ಇಂದು ಶಿಕ್ಷಕರ ಕೌನ್ಸಿಲಿಂಗ್
ಮೈಸೂರು

ಇಂದು ಶಿಕ್ಷಕರ ಕೌನ್ಸಿಲಿಂಗ್

July 20, 2018

ಮೈಸೂರು: ಇತ್ತೀಚೆಗೆ ನಡೆದ ಸಿಆರ್‍ಪಿ, ಬಿಆರ್‍ಪಿ (ಪ್ರಾಥಮಿಕ ಮತ್ತು ಪ್ರೌಢ), ಇಸಿಒ (ಪ್ರಾಥಮಿಕ ಮತ್ತು ಪ್ರೌಢ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅರ್ಹತೆ ಗಳಿಸಿ ಆಯ್ಕೆ ಪಟ್ಟಿಯಲ್ಲಿರುವ ಶಿಕ್ಷಕರುಗಳಿಗೆ ನಾಳೆ (ಜು.20) ಬೆಳಿಗ್ಗೆ 10 ಗಂಟೆಗೆ ಡಿ.ಸುಬ್ಬಯ್ಯ ರಸ್ತೆಯಲ್ಲಿರುವ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಯಲ್ಲಿ ಕೌನ್ಸಿಲಿಂಗ್ ನಡೆಸಲಾಗುವುದು.

ಮಧ್ಯಾಹ್ನ 2.30 ಗಂಟೆಗೆ ಸಿಆರ್‍ಪಿ, ಬಿಆರ್‍ಪಿ (ಪ್ರಾಥಮಿಕ ಮತ್ತು ಪ್ರೌಢ), ಇಸಿಒ (ಪ್ರಾಥಮಿಕ ಮತ್ತು ಪ್ರೌಢ) ಅವರಿಗೆ ಹೊರ ಹೋಗುವ ಕೌನ್ಸಿಲಿಂಗ್ ಹಮ್ಮಿಕೊಳ್ಳಲಾಗಿದೆ. ಅರ್ಹತಾ ಪಟ್ಟಿಯನ್ನು ಆಯಾ ತಾಲೂಕು ಬಿಇಒ/ಬಿಆರ್‍ಸಿ ಕಚೇರಿ ನಾಮಫಲಕ ಹಾಗೂ ಜಿಲ್ಲಾ ಕಚೇರಿಯಲ್ಲಿ ಪ್ರಕಟಿಸಲಾಗಿದೆ. ಪಟ್ಟಿಯಲ್ಲಿರುವ ಅರ್ಹ ಶಿಕ್ಷಕರು ತಪ್ಪದೇ ಕೌನ್ಸಿಲಿಂಗ್‍ಗೆ ಹಾಜರಾಗಲು ಕೋರಲಾಗಿದೆ.

Translate »