ಬ್ಯಾಂಕ್‍ನಿಂದ ನೋಟಿಸ್: ನಾಳೆ ರೈತ ಸಂಘದಿಂದ ಪ್ರತಿಭಟನೆ
ಚಾಮರಾಜನಗರ

ಬ್ಯಾಂಕ್‍ನಿಂದ ನೋಟಿಸ್: ನಾಳೆ ರೈತ ಸಂಘದಿಂದ ಪ್ರತಿಭಟನೆ

June 17, 2018

ಚಾಮರಾಜನಗರ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರೂ, ಜಿಲ್ಲೆಯ ಹಲವು ಬ್ಯಾಂಕ್‍ಗಳು ಕೃಷಿ ಸಾಲ ಪಡೆದ ರೈತರ ಚಿನ್ನಾಭರಣವನ್ನು ಜೂ.20ರಂದು ಹರಾಜು ನಡೆಸುತ್ತಿವೆ. ತಕ್ಷಣ ಸರ್ಕಾರ ಸಾಲ ಮನ್ನಾ ಆದೇಶ ನೀಡಿ ಋಣಮುಕ್ತ ಪತ್ರ ನೀಡಬೇಕೆಂದು ಆಗ್ರಹಿಸಿ ಜೂ. 18ರಂದು ರೈತ ಸಂಘದಿಂದ ಜಿಲ್ಲಾಡಳಿತದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ವಿಭಾಗೀಯ ಕಾರ್ಯದರ್ಶಿ ಎ.ಎಂ.ಮಹೇಶ್‍ಪ್ರಭು ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತ ನಾಡಿದರು. ರೈತರ ಎಲ್ಲಾ ಸಾಲಮನ್ನಾ ಮಾಡು ವಂತೆ ಒತ್ತಾಯಿಸಿ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ರೈತರ ಸಭೆ ಕರೆದು ರೈತರ ಸಾಲ ಮನ್ನಾ ಮಾಡಲು ಬದ್ಧನಾಗಿz್ದÉೀನೆ. ರೈತರ ಮನೆ ಬಾಗಿಲಿಗೆ ಋಣಮುಕ್ತ ಪತ್ರ ತಲುಪಿಸುವುದಾಗಿ ಹೇಳಿ ದ್ದರು. ಆದರೆ ಇದುವರೆಗೂ ಯಾವುದೇ ಋಣಮುಕ್ತ ಪತ್ರ ಬಂದಿಲ್ಲ. ಬದಲಾಗಿ ರೈತರ ಮನೆ ಬಾಗಿಲಿಗೆ ಬ್ಯಾಂಕ್‍ಗಳಿಂದ ಸಾಲ ಕಟ್ಟುವಂತೆ ನೋಟಿಸ್ ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಸಾಲ ಮನ್ನಾ ಮಾಡದೇ ಇರುವುದರಿಂದ ರೈತರು ಅಡವಿಟ್ಟಿದ್ದ ಚಿನ್ನವನ್ನು ಬ್ಯಾಂಕ್‍ಗಳು ಹರಾಜು ಹಾಕುವುದಾಗಿ ನೋಟಿಸ್ ನೀಡಿದ್ದಾರೆ. ಆದ್ದರಿಂದ ಸಮ್ಮಿಶ್ರ ಸರ್ಕಾರ ರೈತರ ಎಲ್ಲಾ ಸಾಲ ಮನ್ನಾ ಮಾಡ ಬೇಕು. ಬ್ಯಾಂಕ್‍ಗಳಿಂದ ನೋಟಿಸ್ ಬಾರದಂತೆ ನೋಡಿ ಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ರೈತರು ಸಮಾವೇಶಗೊಂಡು ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತಕ್ಕೆ ತೆರಳಿ ಪ್ರತಿಭÀಟನೆ ನಡೆಸಲಾಗುವುದು. ಜಿಲ್ಲಾಡಳಿತ ಇದಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನೂ ಕರೆಯಿಸಬೇಕು ಎಂದು ಒತ್ತಾಯಿಸಿದರು.

ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ಎಲ್ಲಾ ಸಾಲ ಮನ್ನಾ ಮಾಡಬೇಕು. ಬ್ಯಾಂಕ್‍ಗಳು ನಡೆಸುತ್ತಿರುವ ಪ್ರಕ್ರಿಯೆ ನಿಲ್ಲಿಸುವಂತೆ ಆದೇಶಿಸಬೇಕು. ಇಲ್ಲದಿದ್ದರೆ ರಾಜ್ಯ ರೈತ ಸಂಘದ ಸಮಿತಿ ಹಾಗೂ ಜಿಲ್ಲಾ ರೈತ ಸಂಘದಿಂದ ಬೆಂಗ ಳೂರಿನ ರಾಜಭವನಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.

ರಾಜ್ಯ ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಎಚ್.ಸಿ.ಮಹೇಶ್‍ಕುಮಾರ್ ಮಾತನಾಡಿ, ರೈತರ ಸಾಲ ಮನ್ನಾವನ್ನು 2009 ಇಸವಿಯಿಂದ ಮನ್ನಾ ಮಾಡುವುದಾಗಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಆದರೆ 2000ನೇ ಇಸವಿಯಿಂದಲೂ ಸಾಲ ಮನಾ ಮಾಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿಗೌಡನಪುರ ಸಿದ್ದರಾಜು, ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಕಂಠಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಶಾಂತಮಲ್ಲಪ್ಪ ಇದ್ದರು.

Translate »