ಹೆಣ್ಣಾನೆ ಕಳೆಬರ ಪತ್ತೆ
ಚಾಮರಾಜನಗರ

ಹೆಣ್ಣಾನೆ ಕಳೆಬರ ಪತ್ತೆ

June 17, 2018

ಚಾಮರಾಜನಗರ:  ತಾಲೂಕಿನ ಪುಣಜನೂರು ಅರಣ್ಯ ವ್ಯಾಪ್ತಿಯ ಬೂದಿಪಡಗ ಅರಣ್ಯ ವಲಯದ ಚಿನ್ನಾರೆ ಕ್ಯಾಂಪ್‍ಗೆ ಹೋಗುವ ರಸ್ತೆಯಲ್ಲಿ ಸುಮಾರು 15 ವರ್ಷದ ಹೆಣ್ಣಾನೆಯ ಕಳೆಬರ ಪತ್ತೆಯಾಗಿದೆ.

ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತು ತಿರುಗುವ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಸಿಬ್ಬಂದಿ ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ವೈದ್ಯಾಧೀಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದ್ದು, ಅನಾರೋಗ್ಯದಿಂದ ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ನಂತರ ಸಾವನ್ನಪ್ಪಿದ್ದ ಸ್ಥಳದಲ್ಲೇ ಆನೆ ಕಳೆಬರ ದಹಿಸಲಾಯಿತು.

Translate »