ಮೂವರ ಆತ್ಮಹತ್ಯೆ ಯತ್ನಕ್ಕೂ ನನಗೂ ಸಂಬಂಧ ಇಲ್ಲ
ಚಾಮರಾಜನಗರ

ಮೂವರ ಆತ್ಮಹತ್ಯೆ ಯತ್ನಕ್ಕೂ ನನಗೂ ಸಂಬಂಧ ಇಲ್ಲ

October 8, 2018

ಚಾಮರಾಜನಗರ:  ತಾಲೂಕಿನ ಬೇಡರಪುರ ಗ್ರಾಮದ ಮಲ್ಲಯ್ಯ ಅವರ ಕುಟುಂಬ ಮೈಮೇಲೆ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ದ್ದಕ್ಕೂ ನನಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಅವರು ಮಾಡಿರುವ ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರ ವಾದದ್ದು ಎಂದು ಅದೇ ಗ್ರಾಮದ ರೈತ ಎಂ.ಶಿವಪ್ಪ ಸ್ಪಷ್ಟನೆ ನೀಡಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಭವನದಲ್ಲಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಬೇಡರಪುರ ಗ್ರಾಮದ ಸರ್ವೇ ನಂ.33/2 ರಲ್ಲಿ ನನ್ನ ಸ್ವಾಧೀನ ಬಂಧದಲ್ಲಿ 4 ಎಕರೆ ಜಮೀನಿದೆ. 1973 ರಿಂದಲೂ ನಾನು ಆ ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಪೈಕಿ 30 ಗುಂಟೆ ಜಮೀನನ್ನು ದರ ಖಾಸ್ತು ಮಂಜೂರು ಮಾಡಿಕೊಡಲಾ ಗಿದೆ. ಈ ಮಂಜೂರಾದ ಜಮೀನಿನ ಜೊತೆ ಉಳಿದ ಜಮೀನನ್ನೂ ಸಹ ವ್ಯವಸಾಯ ಮಾಡುತ್ತಿದ್ದೇನೆ. 1999ರಲ್ಲಿ ಸಾಗುವಳಿ ನೀಡುವಂತೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ದ್ದೇನೆ ಎಂದು ಶಿವಪ್ಪ ದಾಖಲೆ ಸಮೇತ ಸ್ಪಷ್ಟಪಡಿಸಿದರು. ಸೆ.28ರಂದು ನಾನು ಜಮೀನಿನಲ್ಲಿ ಟ್ರಾಕ್ಟರ್‍ನಲ್ಲಿ ಉಳುಮೆ ಮಾಡುವಾಗ ಮಲ್ಲಯ್ಯನವರ ಕುಟುಂಬ ನನ್ನೊಂದಿಗೆ ಜಗಳವಾಡಿತು. ಈ ಬಗ್ಗೆ ನಾನು ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ದೂರು ನೀಡಿದ್ದೇನೆ. ಅವರ ಕುಟುಂ ಬದವರಿಂದಲೇ ನನಗೆ ಕಿರುಕುಳ ಆಗು ತ್ತಿದೆ. ನಾನು ಅವರ ಕುಟುಂಬಕ್ಕೆ ಯಾವುದೇ ರೀತಿಯ ಕಿರುಕುಳ ನೀಡಿಲ್ಲ. ಅವರ ಆರೋ ಪದಲ್ಲಿ ಸತ್ಯಾಂಶ ಇಲ್ಲ ಎಂದರು.

ಗ್ರಾಮದ ಮಹದೇವಸ್ವಾಮಿ ಎಂಬಾತ ನನ್ನನ್ನು ಹೆದರಿಸಿ, ಜಮೀನು ಹೊಡೆಯಲು ಸಂಚು ಹಾಕುತ್ತಿದ್ದಾನೆ. ಆತನ ಕುಮ್ಮಕ್ಕಿ ನಿಂದಲೇ ಮಲ್ಲಯ್ಯ ಕುಟುಂಬ ಆತ್ಮ ಹತ್ಯೆಗೆ ಯತ್ನಿಸಿದೆ ಎಂದು ಆರೋಪಿಸಿದ ಎಂ.ಶಿವಪ್ಪ, ಜಿಲ್ಲಾಧಿಕಾರಿಗಳು ಹಾಗೂ ಎಸ್‍ಪಿ ಅವರು ದಾಖಲೆಗಳನ್ನು ಪರಿ ಶೀಲಿಸಿ ನನಗೆ ನ್ಯಾಯ ದೊರಕಿಸಿ ಕೊಡುವಂತೆ ಕಣ್ಣೀರು ಹಾಕಿದರು.
ತಾಪಂ ಮಾಜಿ ಅಧ್ಯಕ್ಷ ರಾಜಗೋಪಾಲ್, ಮುಖಂಡ ಶ್ರೀನಿವಾಸ್ ಸುದ್ದಿಗೋಷ್ಠಿ ಯಲ್ಲಿ ಹಾಜರಿದ್ದರು.

Translate »