ನಾಳೆ ಕೌನ್ಸಿಲಿಂಗ್
ಮೈಸೂರು

ನಾಳೆ ಕೌನ್ಸಿಲಿಂಗ್

June 17, 2018

ಮೈಸೂರು:  ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ದಿನಾಂಕ 14-03-2018 ಮತ್ತು 15-03-2018 ರಂದು ನಡೆದ ಬಿ.ಆರ್.ಪಿ, ಸಿ.ಆರ್.ಪಿ ಮತ್ತು ಇ.ಸಿ.ಒ.ಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅರ್ಹತೆ ಗಳಿಸಿರುವ ಆಯ್ಕೆ ಪಟ್ಟಿಯಲ್ಲಿ ರುವ ಶಿಕ್ಷಕರುಗಳಿಗೆ ಸುತ್ತೋಲೆಯ ಆದೇಶದಂತೆ ಜಿಲ್ಲೆಯಲ್ಲಿ ಖಾಲಿ ಇರುವ ಸಿಆರ್‍ಪಿ, ಬಿಆರ್‍ಪಿ ಮತ್ತು ಇಸಿಒ ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸಲು ಜೂ. 18ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ, ಡಿ.ಸುಬ್ಬಯ್ಯ ರಸ್ತೆ, ಮೈಸೂರು ಇಲ್ಲಿ ಕೌನ್ಸಿಲಿಂಗ್ ನಡೆಯಲಿದೆ. ಅರ್ಹತಾ ಪಟ್ಟಿಯನ್ನು ಆಯಾ ತಾಲೂಕು ಬಿಇಒ/ಬಿಆರ್‍ಸಿ ಕಚೇರಿ ನಾಮಫಲಕ ಹಾಗೂ ಜಿಲ್ಲಾ ಕಚೇರಿಯಲ್ಲಿ ಪ್ರಕಟಿಸಲಾಗಿದೆ. ಪಟ್ಟಿಯಲ್ಲಿರುವ ಅರ್ಹ ಶಿಕ್ಷಕರು ಕೌನ್ಸಿಲಿಂಗ್‍ಗೆ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

Translate »