ಬಂಡೀಪುರಕ್ಕೆ ಪ್ರವಾಸಿಗರ ದಂಡು: ಬೆಳಿಗ್ಗೆ 7.30, ಸಂಜೆ 4.30ರ ವೇಳೆಯಲ್ಲಿ ಸಫಾರಿಗೆ ಅವಕಾಶ
ಚಾಮರಾಜನಗರ

ಬಂಡೀಪುರಕ್ಕೆ ಪ್ರವಾಸಿಗರ ದಂಡು: ಬೆಳಿಗ್ಗೆ 7.30, ಸಂಜೆ 4.30ರ ವೇಳೆಯಲ್ಲಿ ಸಫಾರಿಗೆ ಅವಕಾಶ

December 29, 2018

ಗುಂಡ್ಲುಪೇಟೆ:  ಹಚ್ಚ ಹಸಿರಿನ ಮೈಸಿರಿ, ಬೆಟ್ಟಗುಡ್ಡ, ಕಣಿವೆಗಳ ಮೂಲಕ ಹಾದು ಹೋಗುವ ರಸ್ತೆ ಮಾರ್ಗ. ವನ್ಯಜೀವಿ ತಾಣಕ್ಕೆ ಪ್ರಯಾಣಿಸುತ್ತಿರುವ ಪ್ರವಾಸಿಗರ ವಾಹನಗಳು. ದಟ್ಟ ಕಾನನದ ನಡುವೇ ಸ್ವಚ್ಛಂದವಾಗಿ ನಲಿದಾಡುತ್ತಿರುವ ವನ್ಯಜೀವಿ ಸಂಕುಲ. ಇದು ತಾಲೂಕಿನ ಬಂಡಿಪುರ ರಾಷ್ಟ್ರೀಯ ಉದ್ಯಾನವನ ದಲ್ಲಿ ಕಂಡು ಬಂದ ದೃಶ್ಯ-ಹೌದು ತಾಲೂಕಿನಿಂದ 15 ಕಿ.ಮೀ ದೂರದಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಕ್ರಿಸ್‍ಮಸ್ ರಜೆ ಹಾಗೂ ವರ್ಷಾಂತ್ಯದ ಹಿನ್ನೆಲೆಯಲ್ಲಿ ಪ್ರವಾಸಿ ಗರ ದಂಡೇ ಹರಿದು ಬರುತ್ತಿದೆ.

ಪ್ರತಿದಿನ ಬೆಳಿಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಬಂಡೀಪುರಕ್ಕೆ ಆಗಮಿಸುತ್ತಿರುವ ಪ್ರವಾಸಿಗರು ಬೆಳಿಗ್ಗೆ 7.30 ರಿಂದ 9.30ರವರೆಗೆ ಸಫಾರಿಗೆ ತೆರಳಿ ಹಸಿರು ಸೊಬಗಿನ ಜೊತೆ ಆನೆಗಳ ಹಿಂಡು, ಕಾಡೆಮ್ಮೆ, ಜಿಂಕೆ ಮತ್ತು ನವಿಲು ಸೇರಿ ದಂತೆ ವನ್ಯ ಮೃಗಗಳನ್ನು ಕಣ್ಣು ತುಂಬಿ ಕೊಳ್ಳುತ್ತಿದ್ದಾರೆ.

ಇದೇ ರೀತಿಯಾಗಿ ಸಂಜೆಯ 4.30ರ ಸಫಾರಿಗೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬಂಡೀಪುರದ ಸ್ವಾಗತ ಕಚೇರಿ ಮುಂಭಾಗದಲ್ಲಿರುವ ಟಿಕೆಟ್ ಕೌಂಟರ್‍ನ ಮುಂದೆ ಜಮಾಯಿಸಿ ಮಕ್ಕಳೊಂದಿಗೆ ಸಫಾರಿಗೆ ತೆರಳಿ ಪ್ರಕೃತಿಯ ಸವಿಯನ್ನು ಸವಿದು ಸಂಭ್ರಮಿಸುತ್ತಿದ್ದಾರೆ.ಪ್ರವಾಸಿಗರ ಸಂಖ್ಯೆ ಬೆಳಿಗ್ಗೆಯಿಂದಲೇ ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಸಫಾರಿ ವಾಹನಗಳನ್ನು ಸಮಯಕ್ಕೆ ಸರಿ ಯಾಗಿ ಕಳುಹಿಸುವುದರೊಂದಿಗೆ ಪ್ರವಾಸಿ ಗರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಪ್ರತಿ ದಿನವೂ ಪ್ರವಾಸಿಗರು ಆಗಮಿಸುವ ಈ ಉದ್ಯಾನವನದಲ್ಲಿ ಎಲ್ಲಿ ನೋಡಿ ದರಲ್ಲಿ ಹಸಿರು ಎದ್ದು ಕಾಣುತ್ತಿದೆ. ಅದ ರೊಂದಿಗೆ ಬೆಳಿಗ್ಗೆ ಹಾಗೂ ಸಂಜೆಯಾ ಗುತ್ತಿದ್ದಂತೆಯೇ ರಸ್ತೆಯ ಬದಿಯಲ್ಲಿ ಬೆಳೆದಿರುವ ಹಸಿರು ಹುಲ್ಲನ್ನು ಮೇಯಲು ಆಗಮಿಸುವ ಚುಕ್ಕಿ ಜಿಂಕೆಯನ್ನು ನೋಡಲು ಪ್ರವಾಸಿಗರು ಬಂಡೀಪುರಕ್ಕೆ ಮತ್ತೆ ಮತ್ತೆ ಬರಬೇಕು ಎನ್ನಿಸುವಂತಿದೆ.

