ಬೇಗೂರು: ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಸಂಪೂರ್ಣ ಬಹುಮತ ದೊರಕಿದೆ.
15 ಸದಸ್ಯ ಬಲದ ಗ್ರಾಮಪಂಚಾಯಿತಿ ಹಾಲಿ ಅಧ್ಯಕ್ಷ ಬಿ.ಎಸ್.ಚೇತನ್ ಅವರು ಗ್ರಾಮಪಂಚಾಯಿತಿಗೆ ಬರುವ ಯಾವುದೇ ಅನುದಾನ ವಿತರಣೆಯಲ್ಲಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಚೇತನ್ ಸ್ವಜನಪಕ್ಷಪಾತ ಮಾಡಿ ಆಡಳಿತ ದುರು ಪಯೋಗಮಾಡಿಕೊಂಡಿದ್ದಾರೆ ಎಂದು ಆರೋಪಿಸಿ 12 ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಲು ಉಪವಿಭಾಗಾ ಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ ಉಪ ವಿಭಾ ಗಾಧಿಕಾರಿ ಅ.5 ರ ಮಧ್ಯಾಹ್ನ 12 ಗಂಟೆಗೆ ಶುಕ್ರವಾರ ಸಭೆ ಕರೆದಿದ್ದರು.
ಈ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಚೇತನ್ ಉಪಾಧ್ಯಕ್ಷೆ ಹಾಗೂ ಇನ್ನೊಬ್ಬ ಸದಸ್ಯರು ಗೈರುಹಾಜರಾಗಿ ದ್ದರು. ಉಪವಿಭಾಗಾಧಿಕಾರಿ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಉಳಿದ 12 ಸದಸ್ಯರು ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ಸೂಚಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿ ಗಳಿಗೆ ವರದಿ ಸಲ್ಲಿಸುವುದಾಗಿ ಎಸಿ ಹೇಳಿದರು. ಈ ಸಂದರ್ಭದಲ್ಲಿ ಪಿಡಿಒ ಶಿವಸ್ವಾಮಿ, ಬೇಗೂರು ನಾಡಕಚೇರಿಯ ಪ್ರಭಾರ ಉಪತಹಸೀಲ್ದಾರ್ ಸೇರಿದಂತೆ ಸದಸ್ಯರು ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು. ಬೇಗೂರು ಗ್ರಾಪಂ ಅಧ್ಯಕ್ಷ ಉಪಾ ಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಸದಸ್ಯರು ಹೊರಗೆ ಬಂದು ವಿಜಯೋತ್ಸವ ಆಚರಿಸಿದರು.