ಕಲರ್ ಗ್ರೇಡಿಂಗ್ ಕಾರಣಕ್ಕಾಗಿ ಕೊಡವ ಚಲನಚಿತ್ರ `ಪಾರಾಣೆ’ ಸೆನ್ಸಾರ್ ಬೋರ್ಡ್‍ನಿಂದ ತಿರಸ್ಕಾರ
ಕೊಡಗು

ಕಲರ್ ಗ್ರೇಡಿಂಗ್ ಕಾರಣಕ್ಕಾಗಿ ಕೊಡವ ಚಲನಚಿತ್ರ `ಪಾರಾಣೆ’ ಸೆನ್ಸಾರ್ ಬೋರ್ಡ್‍ನಿಂದ ತಿರಸ್ಕಾರ

December 29, 2018

ಮಡಿಕೇರಿ: ಕೊಡವ ಚಲನಚಿತ್ರ `ಪಾರಾಣೆ’ ಹಲವಾರು ರಾಷ್ಟ್ರೀಯ ಮತ್ತು ಅಂತಾ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನವಾಗಿ ದ್ದರೂ, ಮುಂಬರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುತ್ತಿಲ್ಲ.

ಬೆಂಗಳೂರಿನ ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಷನ್ (ಸಿಬಿಎಫ್‍ಸಿ) ಪ್ರಾದೇಶಿಕ ಕಚೇರಿ ಯಲ್ಲಿ ಐವರು ಸದಸ್ಯರು ಈ ಚಲನಚಿತ್ರ ವನ್ನು ವೀಕ್ಷಣೆ ಮಾಡಿದ್ದು, ಈ ಚಿತ್ರವು ಕಲರ್ ಗ್ರೇಡಿಂಗ್ ಹಾಗೂ ಅತೀ ಉದ್ದವಾದ ಶಾಟ್ಸ್ ಅನ್ನು ಹೊಂದಿದೆ ಎಂಬ ಕಾರಣಕ್ಕಾಗಿ ಸೆನ್ಸಾರ್ ಬೋರ್ಡ್ ಸರ್ಟಿಫಿಕೇಟ್ ನೀಡಲು ನಿರಾಕರಿಸಿದೆ.