‘ಬಂಡೀಪುರ ಉದ್ಯಾನವನದಲ್ಲಿನ ಸಫಾರಿಗೆ ತೆರಳುವುದು ಒಂದು ವಿಶೇಷ ಅನುಭವ. ಹಸಿರ ಸಿರಿಯಲ್ಲಿ ಮೈದುಂಬಿ ಕೊಂಡಿರುವ ಕಾಡನ್ನು ಮತ್ತು ಇಲ್ಲಿನ ಪ್ರಾಣಿಗಳನ್ನು ನೋಡುವುದು ಮನಸ್ಸಿಗೆ ಉಲ್ಲಾಸವನ್ನು ತರುತ್ತದೆ. ಹುಲಿ ದರ್ಶನ ಅದೃಷ್ಟ ಇದ್ದವರಿಗೆ ಮಾತ್ರ ಎನ್ನುವ ಮಾತಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮಳೆಯಾಗಿರುವುದ ರಿಂದ ಉದ್ಯಾನವನ ಹೆಚ್ಚು ಸಮೃದ್ಧ ವಾಗಿದೆ. ಇದನ್ನು ಕಣ್ತುಂಬಿಕೊಳ್ಳು ವುದೇ ಒಂದು ಭಾಗ್ಯ’ ಎಂದು ಪ್ರವಾಸಿಗ ಜಿ.ಎಸ್. ಗಣೇಶ್‍ಪ್ರಸಾದ್ ‘ಮೈಸೂರುಮಿತ್ರ’ನಿಗೆ ತಿಳಿಸಿದರು.

ಗೋಪಾಲನ ಸನ್ನಿಧಿಗೂ ಲಗ್ಗೆ: ಇದಲ್ಲದೇ ಸಮೀಪದಲ್ಲಿರುವ ಹಿಮ ವದ್ ಗೋಪಾಲಸ್ವಾಮಿ ಬೆಟ್ಟಕ್ಕೂ ಪ್ರವಾಸಿಗರು ತಂಡೋಪ ತಂಡವಾಗಿ ಲಗ್ಗೆ ಇಡುತ್ತಿದ್ದಾರೆ. ಸರದಿ ಸಾಲಿನಲ್ಲಿ ನಿಂತು ಹಿಮವದ್ ಗೋಪಾಲಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಕುಟುಂಬ ಸಮೇತರಾಗಿ ಆಗಮಿಸುತ್ತಿರುವ ಪ್ರವಾಸಿಗರು ಬಂಡೀಪುರ ಮತ್ತು ಮಧುಮಲೈ ಅರಣ್ಯ ಪ್ರದೇಶಗಳಿಗೂ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ 13 ವಲಯಗಳಲ್ಲೂ ಹಸಿರಿನಿಂದ ಕಂಗೊಳಿಸುತ್ತಿರುವ ಬಂಡೀಪುರದ ಅರಣ್ಯ ಮತ್ತು ಬೆಟ್ಟ ಗುಡ್ಡಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕ್ರಿಸ್‍ಮಸ್ ರಜೆಯ ಹಿನ್ನೆಲೆಯಲ್ಲಿ ಪ್ರತಿದಿನ ಬೆಳಿಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದು, ಅವರಿಗೆ ನಿರಾಶೆಯಾಗದಂತೆ ಸೂಕ್ತ ವಾಹನದ ವ್ಯವಸ್ಥೆ ಕಲ್ಪಿಸುವುದರೊಂದಿಗೆ ಸಫಾರಿಗೆ ತೆರಳಲು ಅನುಕೂಲ ಮಾಡಿಕೊಡಲಾಗಿದೆ. – ಅಂಬಾಡಿ ಮಾಧವ್, ಹುಲಿಯೋಜನೆ ನಿರ್ದೇಶಕ, ಬಂಡೀಪುರ.

Translate »