ಮಡಿಕೇರಿಯಲ್ಲಿ ಸಂಭ್ರಮದ ಪುತ್ತರಿ ಅರಮನೆ ಕೋಲಾಟ್
ಕೊಡಗು

ಮಡಿಕೇರಿಯಲ್ಲಿ ಸಂಭ್ರಮದ ಪುತ್ತರಿ ಅರಮನೆ ಕೋಲಾಟ್

November 25, 2018

ಮಡಿಕೇರಿ: ಕೃಷಿಯನ್ನು ಬದು ಕಿನ ಭಾಗವಾಗಿಸಿಕೊಂಡಿರುವ ಕೊಡಗಿ ನಲ್ಲಿ ಹುತ್ತರಿ ಹಬ್ಬದ ಸಂಭ್ರಮಾಚರಣೆಯ ಮರುದಿನವಾದ ಶನಿವಾರ ಜಿಲ್ಲಾ ಕೇಂದ್ರ ಮಡಿಕೇರಿಯ ಐತಿಹಾಸಿಕ ಕೋಟೆ ಆವರಣ ದಲ್ಲಿ ‘ಪುತ್ತರಿ ಅರಮನೆ ಕೋಲಾಟ್’ ಅತ್ಯು ತ್ಸಾಹದಿಂದ ನಡೆಯುವ ಮೂಲಕ ಶ್ರೀಮಂತ ಸಂಸ್ಕøತಿಯನ್ನು ಅನಾವರಣಗೊಳಿಸಿತು.

ಜಿಲ್ಲಾಡಳಿತ, ಶ್ರೀ ಓಂಕಾರೇಶ್ವರ ದೇವ ಸ್ಥಾನ ವ್ಯವಸ್ಥಾಪನಾ ಸಮಿತಿ ಹಾಗೂ ದೇಶ ತಕ್ಕ ಸ್ಥಾನದಲ್ಲಿರುವ ಪಾಂಡೀರ ಕುಟುಂಬ ಸ್ಥರ ವತಿಯಿಂದ, ಮಡಿಕೇರಿ ಕೊಡವ ಸಮಾಜ ಮತ್ತು ಕೊಡಗು ಗೌಡ ಯುವ ವೇದಿಕೆಯ ಸಹಕಾರದೊಂದಿಗೆ ಹುತ್ತರಿ ಹಬ್ಬದ ಪ್ರಯುಕ್ತ 8ನೇ ವರ್ಷದ ‘ಅರ ಮನೆ ಕೋಲಾಟ್’ಗೆ ನಡೆಯಿತು. ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಸುಮನ್ ಡಿ.ಪನ್ನೇಕರ್, ಶ್ರೀ ಓಂಕಾರೇಶ್ವರ ದೇವ ಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುಲಿ ಯಂಡ ಜಗದೀಶ್ ಮೊದಲಾದ ಗಣ್ಯರು ಜ್ಯೋತಿ ಬೆಳಗುವ ಮೂಲಕ ಅರಮನೆ ಕೋಲಾಟ್‍ಗೆ ಚಾಲನೆ ನೀಡಿದರು. ದುಡಿಯ ನಾದಕ್ಕೆ ತಕ್ಕಂತೆ ಕೋಲಾಟ್ ಪ್ರದರ್ಶನ ಆಕರ್ಷಕವಾಗಿ ಅನಾವರಣಗೊಂಡಿತು.

ಹಾಲೇರಿ ರಾಜವಂಶಸ್ಥರ ಆಳ್ವಿಕೆಯ ಅವ ಧಿಯಲ್ಲಿ ಕೋಟೆ ಆವರಣದಲ್ಲಿ ನಡೆ ಯುತ್ತಿದ್ದ ಹುತ್ತರಿ ಕೋಲಾಟ್ ಬಳಿಕ ಸ್ಥಗಿ ತಗೊಂಡು, ಗದ್ದುಗೆ ಆವರಣದಲ್ಲಿ ನಡೆ ಯುತ್ತಿತ್ತು. ಹಿಂದಿನ ಸಂಪ್ರದಾಯವನ್ನು ಪುನÀರುಜ್ಜೀವನಗೊಳಿಸುವ ಪ್ರಯತ್ನವಾಗಿ ಶ್ರೀ ಓಂಕಾರೇಶ್ವರ ದೇವಸ್ಥಾನ ಸಮಿತಿ ಯಿಂದ 2011ರಲ್ಲಿ ಮತ್ತೆ ಕೋಟೆ ಆವರಣ ದಲ್ಲಿ ಆರಂಭಗೊಂಡ ಅರಮನೆ ಕೋಲಾಟ್ ಕೊಡಗಿನ ಸಂಸ್ಕøತಿಯ ಸುಗಂಧವನ್ನು ಪಸರಿಸುವಲ್ಲಿ ಯಶಸ್ವಿಯಾಗಿದೆ.