ಅಘಾತಕಾರಿ ವಿಷಯವೆಂದರೆ, ಈ ಚಲನಚಿತ್ರ ವನ್ನು ವೀಕ್ಷಣೆ ಮಾಡಿದ ಐವರು ಸದಸ್ಯರಿಗೆ ಕೊಡವ ಭಾಷೆಯೇ ಗೊತ್ತಿಲ್ಲ. ಆದರೂ ಈ ಚಿತ್ರ ಚೆನ್ನಾಗಿಲ್ಲ, ಕಲರ್ ಗ್ರೇಡಿಂಗ್ ಹೊಂದಿದೆ ಎಂದು ಹೇಗೆ ಹೇಳುತ್ತಾರೆ. ಹಾಗೂ ಸೆನ್ಸಾರ್ ಮಂಡಳಿ ಸರ್ಟಿಫಿಕೇಟ್ ನೀಡಲು ಸಾಧ್ಯವಿಲ್ಲ ಎಂದು ಹೇಗೆ ನಿರ್ಧಾರ ತೆಗೆದುಕೊಂಡಿತು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಬೆಂಗಳೂರು ಅಂತಾ ರಾಷ್ಟ್ರೀಯ ಚಲನಚಿತ್ರೋತ್ಸವ ಹೋಗಲಿ ಬಿಡಿ, ಆದರೆ ಚಲನಚಿತ್ರ ನಿರ್ಮಾಪಕರಿಗೆ ಸಿಬಿಎಫ್‍ಸಿ ಸರ್ಟಿಫಿಕೇಟ್ ಇಲ್ಲದೆ ನ್ಯಾಷನಲ್ ಫಿಲಂ ಆವಾಡ್ರ್ಸ್‍ಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂಬುದು ತಮ್ಮ ಅಳಲು.
`ಪಾರಾಣೆ’ ಚಲನಚಿತ್ರ ನಿರ್ದೇಶಕ ಶ್ರೀಶೈಲ ಎಸ್. ನಾಯರ್, ಚಿತ್ರದ ಕಥೆ ಹೇಳುತ್ತಾ, ಪಾರಾಣೆ ಎಂಬುದು ಕೊಡಗಿನಲ್ಲಿರುವ ಒಂದು ಹಳ್ಳಿ. ಇಲ್ಲಿನ ಜನರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೇಗೆ ಹೋರಾಟ ಮಾಡುತ್ತಿದ್ದಾರೆ ಎಂಬುದು ಕಥೆಯ ಸಾರಾಂಶವಾಗಿದೆ. ಆಕ್ರಮಣಕಾರರು ವಾಣಿಜ್ಯೀ ಕರಣದ ಹೆಸರಿನಲ್ಲಿ ಕೊಡಗಿನ ಹಸಿರು ಪ್ರದೇಶ, ಕಾಡಿನ ಸಂಪತ್ತನ್ನು ಲೂಟಿ ಮಾಡುವುದಲ್ಲದೆ, ಪ್ರಕೃತಿಯನ್ನು ನಾಶ ಮಾಡಲು ಪ್ರಯತ್ನಿಸುತ್ತಿ ದ್ದಾರೆ. ಈ ಚಿತ್ರದಲ್ಲಿನ ಮುಖ್ಯಪಾತ್ರಗಳು ಆಕ್ರಮಣ ಕಾರರ ವಿರುದ್ಧ ದಂಗೆ ಹೇಳುವುದನ್ನು ಚಿತ್ರಿಸಿದೆ. ಈ ಚಿತ್ರವನ್ನು ಕೇವಲ 3 ಲಕ್ಷ ರೂ. ವೆಚ್ಚದಲ್ಲಿ ಚಿತ್ರೀ ಕರಿಸಲಾಗಿದೆ. ಈ ಚಿತ್ರದಲ್ಲಿ ಅಭಿನಯಿಸಿರುವವರು ಖ್ಯಾತ ನಟರಲ್ಲ. ಎಲ್ಲರೂ ಹೊಸಬರೇ. ಈ ಚಿತ್ರವು 1 ಗಂಟೆ 32 ನಿಮಿಷ ಅವಧಿಯದ್ದಾಗಿದೆ.
ನಿರ್ದೇಶಕ ನಾಯರ್ ಕೇರಳದವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈ ಚಿತ್ರದಲ್ಲಿ ಅಭಿನ ಯಿಸಿರುವವರು ಹೆಚ್ಚಿನದಾಗಿ ಪಾರಾಣೆ ಗ್ರಾಮದವ ರಾಗಿದ್ದು, ಚಿತ್ರವನ್ನು ಕೊಡಗು ಜಿಲ್ಲೆ ಸುತ್ತಮುತ್ತ ಸಿಂಕ್ ಸೌಂಡ್‍ನೊಂದಿಗೆ ಚಿತ್ರೀ ಕರಿಸಲಾಗಿದೆ. `ಪಾರಾಣೆ’ ಚಲನಚಿತ್ರ ಕಲ್ಕತ್ತಾ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಸರ್ಟಿ ಫಿಕೇಟ್ ಆಫ್ ಅಚೀವ್ ಮೆಂಟ್ ಪ್ರಶಸ್ತಿ ಪಡೆದು ಕೊಂಡಿದೆ. ಈ ಚಿತ್ರವು ಕೋಲ್ಕತ್ತಾ ಅಂತಾ ರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲೂ ಕೂಡ ಭಾಗವಹಿಸಿದ್ದು, ಗೋಲ್ಡನ್ ಗ್ರ್ಯಾಂಡ್ ಫಿಲಂ ಫೆಸ್ಟಿವಲ್, ರೆಡ್‍ವುಡ್ ಫಿಲಂ ಫೆಸ್ಟಿವಲ್ ಮತ್ತು ಯುರೇ ಸಿಯನ್ ಫಿಲಂ ಫೆಸ್ಟಿವಲ್‍ಗೆ ಆಯ್ಕೆಯಾಗಿದೆ.

