ಜನರನ್ನು ಸ್ವಾವಲಂಬಿಗಳನ್ನಾಗಿಸುತ್ತಿರುವ ಧರ್ಮಸ್ಥಳ ಸಂಸ್ಥೆ
ಚಾಮರಾಜನಗರ

ಜನರನ್ನು ಸ್ವಾವಲಂಬಿಗಳನ್ನಾಗಿಸುತ್ತಿರುವ ಧರ್ಮಸ್ಥಳ ಸಂಸ್ಥೆ

October 8, 2018

ಗುಂಡ್ಲುಪೇಟೆ:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ತಾಲೂಕಿನಾದ್ಯಾಂತ ಮಹಿಳೆಯರು ಮತ್ತು ಪುರುಷರನ್ನು ಸಂಘಟಿಸಿ ಅವರಲ್ಲಿ ಉಳಿತಾಯ ಮನೋಭಾವ ಬೆಳೆಸಿ ಆರ್ಥಿಕ ನೆರವನ್ನು ನೀಡುವುದ ರೊಂದಿಗೆ ಅವರನ್ನು ಸ್ವಾವಲಂಬಿಗಳನ್ನಾಗಿ ಸುತ್ತಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಿದ್ದ ಜನ ಜಾಗೃತಿ ಜಾಥಾ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ಯೋಜನೆಯು ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ಜಾಥಾ ಹಾಗೂ ಸಾಮೂಹಿಕ ಶ್ರೀಸತ್ಯ ನಾರಾಯಣ ಪೂಜೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಮದ್ಯ ವರ್ಜನ ಶಿಬಿರದಿಂದ ಚಟಮುಕ್ತರಾಗಿ ಉತ್ತಮವಾದ ಜೀವನವನ್ನು ನಡೆಸು ತ್ತಿರುವ ಜನರು ತಮ್ಮ ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ಒಳ್ಳೆಯ ರೀತಿ ಯಲ್ಲಿ ಗುರುತಿಸಿಕೊಳ್ಳುತ್ತಿದ್ದು, ಅಭಿವೃದ್ಧಿ ಯನ್ನು ಹೊಂದಿರುತ್ತಾರೆ. ತಾವು ಬದ ಲಾಗುವುದರ ಜೊತೆಗೆ ಮದ್ಯವರ್ಜನ ಶಿಬಿರಕ್ಕೆ ಶಿಬಿರಾರ್ಥಿಗಳನ್ನು ಸೇರಿಸಿ ಅವರು ಬದಲಾವಣೆಯಾಗಲು ಮಾರ್ಗದರ್ಶಕ ರಾಗಿರುವುದು ಉತ್ತಮ ಬೆಳವಣಿಗೆ ಯಾಗಿದೆ ಎಂದರು.ಉದ್ಘಾಟನೆಯನ್ನು ನೆರವೇರಿಸಿದ ಶಾಸಕ ಸಿ.ಎಸ್.ನಿರಂಜನಕುಮಾರ್ ಮಾತ ನಾಡಿ, ಪ್ರಗತಿ ಬಂಧು ಸದಸ್ಯರಿಗೆ ಸಾಲ ನೀಡು ವುದರ ಜೊತೆಗೆ ಕೃಷಿ ಹಾಗೂ ಯಂತ್ರೋ ಪಕರಣ ಮತ್ತು ಹೈನುಗಾರಿಕೆ ಮಾಡಿದ ಫಲಾನುಭಗಳಿಗೆ ಅನುದಾನ ನೀಡುತ್ತಿರು ವುದು ಉತ್ತಮಾವಾದ ಕಾರ್ಯ. ಈ ಸಂಸ್ಥೆಯು ಶಾಶ್ವತ ಅಭಿವೃದ್ಧಿಗೆ ಸಮಗ್ರ ಯೋಜನೆ ಗಳನ್ನು ಹಾಕಿಕೊಂಡು ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದ್ದು, ಸಾಮಾನ್ಯ ಜನತೆಗೆ ಹೆಚ್ಚಿನ ಉಪ ಯೋಗವಾಗಿದೆ ಎಂದರು.

ನೇತೃತ್ವವನ್ನು ವಹಿಸಿದ್ದ ಪಡಗೂರು ಅಡವಿ ಮಠಾಧ್ಯಕ್ಷ ಶ್ರೀ ಶಿವಲಿಂಗೇಂದ್ರ ಸ್ವಾಮೀಜಿ ಮಾತನಾಡಿ, ಧರ್ಮಸ್ಥಳದ ಡಾ.ವೀರೇಂದ್ರ ಹೆಗಡೆಯವರು ರಾಜ್ಯಾ ದ್ಯಂತ ಸದಸ್ಯರನ್ನು ಸಂಘಟಿಸಿ ಅವರಿಗೆ ಅನುಕೂಲವಾಗುವಂತೆ ಸಮಗ್ರ ಯೋಜನೆ ಗಳನ್ನು ಹಾಕಿಕೊಂಡು ಕಳೆದ 35 ವರ್ಷ ಗಳಿಂದ ಉತ್ತಮವಾದ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದ್ದಾರೆ. ಈ ಸಂಸ್ಥೆಯು ಬರಿ ಹಣಕಾಸು ವ್ಯವಹಾರ ಮಾಡದೆ ಸಮುದಾಯ ಹಾಗೂ ರೈತ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ಶಿವಪ್ರಸಾದ್, ಜಿಪಂ ಸದಸ್ಯ ಕೆ.ಎಸ್ ಮಹೇಶ್, ಸರ್ಕಲ್ ಇನ್ಸ್ ಪೆಕ್ಟರ್ ಎಚ್.ಎನ್. ಬಾಲಕೃಷ್ಣಪ್ರಸಾದ್, ಮುಖಂಡರಾದ ಪ್ರಸಾದ್, ಶ್ರೀನಿವಾಸ್, ಕೆಂಪರಾಜು, ಬಸವರಾಜಪ್ಪ, ಮಹೇಶ್, ಮಲ್ಲೇಶ್, ಪ್ರಭಾಕರ್, ನಾಗೇಶ್ ಸೇರಿ ದಂತೆ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.

Translate »