ಸಾಂಪ್ರದಾಯಿಕ ಉಡುಪಿನೊಂದಿಗೆ ದುಡಿಯ ನಾದಕ್ಕೆ ತಕ್ಕಂತೆ ಸಂಪ್ರದಾಯ ದಂತೆ ಪಾಂಡೀರ ತಕ್ಕಮುಖ್ಯಸ್ಥ ಮೊಣ್ಣಪ್ಪ ಅವರ ಮಾರ್ಗದರ್ಶನದಲ್ಲಿ ಪಾಂಡೀರ ಕುಟುಂಬ ತಂಡ ಕೋಲಾಟ್, ಉಮ್ಮತ್ತಾಟ್, ಬೊಳಕಾಟ್‍ಗಳನ್ನು ಪ್ರದರ್ಶಿಸಿ ಜನಮನ ವನ್ನು ಸೂರೆಗೊಳ್ಳುವಲ್ಲಿ ಯಶಸ್ವಿಯಾದರು.

ಮಡಿಕೇರಿ ಕೊಡವ ಸಮಾಜ ತಂಡ್ ಕೋಲಾಟ್, ಬೊಳಕಾಟ್, ಪರೆಯಕಳಿ, ಪೊಮ್ಮಕ್ಕಡ ಕೂಟದ ಉಮ್ಮತ್ತಾಟ್, ಕೊಡಗು ಗೌಡ ಯುವ ವೇದಿಕೆಯು ಬೊಳಕಾಟ್ ನೃತ್ಯಗಳು ಅತ್ಯಾಕರ್ಷಕವಾಗಿ ಮೂಡಿ ಬಂದು ಗಮನ ಸೆಳೆಯಿತು.

ಪುತ್ತರಿ ಕೋಲಾಟ್ ಆರಂಭಕ್ಕೂ ಮುನ್ನ ಪಾಂಡೀರ ಕುಟುಂಬಸ್ಥರು ಕೋಟೆಯಾವರ ಣದ ಪ್ರಸಿದ್ಧ ಶ್ರೀ ಕೋಟೆ ಗಣಪತಿಗೆ ವಿಶೇಷ ಪÀÇಜೆಯನ್ನು ಸಲ್ಲಿಸಿದ ಬಳಿಕ ದುಡಿಕೊಟ್ಟ್ ಪಾಟ್ ಮತ್ತು ಓಲಗದೊಂದಿಗೆ ಅರಮನೆ ಮುಂಭಾಗಕ್ಕೆ ಆಗಮಿಸಿ ಕೋಲಾಟ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಮಡಿಕೇರಿ ನಗರ ಠಾಣಾ ಸಿಬ್ಬಂದಿ ರಾಯ್ ಅವರನ್ನು ಶ್ರೀ ಓಂಕಾರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸ ಲಾಯಿತು. ಪ್ರಸಕ್ತ ಸಾಲಿನ ಜುಲೈನಲ್ಲಿ ನಗ ರದ ಶ್ರೀ ಆಂಜನೇಯ ಸ್ವಾಮಿ ದೇಗುಲ ದಲ್ಲಿ ನಡೆದ ಕಳ್ಳತನವನ್ನು ಕ್ಷಿಪ್ರಗತಿಯಲ್ಲಿ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸು ವಲ್ಲಿ  ರಾಯ್ ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ಚೆಲುವರಾಜು ಶ್ರಮಿಸಿದ್ದರು. ಕರ್ತವ್ಯ ನಿಮಿತ್ತ ಚೆನೈಗೆ ತೆರಳಿದ್ದರಿಂದ ಚೆಲುವರಾಜು ಇಂದಿನ ಸನ್ಮಾನ ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಕಾರ್ಯ ಕ್ರಮದಲ್ಲಿ ಶ್ರೀ ಓಂಕಾರೇಶ್ವರ ದೇವಸ್ಥಾ ಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ರಮೇಶ್ ಹೊಳ್ಳ, ಕೇಶವ ಪ್ರಸಾದ್ ಮುಳಿಯ, ಸಮಿತಿಯ ಆಡಳಿತಾಧಿಕಾರಿ ಸಂಪತ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕೋಲಾಟ್ ಕಾರ್ಯಕ್ರಮದ ಸಮಾರೋಪದ ಬಳಿಕ ಕೊಡಗಿನ ಸಾಂಪ್ರದಾಯಿಕ ಓಲಗಕ್ಕೆ ಎಲ್ಲರೂ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

Translate »