ಉಸ್ತುವಾರಿ ಚೆಪ್ಪುಡೀರ ಕಾರ್ಯಪ್ಪ ಮುಂದಾಳತ್ವದಲ್ಲಿ ಕದಿರು ತೆಗೆದು ಆಚರಿಸ ಲಾಯಿತು. ಗ್ರಾಮಸ್ಥರು ಒಂದಾಗಿ ಸೇರಿ ಆಚ ರಿಸಿದರು. ನೊಕ್ಯ ಬಸವೇಶ್ವರ ದೇವಸ್ಥಾನ ದಲ್ಲಿ ದೇವಸ್ಥಾನ ಸಮಿತಿ ಉಸ್ತುವಾರಿ ಶಿವಣ್ಣ ಅವರ ಮುಂದಾಳತ್ವದಲ್ಲಿ ತೆಗೆಯಲಾಯಿತು.

ಧನುಗಾಲ ಮುರುಡೇಶ್ವರ ದೇವಸ್ಥಾ ನದಲ್ಲಿ ಹಗಲು ಕದಿರು ತೆಗೆದು ದೇವರಿಗೆ ಅರ್ಪಿಸಿದರು. ಪಾಲಿಬೆಟ್ಟ ಚೆಷೈರ್‍ಹೋಂ ಅಂಗವಿಕಲ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪುತ್ತರಿ ನಮ್ಮೆಯ ವಿಶೇಷ ಖಾಧ್ಯವಾದ ತಂಬಿಟ್ಟು ಉಂಡೆ ಮಕ್ಕಳಿಗೆ ವಿತರಿಸಿ ಆಚರಿ ಸಿದರು. ಸ್ವತಃ ಶಿಕ್ಷಕರು ತಂಬಿಟ್ಟು ತಯಾ ರಿಸಿ ಮಕ್ಕಳ ಬಾಯಿಗಿಟ್ಟು ಸಂಭ್ರಮಿಸಿದರು.
ಬೇಗೂರು ಗ್ರಾಮದ ಪೂಳೆಮಾಡು ಈಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಆಚರಣೆ ನಡೆಯಿತು. ಹಗಲು ಹೊತ್ತು ಕದಿರು ತೆಗೆದು ಬರಮಾಡಿಕೊಂಡರು.

Translate »