“ಕೊಡವ ಭಾಷೆ ಚಲನಚಿತ್ರ ಚಲನಚಿತ್ರೋತ್ಸವ ದಲ್ಲಿ ಭಾಗವಹಿಸಿರುವುದು ಭಾರತದಲ್ಲೇ ಪ್ರಪ್ರಥಮ ವಾಗಿದೆ. ಇದರಿಂದ ಚಲನಚಿತ್ರ ತಂಡಕ್ಕೆ ತುಂಬಾ ಹರ್ಷ ತಂದಿದೆ. ಅಲ್ಲದೆ ಈ `ಪಾರಾಣೆ’ ಚಲನ ಚಿತ್ರವು ಇಂಡೋನೇಷ್ಯಾ ಫಿಲಂ ಫೆಸ್ಟಿವಲ್ ಮತ್ತು ಬರ್ಲಿನ್‍ನಲ್ಲಿ ನಡೆಯುವ ಚಿತ್ರೋತ್ಸವ ದಲ್ಲೂ ಪ್ರದರ್ಶನಗೊಳ್ಳಲು ನಾಮನಿರ್ದೇಶನ ಗೊಂಡಿದೆ’’ ಎಂದು ನಾಯರ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ `ಪಾರಾಣೆ’ ಯಶಸ್ವಿಯಾಗಿದ್ದು, ನಾಯರ್ ಅವರು ಬೆಂಗಳೂರಿನ ಸೆಂಟ್ರಲ್ ಬೋರ್ಡ್ ಆಫ್ ಸರ್ಟಿಫಿಕೇಷನ್ ಪ್ರಾದೇಶಿಕ ಕಚೇರಿಯನ್ನು ಸರ್ಟಿಫಿಕೇಟ್‍ಗಾಗಿ ಸಂಪರ್ಕಿಸಿದ್ದಾರೆ. “ಪ್ರಾದೇಶಿಕ ಅಧಿಕಾರಿ ಒಳ ಗೊಂಡಂತೆ ಐವರು ಸದಸ್ಯರು ಚಿತ್ರವನ್ನು ವೀಕ್ಷಣೆ ಮಾಡಿ, ಈ ಚಿತ್ರವು ಕೇವಲ 11 ಶಾಟ್ಸ್‍ಗಳನ್ನು ಹೊಂದಿದೆ ಎಂದು ಚಿತ್ರಕ್ಕೆ ಸಿಬಿಎಫ್‍ಸಿ ಸರ್ಟಿಫಿ ಕೇಟ್‍ಗೆ ಆಕ್ಷೇಪಣೆ ಮಾಡಿದ್ದಾರೆ. ನಟರ ಹತ್ತಿರದ ಶಾಟ್ಸ್‍ಗಳನ್ನು ಏಕೆ ಚಿತ್ರೀಕರಿಸಿಲ್ಲ ಎಂದು ನನ್ನನ್ನು ಕೇಳಿದರು’’ ಎಂದು ನಾಯರ್ ಹೇಳಿದ್ದಾರೆ.

ಕಲರ್ ಗ್ರೇಡಿಂಗ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸಿಬಿಎಫ್‍ಸಿ ಅಧಿಕಾರಿ ಮಾತನಾಡಿ, ಕೊಡಗು ಯಾಕೆ ಸುಂದರವಾಗಿ ಕಾಣುತ್ತಿಲ್ಲ ಎಂದಿದ್ದಕ್ಕೆ, ಈ ರೀತಿಯಾಗಿಯೇ ಚಲನಚಿತ್ರ ನಿರ್ಮಿಸಿದ್ದೇವೆ ಎಂದು ನಾಯರ್ ಹೇಳಿದರು. ಚಲನಚಿತ್ರಕ್ಕೆ ಸೆನ್ಸಾರ್ ಬೋರ್ಡ್ ಸರ್ಟಿಫಿಕೇಟ್ ನೀಡುವಾಗ ಯಾವ ನಿಯಮಗಳನ್ನು ಅನುಸರಿಸುತ್ತೀರಿ. ಆ ಕಾನೂನು ಪುಸ್ತಕವನ್ನು ತೋರಿಸಿ ಎಂದು ನಾಯರ್ ಅಧಿಕಾರಿಗಳನ್ನು ಒತ್ತಾಯಿಸಿದರು.

ಬೆಂಗಳೂರಿನ ಸಿಬಿಎಫ್‍ಸಿ ಪ್ರಾದೇಶಿಕ ಕಚೇರಿಯು ಈ ಚಲನಚಿತ್ರಕ್ಕೆ ಸರ್ಟಿಫಿಕೇಟ್ ನೀಡಲು ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಮುಂಬೈನಲ್ಲಿರುವ ಸಿಬಿಎಫ್‍ಸಿ ಕೇಂದ್ರ ಕಚೇರಿಗೆ ಮೇಲ್ಮನವಿ ಸಲ್ಲಿಸು ವುದಾಗಿ ನಾಯರ್ ತಿಳಿಸಿದ್ದಾರೆ. ಇದಕ್ಕೆ ಸುಮಾರು 50,000 ರಿಂದ 60,000 ರೂ.ಗಳ ಅಗತ್ಯವಿದೆ. “ಈ ಚಲನಚಿತ್ರವನ್ನು ಕೇವಲ 3 ಲಕ್ಷ ರೂ.ಗಳಲ್ಲಿ ಚಿತ್ರೀಕರಿಸಲಾಗಿದ್ದು, ಸರ್ಟಿಫಿಕೇಟ್‍ಗಾಗಿ ಮೇಲ್ಮನವಿ ಸಲ್ಲಿಸಲು ರೂ. 50 ರಿಂದ 60 ಸಾವಿರ ರೂ. ವ್ಯಯ ಮಾಡಲು ಯಾವುದೇ ಮೂಲ ಗಳಿಲ್ಲ. ಈ ಕಾರಣಕ್ಕಾಗಿ ನ್ಯಾಯಾಲಯದ ಮೊರೆ ಹೋಗುವುದಾಗಿ’’ ಅವರು ತಿಳಿಸಿದ್ದಾರೆ.

ಸಿಬಿಎಫ್‍ಸಿ ಮಾರ್ಗಸೂಚಿ ತಿಳಿದಿರುವ ವಕೀಲರ ಪ್ರಕಾರ, ಯಾವುದೇ ಚಲನಚಿತ್ರ ಅಸಭ್ಯ, ಕೋಮು ಗಲಭೆಗೆ ಪ್ರಚೋದಿಸುವುದು ಅಥವಾ ಸಾರ್ವಭೌಮತ್ವಕ್ಕೆ ಧಕ್ಕೆಯಾದಲ್ಲಿ ಅಥವಾ ಭಾರತದ ಏಕತೆ ಅಥವಾ ಅನಗತ್ಯವಾಗಿ ಹಿಂಸಾತ್ಮಕ ದೃಶ್ಯಗಳನ್ನು ಚಿತ್ರೀಕರಿಸಿದ್ದರೆ ಅಂತಹ ಚಲನ ಚಿತ್ರಕ್ಕೆ ಸರ್ಟಿಫಿಕೇಟ್ ನಿರಾಕರಿಸಬಹುದು. ಆದರೆ ಚಲನಚಿತ್ರವು ಕಲರ್ ಗ್ರೇಡಿಂಗ್ ಹೊಂದಿದೆ ಮತ್ತು ಉದ್ದವಾದ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ ಎಂಬ ಕಾರಣಕ್ಕೆ ಸಿಬಿಎಫ್‍ಸಿ ಸರ್ಟಿಫಿಕೇಟ್ ನೀಡು ವುದಿಲ್ಲ ಎಂದು ಹೇಳುವ ಅಧಿಕಾರ ಇಲ್ಲ. ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರಾಕರಿಸುವ ಕೃತ್ಯ ಎಂದು ಚಲನಚಿತ್ರ ನಿರ್ಮಾಪಕ ಮತ್ತು ವಕೀಲರು ಹೇಳಿದ್ದಾರೆ.

Translate »